ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (CMFRI) ಅರಬ್ಬೀ ಸಮುದ್ರದಲ್ಲಿ 'ಸೈಟೋಪ್ಸಿಸ್ ಇಂಡಿಕಾ' ಎಂಬ ಹೊಸ ಆಳ ಸಮುದ್ರದ ಮೀನನ್ನು ಪತ್ತೆ ಮಾಡಿದೆ. ಲಕ್ಷದ್ವೀಪ ಸಮುದ್ರದ ಬಳಿ ಪತ್ತೆಯಾದ ಈ ಮೀನು, ಈ ಹಿಂದೆ ಅಟ್ಲಾಂಟಿಕ್ ಸಾಗರದ ಪ್ರಭೇದದ ನಂಟಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಹೊಸ ಬಗೆಯ ಆಳ ಸಮುದ್ರದ ಮೀನೊಂದನ್ನು ಪತ್ತೆ ಮಾಡಿರುವುದಾಗಿ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ತಿಳಿಸಿದೆ. ಲಕ್ಷದ್ವೀಪ ಸಮುದ್ರದ ಪೂರ್ವ ಭಾಗದಲ್ಲಿ, ಸುಮಾರು 350 ರಿಂದ 500 ಮೀಟರ್ ಆಳದಲ್ಲಿ ಈ ಹೊಸ ಮೀನು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾನ್ಯವಾಗಿ 'ಇಂಡಿಯನ್ ಡೋರಿ' ಎಂದು ಕರೆಯಲ್ಪಡುವ ಈ ಮೀನಿಗೆ 'ಸೈಟೋಪ್ಸಿಸ್ ಇಂಡಿಕಾ' (Cyttopsis indica) ಎಂದು ವೈಜ್ಞಾನಿಕವಾಗಿ ಹೆಸರಿಡಲಾಗಿದೆ. CMFRIನ ಡಾ. ಆರ್. ರತೀಶ್ ಕುಮಾರ್ ನೇತೃತ್ವದ ಸಂಶೋಧಕರ ತಂಡ ಈ ಮಹತ್ವದ ಸಂಶೋಧನೆ ಮಾಡಿದೆ. ಅಧ್ಯಯನಕ್ಕಾಗಿ ಬೇಕಾದ ಆರು ಮೀನುಗಳ ಸ್ಯಾಂಪಲ್‌ಗಳನ್ನು ವಿಜ್ಞಾನಿಗಳು ಕೊಲ್ಲಂನ ಶಕ್ತಿಕುಳಂಗರ ಬಂದರಿಗೆ ಬಂದಿದ್ದ ಟ್ರಾಲಿಂಗ್ ಬೋಟ್‌ಗಳಿಂದ ಸಂಗ್ರಹಿಸಿದ್ದರು.

ಸೈಟೋಪ್ಸಿಸ್ ರೋಸಿಯಾ ಪ್ರಭೇದ

ಹಿಂದೂ ಮಹಾಸಾಗರದಲ್ಲಿ ಕಂಡುಬರುವ ಈ ರೀತಿಯ ಮೀನುಗಳನ್ನು, ಅಟ್ಲಾಂಟಿಕ್ ಸಾಗರದಲ್ಲಿ ಕಾಣಸಿಗುವ 'ಸೈಟೋಪ್ಸಿಸ್ ರೋಸಿಯಾ' ಪ್ರಭೇದಕ್ಕೆ ಸೇರಿದ್ದು ಎಂದು ಈ ಹಿಂದೆ ವಿಜ್ಞಾನಿಗಳು ಭಾವಿಸಿದ್ದರು. ಆದರೆ, ವಿವರವಾದ ಜೀನ್ ಪರೀಕ್ಷೆ ನಡೆಸಿದಾಗ, ಎರಡೂ ಮೀನುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳು ಇರುವುದು ಗೊತ್ತಾಗಿದೆ. ಹೀಗಾಗಿ ಇದು ಒಂದು ಹೊಸ ಪ್ರಭೇದ ಎಂದು ಖಚಿತಪಡಿಸಲಾಗಿದೆ.

ಅರಬ್ಬೀ ಸಮುದ್ರದ ಆಳದಲ್ಲಿರುವ ಜೈವಿಕ ವೈವಿಧ್ಯತೆಯ ಬಗ್ಗೆ ಮುಂದಿನ ಅಧ್ಯಯನಗಳಿಗೆ ಈ ಸಂಶೋಧನೆ ಹೊಸ ದಾರಿ ತೋರಿಸಲಿದೆ ಎಂದು CMFRI ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.