30 ದಿನ ವ್ಯಾಲಿಡಿಟಿ, ವಾಯ್ಸ್ ಕಾಲ್ ಒನ್ಲಿ, ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಇದೀಗ ಗ್ರಾಹಕರಿಗೆ ಲಭ್ಯವಿದೆ. ಕಳೆದ ಹಲವು ದಿನಗಳಿಂದ ನಿರಂತರ ಹೋರಾಟ ನಡೆಸಿದ ಸಂಸದ ರಾಘವ್ ಚಡ್ಡಾ ಇದೀಗ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ನವದೆಹಲಿ (ಸೆ.27) ಮೊಬೈಲ್ ರೀಚಾರ್ಜ್ ಮಾಡುವಾಗ ಕೇವಲ ವಾಯ್ಸ್ ಕಾಲ್ ಹಾಗೂ ಮೆಸೇಜ್ ರೀಚಾರ್ಜ್ ಪ್ಲಾನ್‌ಗಳು ಲಭ್ಯವಿರಲಿಲ್ಲ. ಎಲ್ಲಾ ಪ್ಲಾನ್‌ಗಳಲ್ಲಿ ಬೇಡವಾಗಿದ್ದರೂ ಡೇಟಾ ರೀಚಾರ್ಜ್ ಮಾಡಬೇಕಿತ್ತು. ಇನ್ನು ಪ್ಲಾನ್ ವ್ಯಾಲಿಟಿಡಿ 28 ದಿನ, 22 ದಿನಗಳು ಮಾತ್ರ ಲಭ್ಯವಾಗುತ್ತಿತ್ತು. ಜೊತೆಗೆ ಈ ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಈ ಕುರಿತು ಸಂಸತ್ತಿನಲ್ಲಿ ಧನಿ ಎತ್ತಿದ ಸಂಸದ ರಾಘವ್ ಚಡ್ಡಾ ನಿರಂತರ ಹೋರಾಟ ನಡೆಸಿದ್ದರು. ಇದೀಗ ಗ್ರಾಹಕರಿಗೆ ರಾಘವ್ ಚಡ್ಡಾ ಗುಡ್ ನ್ಯೂಸ್ ನೀಡಿದ್ದಾರೆ.

ಗ್ರಾಹಕರಿಗೆ ಗುಡ್ ನ್ಯೂಸ್

ಇನ್ನು ಮುಂದೆ ಗ್ರಾಹಕರಿಗೆ ಒಂದು ತಿಂಗಳು ಅಂದರೆ 30 ದಿನಗಳ ವ್ಯಾಲಿಟಿಡಿ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ಕೇವಲ ವಾಯ್ಸ್ ಕಾಲ್ ಹಾಗೂ ಎಸ್ಎಂಎಸ್ ಲಭ್ಯವಿರುವ ರೀಚಾರ್ಜ್ ಪ್ಲಾನ್ ಲಭ್ಯವಿದೆ. ಭಾರತದ ಟೆಲಿಕಾಂ ರೆಗ್ಯೂಲಟರಿ ಅಥಾರಿಟಿ(ಟ್ರಾಯ್) ಈ ಕುರಿತು ತಿದ್ದುಪಡಿ ನಡೆಸಿದೆ. ಕನ್ಸೂಮರ್ ತಿದ್ದುಪಡಿ 13ನೇ ನಿಯಮಾವಳಿಯಲ್ಲಿ ತಿದ್ದುಪಡಿ ಹೊಸ ನೀತಿ ಜಾರಿಗೊಳಿಸಲಾಗಿದೆ. ಈ ಕುರಿತು ರಾಘವ್ ಚಡ್ಡಾ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

2026ರ ಮಾರ್ಚ್ ತಿಂಗಳಿನಿಂದ ನಾನು ಪ್ರಿಪೇಯ್ಡ್ ಮೊಬೈಲ್ ಗ್ರಾಹಕರ ರೀಚಾರ್ಜ್,ಡೇಟಾ, ರೀಚಾರ್ಜ್ ಪ್ಲಾನ್ ಕುರಿತು ಮಾತನಾಡಿದ್ದೇನೆ. ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾಗಿ ಮಾತನಾಡಿದ್ದೆ. ವರ್ಷದ 12 ತಿಂಗಳಲ್ಲಿ ಗ್ರಾಹಕರು 13 ತಿಂಗಳು ರಿಚಾರ್ಜ್ ಮಾಡುವಂತೆ ಮಾಡುತ್ತಿದ್ದರು. ಗರಿಷ್ಠ 28 ದಿನಗಳ ರೀಚಾರ್ಜ್ ಮಾತ್ರ ನೀಡಲಾಗುತ್ತಿತ್ತು. ಭಾರತದಲ್ಲಿ ಹಲವರು ಕೇವಲ ಇನ್‌ಕಮಿಂಗ್ ಹಾಗೂ ಕರೆ ಮಾಡಲು ಮಾತ್ರ ಫೋನ್ ಬಳಸುತ್ತಾರೆ. ಅವರಿಗೆ ಡೇಟಾ ಅವಶ್ಯಕತೆ ಇಲ್ಲ. ಆದರೆ ಅನಿವಾರ್ಯವಾಗಿ ಡೇಟಾ ರೀಚಾರ್ಜ್ ಮಾಡಲೇ ಬೇಕಿತ್ತು. ಈ ಕುರಿತು ಅಧಿಕೃತ ಅಧಿಕಾರಿಗಳ ಗಮನಕ್ಕೂ ತಂದಿದಿದ್ದೇನೆ. ನಿರಂತ ಹೋರಾಟದ ಫಲವಾಗಿ ಇದೀಗ ಸಿಹಿ ಸುದ್ದಿ ಬಂದಿದೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

ಅತೀ ಕಡಿಮೆ ಬೆಲೆಯಲ್ಲಿ ಪ್ಲಾನ್

ಗ್ರಾಹಕರ ಎಲ್ಲಾ ಬೇಡಿಕೆಯನ್ನು ಟ್ರಾಯ್ ಒಪ್ಪಿಕೊಂಡು ನಿಯಮದಲ್ಲಿ ತಿದ್ದುಪಡಿ ಮಾಡಿದೆ. ಹೊಸ ನಿಯಮಾವಳಿಯಲ್ಲಿ 28 ದಿನ ರೀಚಾರ್ಜ್ ಬದಲು 30 ದಿನ ಲಭ್ಯವಾಗಲಿದೆ. ಇನ್ನು ಡೇಟಾ ಇಲ್ಲದೆ ಕೇವಲ ವಾಯ್ಸ್ ಕಾಲ್ ರೀಚಾರ್ಜ್ ಪ್ಲಾನ್ ಲಭ್ಯವಾಗಲಿದೆ. ಈ ರೀಚಾರ್ಜ್ ಪ್ಲಾನ್‌ಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಗ್ರಾಹಕರಿಗೆ ಅಗತ್ಯ ಇರುವ ಸೇವೆಗೆ ಮಾತ್ರ ಪಾವತಿ ಮಾಡಿದರೆ ಸಾಕು. ಇದಕ್ಕೂ ಮೊದಲು ಡೇಟಾ ಬೇಡವಾಗಿದ್ದರೂ ಹಣ ಪಾವತಿ ಮಾಡಬೇಕಿತ್ತು. ಇನ್ಮುಂದೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲಾನ್ ಇರಲಿದೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

ಭಾರತದಲ್ಲಿ ಕೆವಲರು ಕರೆಗಾಗಿ ಮಾತ್ರ ಫೋನ್ ಬಳಸುತ್ತಾರೆ. ಇದೀಗ ಹೊಸ ಪ್ಲಾನ್ ಮೂಲಕ ಕರೆಗಾಗಿ ಮಾತ್ರ ರೀಚಾರ್ಜ್ ಮಾಡಿದರೆ ಸಾಕು. ಜನರ ಬೇಡಿಕೆಯನ್ನು ಸಂಸತ್ತಿನಲ್ಲಿ ಮಂಡಿಸಿದ ಬಳಿಕ ದೇಶಾದ್ಯಂತ ಜನರು ಈ ಬೇಡಿಕೆಯನ್ನು ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಜನರು ಬೇಡಿಕೆಗೆ ಒತ್ತಾಯಿಸಿದ್ದರು. ಇದೀಗ ಸರ್ಕಾರ ಒಪ್ಪಿಕೊಂಡು ತಿದ್ದುಪಡಿ ಮಾಡಿದೆ. ಎಲ್ಲರಿಗೂ ಧನ್ಯವಾದಗಳು ಎಂದು ರಾಘವ್ ಚಡ್ಡಾ ಹೇಳಿದ್ದಾರೆ.