ಮರಿಯಾನಾ ಎಲ್. ನೈಶುಲರ್ ಅವರು ಮಾರ್ಚ್ 2ರಂದು ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ನಂತರ ಜನರಲ್‌ ನೈಶುಲರ್‌ ಮಾತನಾಡಿದರು.

ಚೆನ್ನೈ (ಮಾ.10): ಮರಿಯಾನಾ ಎಲ್. ನೈಶುಲರ್ ಅವರು ಮಾರ್ಚ್ 2ರಂದು ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾನ್ಸಲ್‌ ಜನರಲ್‌ ನೈಶುಲರ್‌ ಅವರು, ನಮ್ಮ ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಅಮೇರಿಕಾವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂದ ಗೌರವ ಎಂದೇ ಭಾವಿಸುತ್ತೇನೆ.

Add Asianetnews Kannada as a Preferred SourcegooglePreferred

ಪಾಲುದಾರಿಕೆಯನ್ನು ಬಲಪಡಿಸುವತ್ತ ಕೇಂದ್ರೀಕರಿಸಿದ್ದೇವೆ

ಅಧ್ಯಕ್ಷ ಟ್ರಂಪ್, ಕಾರ್ಯದರ್ಶಿ ರೂಬಿಯೋ ಮತ್ತು ರಾಯಭಾರಿ ಗೋರ್ ಅವರ ನೇತೃತ್ವದಲ್ಲಿ, ಅಮೆರಿಕನ್ನರು ಮತ್ತು ಭಾರತೀಯರಿಬ್ಬರಿಗೂ ನೈಜ ಫಲಿತಾಂಶಗಳನ್ನು ನೀಡುವ ಪಾಲುದಾರಿಕೆಯನ್ನು ಬಲಪಡಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಲು, ಅಮೆರಿಕನ್ ಉದ್ಯಮಗಳನ್ನು ಬೆಂಬಲಿಸಲು ಮತ್ತು ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಜನರ ನಡುವಿನ ಬಾಂಧವ್ಯಗಳನ್ನು ವೃದ್ಧಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಚೆನ್ನೈಗೆ ಬರುವ ಮೊದಲು, ಕಾನ್ಸಲ್ ಜನರಲ್ ನೈಶುಲರ್ ತಾಷ್ಕೆಂಟ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಜೆರುಸಲೆಮ್ ಮತ್ತು ಆಮ್ಮನ್ ರಾಯಭಾರ ಕಚೇರಿಗಳಲ್ಲಿ ಉಪ ಆರ್ಥಿಕ ಕೌನ್ಸಿಲರ್ ಆಗಿ, ಹಾಗೆಯೇ ವಾಷಿಂಗ್ಟನ್ ಡಿ.ಸಿ., ದುಬೈ, ಸ್ಕೋಪೆ ಯೆ ಮತ್ತು ಮಾಸ್ಕೋಗಳಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.