Asianet Suvarna News Asianet Suvarna News

ಬಿರುಬಿಸಿಲು ದೇಹ ಮಾತ್ರವಲ್ಲ,ಜೇಬನ್ನೂ ಸುಡುತ್ತಿದೆ;ಆಹಾರ ಪದಾರ್ಥಗಳ ಬೆಲೆಯೇರಿಕೆಗೆ ಬಿಸಿ ಗಾಳಿಯೇ ಕಾರಣನಾ?

ಬಿಸಿಲಿನ ತಾಪ ದೇಹವನ್ನು ಮಾತ್ರವಲ್ಲ, ಜೇಬನ್ನು ಕೂಡ ಸುಡುತ್ತಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರೋದಕ್ಕೆ ಬಿಸಿ ಗಾಳಿಯೇ ಕಾರಣನಾ? ತಜ್ಞರು ಏನ್ ಹೇಳ್ತಾರೆ?

Prices Going Upwards What To Know About The Relation Between Heatwave And Food Inflation anu
Author
First Published May 15, 2024, 4:12 PM IST

ನವದೆಹಲಿ (ಮೇ 15): ದೇಶದಲ್ಲಿ ಬೇಸಿಗೆಯ ಬಿರು ಬಿಸಿಲು ದೇಹವನ್ನು ಮಾತ್ರವಲ್ಲ, ಜನರ ಜೇಬನ್ನು ಕೂಡ ಸುಡುತ್ತಿದೆ. ಹಾಗಾದ್ರೆ ಬಿಸಿ ಗಾಳಿಗೂ ಆಹಾರ ಪದಾರ್ಥಗಳ ಬೆಲೆಯೇರಿಕೆಗೂ ಸಂಬಂಧವಿದೆಯಾ? ಇಂಥದೊಂದು ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ. ಈಗಾಗಲೇ ಆಹಾರ ಹಣದುಬ್ಬರ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದು ಮೇ ಹಾಗೂ ಜೂನ್ ನಲ್ಲಿ ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ಐಸಿಆರ್ ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೆಚ್ಚುತ್ತಿರುವ ಬಿಸಿಗಾಳಿಯ ಭೀತಿ ಮುಂದಿನ ದಿನಗಳಲ್ಲಿ ಬೇಗ ಹಾಳಾಗುವ ಪದಾರ್ಥಗಳ ಬೆಲೆಯಲ್ಲಿ ಇನ್ನಷ್ಟು ಏರಿಕೆಗೆ ಕಾರಣವಾಗುವ ನಿರೀಕ್ಷೆಯಿದೆ. ಇದರಿಂದ ಬೆಲೆಯೇರಿಕೆಯ ಬಿಸಿ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದ್ದು, ಜನರ ಜೇಬಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಆತಂಕವನ್ನು ಅದಿತಿ ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ಕಾರಣದಿಂದ ಏರಿಕೆಯ ಹಾದಿಯಲ್ಲಿರುವ ಬೇಗ ಹಾಳಾಗುವ ವಸ್ತುಗಳ ಬೆಲೆ ಮುಂದಿನ ಎರಡು ತಿಂಗಳಲ್ಲಿ ಮತ್ತಷ್ಟು ಹೆಚ್ಚಲಿದ್ದು, ಆಹಾರ ಹಣದುಬ್ಬರ ಏರಿಕೆಯಾಗಲಿದೆ ಎಂದು ಅದಿತಿ ತಿಳಿಸಿದ್ದಾರೆ.

'ಬೇಸಿಗೆಯ ಹಿನ್ನೆಲೆಯಲ್ಲಿ ಬೇಗನೆ ಹಾಳಾಗುವಂತಹ ವಸ್ತುಗಳ ಬೆಲೆ ಮೇಲ್ಮುಖವಾಗಿ ಚಲಿಸುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಇವುಗಳ ಬೆಲೆಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಇನ್ನು ಈ ವರ್ಷದ ಜುಲೈ-ಆಗಸ್ಟ್ ನಲ್ಲಿ ಈ ವಸ್ತುಗಳ ಬೆಲೆ ತಾತ್ಕಾಲಿಕವಾಗಿ ಇಳಿಕೆ ಕಾಣಲಿದೆ ಎಂದು ನಾಯರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಅತ್ಯಧಿಕ ಮೂಲ ಬೆಲೆ ಜುಲೈ ಹಾಗೂ ಆಗಸ್ಟ್ ನಲ್ಲಿ ಪರಿಣಾಮ ಬೀರಲಿವೆ. ಮುಂದಿನ ತಿಂಗಳುಗಳಲ್ಲಿ ಬೆಲೆಗಳು ಮಳೆಯನ್ನು ಆಧರಿಸಿವೆ ಕೂಡ. 

ಬೆಂಗಳೂರಿನ ತರಕಾರಿ ಅಂಗಡಿಗಳಲ್ಲಿ ಹೆಚ್ಚುತ್ತಿದೆ ವಿಶಾಲ ಕಣ್ಣಿನ ಮಹಿಳೆಯ ಫೋಟೋ, ಇದೇನು ದೃಷ್ಠಿ ಬೊಂಬೆಯೇ?

ಮಂಗಳವಾರ (ಮೇ 14) ಬಿಡುಗಡೆಯಾದ ಸಗಟು ಬೆಲೆ ಸೂಚ್ಯಂಕ (ಡಬ್ಲಪಿಐ) ಆಧರಿತ ಆಹಾರ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ.7.74 ತಲುಪಿದೆ. ಇನ್ನು ಚಿಲ್ಲರೆ ಆಹಾರ ಹಣದುಬ್ಬರಕೂಡ ಏಪ್ರಿಲ್ ತಿಂಗಳಲ್ಲಿ ಶೇ.8.70ರಲ್ಲಿದೆ. ಅದೇ ಕಳೆದ ವರ್ಷ ಅಂದ್ರೆ 2023ರ ಏಪ್ರಿಲ್ ನಲ್ಲಿ ಇದು ಶೇ.3.84ರಷ್ಟಿತ್ತು.

ಆಹಾರ ಹಣದುಬ್ಬರದ ಪಥವನ್ನು ನಿರ್ಧರಿಸುವಲ್ಲಿ ಹವಾಮಾನ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಳೆದ ವರ್ಷ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ ಹಾಗೂ ಈ ವರ್ಷ ದೇಶದ ವಿವಿಧ ಭಾಗಗಳಲ್ಲಿ ಬಿಸಿಗಾಳಿ ಕಂಡುಬಂದಿದೆ ಎಂದು ಅದಿತಿ ನಾಯರ್ ತಿಳಿಸಿದ್ದಾರೆ. ಅಂದಹಾಗೇ 2023ರ ಜುಲೈ ಹಾಗೂ ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ಅತ್ಯಧಿಕ ಮಟ್ಟದಲ್ಲಿತ್ತು. ಆಹಾರ ಹಣದುಬ್ಬರ ಕ್ರಮವಾಗಿ ಶೇ.15.09 ಹಾಗೂ ಶೇ.11.43ರಷ್ಟಿತ್ತು. 

'ಜುಲೈ ಹಾಗೂ ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ತುಂಬಾ ಕಡಿಮೆ ಪ್ರಮಾಣದಲ್ಲಿರಲಿದೆ. ಅದಾದ ಬಳಿಕ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಲಿದೆ. ಅಲ್ಲದೆ, ಆ ಸಮಯದಲ್ಲಿ ಅರ್ಧಕ್ಕೂ ಅಧಿಕ ಮಳೆಗಾಲದ ಅವಧಿ ಕಳೆದಿರುತ್ತದೆ. ಈ ಸಮಯದಲ್ಲಿ ಬಿದ್ದ ಮಳೆ ಆಗಸ್ಟ್ ಬಳಿಕದ ಆಹಾರ ಹಣದುಬ್ಬರದ ಪಥವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ' ಎಂದು ಅದಿತಿ ಹೇಳಿದ್ದಾರೆ. 

ದೇಶದಲ್ಲಿ ದುಬಾರಿ ಮನೆ ಖರೀದಿಯಲ್ಲಿ ಬೆಂಗಳೂರಿಗೆ 4ನೇ ಸ್ಥಾನ, ನಂ.1 ಯಾರು?

ಆಹಾರ ಪದಾರ್ಥಗಳ ಬೆಲೆಯೇರಿಕೆ ಡಬ್ಲ್ಯುಪಿಐ ಹಣದುಬ್ಬರವನ್ನು ಏಪ್ರಿಲ್ ನಲ್ಲಿ 13 ತಿಂಗಳ ಅತ್ಯಧಿಕ ಮಟ್ಟಕ್ಕೆ ಏರಿಕೆ ಮಾಡಿದೆ. ಇನ್ನು ಏಪ್ರಿಲ್ ತಿಂಗಳಲ್ಲಿ ಆಹಾರ ಹಾಗೂ ತರಕಾರಿಗಳ ಬೆಲೆ ಏರಿಕೆಯ ಮಟ್ಟದಲ್ಲಿದ್ದರೂ ಚಿಲ್ಲರೆ ಹಣದುಬ್ಬರ ಮಾತ್ರ 11ತಿಂಗಳ ಕನಿಷ್ಠ ಮಟ್ಟವಾದ ಶೇ.4.83ಕ್ಕೆ ಇಳಿಕೆಯಾಗಿದೆ. ಇನ್ನು ಸಗಟು ಹಾಗೂ ಚಿಲ್ಲರೆ ಹಣದುಬ್ಬರದಲ್ಲಿನ ಭಿನ್ನತೆಗೆ ಕಾರಣ ಡಬ್ಲ್ಯುಪಿಐಯಲ್ಲಿ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಅಲ್ಲದೆ, ಅವುಗಳ ಬೆಲೆ ಜಾಗತಿಕ ಸರಕು ಬೆಲೆಗಳಲ್ಲಿನ ವ್ಯತ್ಯಾಸ ಹಾಗೂ ವಿನಿಮಯ ದರಗಳನ್ನು ಆಧರಿಸಿರುತ್ತವೆ. ಇನ್ನೊಂದೆಡೆ ಸಿಪಿಐ ಸೇವೆಗಳು ಹಾಗೂ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. 


 

Follow Us:
Download App:
  • android
  • ios