ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ಅವರನ್ನು ನಟ ವಿಜಯ್ ತಮ್ಮ ವಿಶೇಷ ರಾಜಕೀಯ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ. ಈ ಹಿಂದೆ ಜಯಲಲಿತಾ, ಸ್ಟಾಲಿನ್‌ರಂತಹ ಪ್ರಮುಖರ ಬಗ್ಗೆಯೂ ಇವರು ನಿಖರ ಭವಿಷ್ಯ ಹೇಳಿದ್ದು, ಈಗ ವಿಜಯ್‌ಗೆ ಸಲಹೆಗಾರರಾಗಿದ್ದಾರೆ.

ಟಿವಿಕೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ

ಚೆನ್ನೈ (ಮೇ.13): ಟಿವಿಕೆ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್‌ ವೆಟ್ರಿವೇಲ್‌ ಅವರನ್ನು ಮುಖ್ಯಮಂತ್ರಿ ವಿಜಯ್‌ ತಮ್ಮ ವಿಶೇಷ ರಾಜಕೀಯ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ. ‘ಟಿವಿಕೆ ಸುನಾಮಿ ಗೆಲುವು ಪಡೆಯಲಿದೆ. ವಿಜಯ್‌ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ರಿಕಿ ಭವಿಷ್ಯ ನುಡಿದಿದ್ದರು.

ಈ ಹಿಂದೆಯೂ ನಿಖರ ಭವಿಷ್ಯ ಹೇಳಿದ್ದ ರಿಕಿ

ವಿಜಯ್‌ ಮಾತ್ರವಲ್ಲ, ಈ ಹಿಂದೆ ಜಯಲಲಿತಾ, ಸ್ಟಾಲಿನ್‌, ಎಡಪ್ಪಾಡಿ ಸೇರಿದಂತೆ ಪ್ರಮುಖರ ಬಗ್ಗೆ ನಿಖರ ಭವಿಷ್ಯ ಹೇಳಿದ್ದರು. ಸ್ಟಾಲಿನ್‌ ರಾಜಕೀಯವಾಗಿ ಕಠಿಣ ದಿನಗಳನ್ನು ಎದುರಿಸಲಿದ್ದಾರೆ, ಉದಯನಿಧಿ ಸ್ಟಾಲಿನ್‌ ಹೆಚ್ಚಿನ ಪ್ರಗತಿ ಸಾಧಿಸುವುದಿಲ್ಲ. ಎಡಪ್ಪಾಡಿ ರಾಜಕೀಯವು ಪ್ರಸ್ತುತ ಉತ್ತಮವಾಗಿರಲಿದೆ ಎಂದಿದ್ದರು. ಇದಕ್ಕೂ ಮುನ್ನ ಅವರು ಜಯಲಲಿತಾ ರಾಜಕೀಯವಾಗಿ ಹಿನ್ನಡೆ ಅನುಭವಿಸಲಿದ್ದಾರೆ ಅಂತಲೂ ಹೇಳಿದ್ದರು.