ಲ್ಲೊಂದು ಕಡೆ ಶಾಲೆ ಬಿಟ್ಟು ಅಕ್ಕಪಕ್ಕದ ಮನೆಯವರ ಮೊಬೈಲ್ ಕಳ್ಳತನ ಮಾಡುತ್ತಾ ಕೆಟ್ಟ ದಾರಿ ಹಿಡಿದಿದ್ದ ಮಗನಿಗೆ ಬುದ್ಧಿ ಕಲಿಸಲು ಪೋಷಕರು ನೀಡಿದ ಶಿಕ್ಷೆ ಈಗ ಪೋಷಕರನ್ನೇ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಹಾಗಿದ್ರೆ ಪೋಷಕರು ಮಾಡಿದ್ದೇನು?

ಇತ್ತೀಚೆಗೆ ಮಕ್ಕಳಿಗೆ ಬುದ್ಧಿ ಕಲಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಸ್ವಲ್ಪ ಬೈದರೆ ಮಕ್ಕಳು ಜೀವವನ್ನೇ ತೆಗೆದುಕೊಳ್ಳುತ್ತಾರೆ. ಹೊಡೆದು ಬಡಿದರೆ ಪೊಲೀಸರು ಮನೆಗೆ ಬರ್ತಾರೆ. ಹೀಗಾಗಿ ಮಕ್ಕಳಿಗೆ ಬುದ್ಧಿ ಕಲಿಸೋದಕ್ಕೆ ಪೋಷಕರು ಹೆಣಗಾಡುವಂತಾಗಿದೆ. ಇಲ್ಲೊಂದು ಕಡೆ ಶಾಲೆ ಬಿಟ್ಟು ಅಕ್ಕಪಕ್ಕದ ಮನೆಯವರ ಮೊಬೈಲ್ ಕಳ್ಳತನ ಮಾಡುತ್ತಾ ಕೆಟ್ಟ ದಾರಿ ಹಿಡಿದಿದ್ದ ಮಗನಿಗೆ ಬುದ್ಧಿ ಕಲಿಸಲು ಪೋಷಕರು ನೀಡಿದ ಶಿಕ್ಷೆ ಈಗ ಪೋಷಕರನ್ನೇ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಹಾಗಿದ್ರೆ ಪೋಷಕರು ಮಾಡಿದ್ದೇನು?

ಆತನಿಗೆ 12 ವರ್ಷ, ಓದು ಅಂತ ಶಾಲೆಗೆ ಕಳಿಸಿದ್ರೆ ಶಾಲೆ ಬಿಟ್ಟು ಬೀದಿ ಸುತ್ತಲೂ ಶುರು ಮಾಡಿದ್ದ. ಇತ್ತೀಚೆಗೆ ಇದು ಸಾಲದು ಎಂಬಂತೆ ಅಕ್ಕಪಕ್ಕದ ಮನೆಯವರ ಮೊಬೈಲ್ ಕಳ್ಳತನಕ್ಕೂ ಇಳಿದಿದ್ದ ಈತನ ಈ ಕೆಟ್ಟ ಬುದ್ಧಿಯಿಂದಾಗಿ ಪೋಷಕರು ನೆರೆಹೊರೆಯವ ಮನೆಯವರ ಮಾತು ಕೇಳುವಂತಾಗಿದ್ದು, ಆತನನ್ನು ತಿದ್ದುವುದಕ್ಕೆ ಸಾಕಷ್ಟು ಬುದ್ಧಿಮಾತು ಹೇಳಿದ ಪೋಷಕರು, ಆತ ಸುಧಾರಿಸದೇ ಹೋದಾಗ ಕಠಿಣವಾದ ನಿರ್ಧಾರ ತೆಗೆದುಕೊಂಡಿದ್ದರು.. ಅದೇನು?

ಕಬ್ಬಿಣದ ಸರಪಳಿಯಲ್ಲಿ ಕಟ್ಟುತ್ತಿದ್ದ ಪೋಷಕರು

ಬಾಲಕನ ಪೋಷಕರಿಬ್ಬರು ದಿನಗೂಲಿ ಕಾರ್ಮಿಕರಾಗಿದ್ದರು. ದಿನಾ ದುಡಿದರಷ್ಟೇ ಜೀವನ ಮನೆಯಲ್ಲಿ ಹೀಗಾಗಿ ಮನೆಯಲ್ಲಿ ಕುಳಿತು ಈ ತುಂಟ ಮಗನನ್ನು ಸರಿ ಮಾಡುವುದಕ್ಕೆ ಅವರಿಗೆ ಸಾಧ್ಯವಿರಲಿಲ್ಲ. ಮಗನಿಗೆ ಬುದ್ಧಿ ಹೇಳಿ ಹೇಳಿ ಸೋತ ಪೋಷಕರು ಕಡೆಯದಾಗಿ ಆತನ ಕೈಗೆ ಸರಪಳಿ ಕಟ್ಟಿ ಕಂಬವೊಂದಕ್ಕೆ ಕಟ್ಟಿ ಹಾಕಿ ತಮ್ಮ ದುಡಿಮೆಗೆ ಹೋಗುತ್ತಿದ್ದರು. ಆದರೆ ಬಾಲಕನನ್ನು ನೋಡಿ ಮನಸ್ಸು ಕರಗಿದ ಮಹಾನುಭಾವರು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದು, ಈಗ ಪೊಲೀಸರು ಬಂದು ಆತನನ್ನು ಸೆರೆಯಿಂದ ಬಿಡಿಸಿದ್ದಾರೆ. ಜೊತೆಗೆ ಪೋಷಕರ ವಿರುದ್ಧ ಕೇಸ್ ಜಡಿದಿದ್ದಾರೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ದಕ್ಷಿಣ ನಾಗಪುರದಲ್ಲಿ.

ಪೊಲೀಸರ ಪ್ರಕಾರ, ಜಿಲ್ಲಾ ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಮನೆಗೆ ದಾಳಿ ಮಾಡಿದಾಗ ಮನೆಯೊಳಗೆ ಬಾಲಕ ಸರಪಳಿಯಿಂದ ಕಾಲುಗಳನ್ನು ಕಟ್ಟಿ ಬೀಗ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಲುಗಳಿಗೆ ಸರಪಳಿ ಹಾಕಿ ಬೀಗ ಹಾಕಿದ್ದರಿಂದ ಆತನ ಕಾಲುಗಳಿಗೆ ಗಾಯಗಳಾಗಿದ್ದವು. ಭಯ ಹಾಗೂ ಆತಂಕದಿಂದ ದಿನ ಕಳೆಯುತ್ತಿದ್ದ ಆತನನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಕಳೆದೆರಡು ತಿಂಗಳಿನಿಂದಲೂ ಪೋಷಕರು ಆತನನ್ನು ಹೀಗೆ ಕಟ್ಟಿ ಹಾಕಿ ಹೋಗುತ್ತಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಬಾಗಿಲು ಹಾಕಿ ಬೆಂಕಿ: ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ವಿವಾಹಿತ ಜೋಡಿಯ ಸಜೀವದಹನ

ಶಾಲೆ ತೊರೆದಿರುವ ತಮ್ಮ 12 ವರ್ಷದ ಮಗ ಇತ್ತೀಚೆಗೆ ತುಂಬಾ ತುಂಟಾಟ ಮಾಡುತ್ತಿದ್ದ. ಆತ ನಮ್ಮ ಮಾತು ಕೇಳುತ್ತಿರಲಿಲ್ಲ, ಇತ್ತೀಚೆಗೆ ಆತ ಮನೆ ಬಿಟ್ಟು ಹೋಗಿದ್ದ ಇತರರ ಫೋನ್ ಕದಿಯುತ್ತಿದ್ದ ಹೀಗಾಗಿ ಆತನ ಈ ಕೆಟ್ಟ ಗುಣವನ್ನು ಸರಿ ಮಾಡುವುದಕ್ಕಾಗಿ ಆತನನ್ನು ಕಟ್ಟಿ ಹಾಕುತ್ತಿದ್ದಿದ್ದಾಗಿ ಪೋಷಕರು ಹೇಳಿದ್ದಾರೆ. ಈಗ ಪೊಲೀಸರು ಪೋಷಕರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಬಾಲಕನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದ್ದು, ಆತನಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತಕ್ಕೆ ಸಂಪೂರ್ಣ ಬೆಂಬಲ: ಪಾಕ್ ನೆಲದಿಂದ ಬಂತು ಜೈಶಂಕರ್‌ಗೆ ಬಹಿರಂಗ ಪತ್ರ

ಘಟನೆ ಬಗ್ಗೆ ಪೊಲೀಸರಿಗೆ ಈ ಮೊದಲೇ ಎರಡು ಬಾರಿ ಮಾಹಿತಿ ನೀಡಲಾಗಿತ್ತು. ಆದರೆ ಅವರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ನಂತರ ಯಾರೋ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಕಲ್ಯಾಣ ಸಮಿತಿ ಕೂಡಲೇ ಕಾರ್ಯಾಚರಣೆಗೆ ಇಳಿದು ಬಾಲಕನನ್ನು ರಕ್ಷಿಸಿದೆ. ಘಟನೆಯೂ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ.