ತಮಿಳುನಾಡಿನ ತಿರುವನಮಲೈ ಜಿಲ್ಲೆಯಲ್ಲಿ, ಲೀವ್ ಇನ್ ರಿಲೇಷನ್‌ನಲ್ಲಿದ್ದ ಜೋಡಿಯನ್ನು ಅವರ ಗುಡಿಸಲಿಗೆ ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 53 ವರ್ಷದ ಶಕ್ತಿವೇಲ್ ಮತ್ತು 40 ವರ್ಷದ ಅಮೃತಮ್ ಮೃತಪಟ್ಟವರು.
ತಿರುವನಮಲೈ: ಲೀವ್ ಇನ್ ರಿಲೇಷನ್‌ನಲ್ಲಿದ್ದ ಜೋಡಿ ವಾಸ ಮಾಡ್ತಿದ್ದ ಗುಡಿಸಲಿಗೆ ಹೊರಗಿನಿಂದ ಲಾಕ್ ಮಾಡಿ ಬೆಂಕಿ ಹಚ್ಚಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ತಮಿಳುನಾಡಿನ ತಿರುನಮಲೈ ಜಿಲ್ಲೆಯ ಚೆಂಗಮ್‌ನ ಹಳ್ಳಿಯೊಂದರಲ್ಲಿ ನಡೆದಿದೆ. ಘಟನೆಯಿಂದಾಗಿ 53 ವರ್ಷದ ಪುರುಷ ಹಾಗೂ ಆಕೆಯ 40 ವರ್ಷದ ಲೀವಿಂಗ್ ಪಾರ್ಟನರ್ ಮೃತಪಟ್ಟಿದ್ದಾರೆ. ಮೃತರನ್ನು ಚೆಂಗಮ್ ಬಳಿಯ ಪಕ್ಕಿರಿಪಾಳಯಂ ಗ್ರಾಮದ ರೈತ ಪಿ. ಶಕ್ತಿವೇಲ್ ಮತ್ತು ಅವರ ಸಂಗಾತಿ ಎಸ್. ಅಮೃತಮ್ (40) ಎಂದು ಗುರುತಿಸಲಾಗಿದೆ.
ಪಕ್ಕಿರಿಪಾಳ್ಯಂನಲ್ಲಿ ಗುಡಿಸಲೊಂದು ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆ ಸ್ಥಳಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತಲುಪಿದ ತಂಡಕ್ಕೆ ಅಲ್ಲಿ ಗುರುತಿಸಲಾಗದಷ್ಟು ಸುಟ್ಟು ಕರಕಲಾದ ಎರಡು ಶವಗಳು ಸಿಕ್ಕಿವೆ. ನಂತರ ಪೊಲೀಸರು ಸ್ಥಳಕ್ಕೆ ವಿಧಿವಿಜ್ಞಾನ ತಂಡ ಹಾಗೂ ಶ್ವಾನದಳವನ್ನು ಕರೆಸಿ ಪರಿಶೀಲಿಸಿದೆ. ಸ್ಥಳದಲ್ಲೇ ಮೃತರ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಚೆಂಗಮ್ ಇನ್ಸ್‌ಪೆಕ್ಟರ್ ಎಂ. ಸೆಲ್ವರಾಜ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಈ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದ್ದು, ಇಬ್ಬರೂ ತಮ್ಮ ತಮ್ಮ ಸಂಗಾತಿಯಿಂದ ದೂರಾಗಿದ್ದರು. ಶಕ್ತಿವೇಲ್ ತನ್ನ ಪತ್ನಿ ಎಸ್. ತಮಿಳರಸಿಯಿಂದ ಮೂರು ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಶಕ್ತಿವೇಲ್ ತಮಿಳರಸಿ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಾರೆ. ಅವರ ಪತ್ನಿ ಈಗ ಬೆಂಗಳೂರಿನಲ್ಲಿ ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಹಾಗೆಯೇ ಶಕ್ತಿವೇಲುವಿನ ಲೀವಿಂಗ್ ಪಾರ್ಟನರ್ ಆಗಿದ್ದ ಅಮೃತಮ್ ಕೂಡ ತನ್ನ ಪತಿಯಿಂದ ಬೇರ್ಪಟಿದ್ದರು. ಅಮೃತಮ್ ಹಾಗೂ ಆಕೆಯ ಪತಿಗೂ ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.
ಶಕ್ತಿವೇಲುವಿನ ಮಗಳು ಗುರುವಾರ ರಾತ್ರಿ ಆತನನ್ನು ಭೇಟಿ ಮಾಡಿ ರಾತ್ರಿ ಊಟ ಮಾಡಿದ ನಂತರ 9 ಗಂಟೆಗೆ ಆಕೆ ಹೊರಟು ಹೋಗಿದ್ದಾಳೆ. ಇತ್ತ ಶಕ್ತಿವೇಲು ಅವರು ವಾಸಿಸುವ ಗುಡಿಸಲಿನ ಅಕ್ಕಪಕ್ಕದ ಮನೆಯ ನಿವಾಸಿಗಳು ರಾತ್ರಿ ಸುಟ್ಟ ವಾಸನೆ ಬರುತ್ತಿದೆ ಎಂದು ಎಚ್ಚರವಾಗಿ ನೋಡಿದಾಗ ಶಕ್ತಿವೇಲು ಅವರು ವಾಸವಿದ್ದ ಮನೆ ಹೊತ್ತಿ ಉರಿದಿರುವುದು ಕಂಡು ಬಂದಿದೆ. ನಂತರ ಅಕ್ಕಪಕ್ಕದ ಮನೆಯವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಸಂಪೂರ್ಣ ಬೆಂಬಲ: ಪಾಕ್ ನೆಲದಿಂದ ಬಂತು ಜೈಶಂಕರ್‌ಗೆ ಬಹಿರಂಗ ಪತ್ರ
ನಾವು ಇಬ್ಬರ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ. ಆ ಜೋಡಿ ಇಬ್ಬರೂ ತಮ್ಮ ತಮ್ಮ ಸಂಗಾತಿಗಳಿಂದ ದೂರಾಗಿದ್ದರು. ಕಳೆದ ಮೂರು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದರು. ನಾವು ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಿದ್ದೇವೆ. ಇದರಲ್ಲಿ ಮೃತರಾದವರ ಸಂಗಾತಿಗಳ ಪಾತ್ರ ಇರಬಹುದೇ ಎಂಬ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಶಕ್ತಿವೇಲ್ ತನ್ನ ಸಂಗಾತಿಯೊಂದಿಗೆ ಮೂರು ಎಕರೆ ಜಮೀನಿನ ಮಧ್ಯೆ ನಿರ್ಮಿಸಲಾದ 10x10 ಅಡಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದರು, ಅದನ್ನು ಅವರು ಗ್ರಾಮಸ್ಥರಿಂದ ಗುತ್ತಿಗೆಗೆ ಪಡೆದಿದ್ದರು ಎಂದು ಇನ್ಸ್‌ಪೆಕ್ಟರ್ ಸೆಲ್ವರಾಜ್ ಹೇಳಿದ್ದಾರೆ.
ಇದನ್ನೂ ಓದಿ: 42ರ ವ್ಯಕ್ತಿಗೆ 25ರ ಗರ್ಲ್‌ಫ್ರೆಂಡ್: ಬಾಯ್‌ಫ್ರೆಂಡ್‌ನ ಪಾರ್ಟಿಗೆ ಕರೆದು ಡೆಂಜಿ ಕಿಡ್ ಮಾಡಿದ್ದೇನು?


