ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!

ಬೆಂಗಳೂರಿನ ಕಾನ್ಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ನಿರಂತರ ಗಣೇಶ್‌, ವಿಮಾನದಲ್ಲಿ ಹೃದಯಸ್ತಂಭನಕ್ಕೆ ಒಳಗಾಗಿ ಕುಸಿದ್ದು ಬಿದ್ದಿದ್ದ ಹಿರಿಯ ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.
 

Bengaluru doctor Niranthara Ganesh saves woman with cardiac arrest on Board Flight san

ಬೆಂಗಳೂರು (ಜೂ.23): ವಿಮಾನದಲ್ಲಿ ಸೂಕ್ತ ಸಂದರ್ಭದಲ್ಲಿ ವೈದ್ಯರು ಉಪಸ್ಥಿತಿರಿದ್ದ ಕಾರಣಕ್ಕೆ 60 ವರ್ಷದ ಮಹಿಲೆಯ ಜೀವ ಉಳಿದ ಅಪರೂಪರದ ಘಟನೆ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ನಡೆದಿದೆ.  ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಹೃದಯ ಸ್ತಂಭನದಿಂದ ಕುಸಿದುಬಿದ್ದ ಹಿರಿಯ ಮಹಿಳೆಯ ರಕ್ಷಣೆಗೆ ಧಾವಿಸಿದ ಬೆಂಗಳೂರಿನ ವೈದ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ ಡಾ. ನಿರಂತರ ಗಣೇಶ್‌ ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ನೀಡುವ ಮೂಲಕ ಆಕೆಯ ಜೀವ ಉಳಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಬುಧವಾರ ಮಧ್ಯಾಹ್ನ 12.01 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ದೆಹಲಿಗೆ ಟೇಕ್‌ ಆಫ್‌ ಆಗಿದ್ದ ಇಂಡಿಗೋ 6ಇ 869 ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಉದ್ಭವವಾಗಿತ್ತು ಎಂದು ಮೂಲಗಳು ತಿಳಿಸಿವೆ. ವಿಮಾನವವು ರಾಷ್ಟ್ರರಾಜಧಾನಿಯ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ. ತನ್ನ ಸಂಭಂಧಿಗಳೊಂದಿಗೆ ಪ್ರಯಾಣ ಮಾಡುತ್ತಿದ್ದ 60 ವರ್ಷದ ರೋಸಮ್ಮ ಅವರಿಗೆ ಉಸಿರಾಡಲು ಕೂಡ ಕಷ್ಟವಾಗಿ ಕುಸಿದಿದ್ದರು.  ಈ ವೇಳೆ ಸಹಾಯಕ್ಕೆ ಬಂದ ಗಗನಸಖಿಯರು, ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಲ್ಲಿ ಎದ್ದು ಬರುವಂತೆ ಪ್ರಕಟಣೆ ನೀಡಿದ್ದರು.

ನಾನು ವೈಯಕ್ತಿಕ ಕೆಲಸದ ಮೇರೆಗೆ ದೆಹಲಿಗೆ ಪ್ರಯಾಣ ಮಾಡುತ್ತಿದ್ದೆ. ಈ ವೇಳೆ ವಿಮಾನದಲ್ಲಿ ತುರ್ತಾಗಿ ವೈದ್ಯರ ಅಗತ್ಯ ಇರುವ ಬಗ್ಗೆ ಪ್ರಕಟಣೆಯನ್ನು ಆಲಿಸಿದೆ. ನಾನು ಅವರ ಬಳಿ ಹೋಗುವಾಗ ಹಿರಿಯ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದರು. ಆಕೆಯ ನಾಡಿಮಿಡಿತ ಕ್ಷೀಣವಾಗಿತ್ತು. ಬಹುಶಃ ಆಕೆಗೆ ಕಾರ್ಡಿಯಾಕ್‌ ಅರೆಸ್ಟ್‌ (ಹೃದಯಸ್ತಂಭನ) ಆಗಿರಬಹುದು ಎನ್ನುವ ಅನುಮಾನ ಕಾಡಿತು' ಎಂದು  ಜಾಲಹಳ್ಳಿಯ ಸಿಎಎನ್‌ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ತಜ್ಞರಾಗಿರುವ ಡಾ.ನಿರಂತರ ಗಣೇಶ್ ಹೇಳಿದರು.

ಸಹ ಪ್ರಯಾಣಿಕರು ಈ ಎಲ್ಲಾ ಘಟನೆಗಳನ್ನು ಆತಂಕದಿಂದ ನೋಡುತ್ತಿದ್ದರೆ, ಡಾ. ನಿರಂತರ ಗಣೇಶ್‌ ಅವರು ಸಿಪಿಆರ್‌ ನೀಡುವ ಮೂಲಕ ಆಕೆಗೆ ಮರುಜೀವ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. 'ಅದೃಷ್ಟಕ್ಕೆ ಅವರು ಚೆನ್ನಾಗಿ ಸ್ಪಂದಿಸಿದರು. ಇದರಿಂದಾಗಿ ನಾನು ಅವರಿಗೆ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿದೆ. ಅದರೊಂದಿಗೆ ಎಲ್ಲಾ ಅಗತ್ಯ ಔಷಧಿಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದ ತುರ್ತು ವೈದ್ಯಕೀಯ ಕಿಟ್‌ ವಿಮಾನದಲ್ಲಿಯೇ ಪಡೆದುಕೊಂಡು, ಆಕೆಗೆ ಅಗತ್ಯ ಔಷಧಿಗಳು ನೀಡಿದೆ. ನಿಧಾನವಾಗಿ ಅವರ ಆರೋಗ್ಯ ಉತ್ತಮವಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಶೀಘ್ರದಲ್ಲೇ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು, ನಾನು ಇಂಡಿಗೋ ಸಿಬ್ಬಂದಿಗೆ ಆ ಬಗ್ಗೆ ತಿಳಿಸಿದ್ದೆ ಎಂದು ಡಾ ಗಣೇಶ್ ತಿಳಿಸಿದ್ದಾರೆ.

ಏವಿಯೇಷನ್‌ ಇತಿಹಾಸದ ಅತಿದೊಡ್ಡ ಆರ್ಡರ್‌, ಏರ್‌ಬಸ್‌ನಿಂದ 500 ವಿಮಾನ ಖರೀದಿಗೆ ಇಂಡಿಗೋ ಗ್ರೀನ್‌ಸಿಗ್ನಲ್‌!

ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಮಧ್ಯಾಹ್ನ 2.35 ಕ್ಕೆ ದೆಹಲಿಯಲ್ಲಿ ವಿಮಾನ ಲ್ಯಾಂಡ್‌ ಆಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧ ಮಹಿಳಾ ಪ್ರಯಾಣಿಕರನ್ನು ದೆಹಲಿ ವಿಮಾನ ನಿಲ್ದಾಣದೊಳಗಿನ ಮೇದಾಂತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಅಮ್ಮ ಮಗಳು ಇಬ್ಬರೂ ಗಗನಸಖಿಯರೇ: ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ

 

Latest Videos
Follow Us:
Download App:
  • android
  • ios