ಕೇಂದ್ರ ಗುಪ್ತಚರ ನೀಡಿದ ಮಹತ್ವದ ಮಾಹಿತಿ, ಕೇಂದ್ರದಿಂದ ತಕ್ಷಣ ಕ್ರಮ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಸಾಮಾಜಿಕ ಜಾಲತಾಣ ಖಾತೆ ಪಾಕಿಸ್ತಾನ ಮೂಲದ ಖಾತೆಗಳಿಂದ ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆ ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರ, 35 ಖಾತೆ ಬ್ಲಾಕ್  

ನವದೆಹಲಿ(ಜ.21): ಕೇಂದ್ರ ಗುಪ್ತಚರ ಇಲಾಖೆ(Intelligence) ನೀಡಿದ ಮಹತ್ವದ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ತಕ್ಷಣವೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆ(Anti India content), ಭಾರತ ವಿರೋಧಿ ವಿಷಯ ಬಿತ್ತರ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಯೂಟ್ಯೂಬ್, ಟ್ವಿಟರ್ ಇನ್‌ಸ್ಟಾ ಸೇರಿದಂತೆ ಒಟ್ಟು 41ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. 

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಈ ಖಾತೆಗಳು ಭಾರತ ವಿರೋಧಿ ವಿಷಯಗಳನ್ನು ಯೂಟ್ಯೂಬ್ ಚಾನೆಲ್(YouTube), ಟ್ವಿಟರ್(Twitter),ಫೇಸ್‌ಬುಕ್(Facebook), ಇನ್‌ಸ್ಟಾಗ್ರಾಂ(Instagram) ಮೂಲಕ ಬಿತ್ತರಿಸುತ್ತಿತ್ತು. ಒಂದು ಸಮುದಾಯವನ್ನು ದೂಷಿಸಿ, ಭಾರತವನ್ನು ಒಡೆಯುವ ಹಾಗೂ ದೇಶದ ಭದ್ರತೆಗೆ ಸಾವಾಲೆಸುವ ಕೆಲಸ ಮಾಡುತ್ತಿತ್ತು. ಈ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಿರಿಸಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ(Ministry of Information and Broadcasting) ಇಲಾಖೆ ಈ ಖಾತೆಗಳನ್ನು ಬ್ಲಾಕ್ ಮಾಡಿದೆ 

1993ರ ಮುಂಬೈ ದಾಳಿ ರೂವಾರಿಗಳಿಗೆ ಪಾಕಿಸ್ತಾನ ಆತಿಥ್ಯ: India

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಸಾಹೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 35 ಯೂಟ್ಯೂಬ್ ಚಾನೆಲ್, 2 ಟ್ವಿಟರ್ ಖಾತೆ, 2 ಇನ್‌ಸ್ಟಾಗ್ರಾಂ ಖಾತೆ, 2 ವೆಬ್‌ಸೈಟ್ ಹಾಗೂ 2 ಫೇಸ್‌ಬುಕ್ ಖಾತೆಗಳು ಭಾರತದಲ್ಲಿ ವಿಷ ಬೀಜಗಳನ್ನು ಬಿತ್ತುವ ದೇಶ ವಿರೋಧಿ ಕೆಲಸ ಮಾಡುತಿತ್ತು. ಈ ಯ್ಯೂಟೂಬ್ ಚಾನೆಲ್‌ಗಳು 1.20 ಕೋಟಿ ಸಬ್‌ಸ್ಕ್ರೈಬರ್ ಹೊಂದಿದೆ. ಇಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋಗಳು 130 ಕೋಟಿ ವೀಕ್ಷಣೆ ಕಂಡಿದೆ. ಹೀಗೆ ದೇಶ ವಿರೋಧಿ ಚಟುವಟಿಕೆಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಿಕ್ರಮ ಸಾಹೆ ಹೇಳಿದ್ದಾರೆ.

ಭಾರತ ಕುರಿತು ಸುಳ್ಳು ಸುದ್ದಿಗಳನ್ನು, ಬಿತ್ತರಿಸುತ್ತಾ ಬಂದಿದೆ. ಇದಕ್ಕೆ ಕೆಲ ಸಮುದಾಯದ ಭಾರತೀಯರು ಬೆಂಬಲ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಪಾಕ್‌ನಿಂದ ನಿರ್ವಹಣೆಯಾಗುತ್ತಿದ್ದ, ವಿಡಿಯೋ ಅಪ್‌ಲೋಡ್ ಆಗುತ್ತಿದ್ದ ಒಟ್ಟು 41 ಖಾತೆಗಳು ಅಜಾದಿ ಕಾಶ್ಮೀರ, ಭಾರತೀಯ ಸೇನೆ, ಅಲ್ಪ ಸಂಖ್ಯಾತ ಸಮುದಾಯ, ರಾಮ ಮಂದಿರ, ಜನರಲ್ ಬಿಪಿನ್ ರಾವತ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತಿತ್ತು. ಜನರಲ್ಲಿ ದ್ವೇಷ ಭಾವನೆ ಸೃಷ್ಟಿಸುವ ಹಾಗೂ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿತ್ತು. ಇದಕ್ಕೆ ಹಲವು ಭಾರತೀಯರು ಬೆಂಬಲ ನೀಡಿದ್ದಾರೆ ಎಂದು ವಿಕ್ರಮ್ ಸಾಹೆ ಹೇಳಿದ್ದಾರೆ.

Imran Khan : ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಉತ್ತಮವಾಗಿದೆ ಎಂದ ಪಾಕ್ ಪ್ರಧಾನಿ!

ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಗಂಭೀರವಾಗಿ ಪರಿಣಗಣಿಸಿದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಜನವರಿ 20 ರಂದು ಈ ಖಾತೆಗಳನ್ನು ನಿಷೇಧಿಸಿದೆ. ಇದೇ ವೇಳೆ ಸಚಿವಾಲಯ ಈ ಖಾತೆಗಳ ಕೆಲ ಸ್ಕ್ರೀನ್ ಶಾಟ್ ಫೋಟೋಗಳನ್ನು ಬಹಿರಂಗಪಡಿಸಿದೆ. ಕೆಲ ಯೂಟ್ಯೂಬ್ ಚಾನೆಲ್ ನಯಾ ಪಾಕಿಸ್ತಾನ ಗ್ರೂಪ್ ನಿರ್ವಹಣೆ ಮಾಡುತ್ತಿದೆ. ಇದು ಪಾಕಿಸ್ತಾನ ಮುಖ್ಯವಾಹಿನಿಗಳ ನಿರೂಪಕರು ನಿರ್ವಹಣೆ ಮಾಡುತ್ತಿದ್ದಾರೆ. 

ಕಳೆದ ತಿಂಗಳು ಇದೇ ರೀತಿ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಪಾಕಿಸ್ತಾನ ಮೂಲದ 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್‌ನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿಷೇಧಿಸಿತ್ತು. ಇದೇ ವೇಳೆ ಮಾಹಿತಿ ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಎಚ್ಚರಿಕೆಯನ್ನು ನೀಡಿದ್ದರು. ಭಾರತ ವಿರೋಧಿ ಚಟುವಟಿಕೆ ನಡೆಸುವುದು ಪತ್ತೆಯಾದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಠಾಕೂರ್ ಹೇಳಿದ್ದರು.

PM Security Lapse : ಪ್ರಧಾನಿ ಮೋದಿ ಪಂಜಾಬ್‌ ರಸ್ತೆಯಲ್ಲಿ ನಿಂತಿದ್ದು ಕಟ್ಟುಕತೆಯಂತೆ!

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇದರಲ್ಲೂ ರೈತ ಪ್ರತಿಭಟನೆ ಸೇರಿದಂತೆ ಹಲವು ಆಂದೋಲನಗಳನ್ನು ಪ್ರಮುಖ ವಿಷಯವಾಗಿಟ್ಟುಕೊಂಡು ಪಾಕಿಸ್ತಾನ ಮೂಲಕ ಹಲವು ಖಾತೆಗಳು ಭಾರತದಲ್ಲಿ ಅತೀ ದೊಡ್ಡ ಸಂಚು ರೂಪಿಸುತ್ತಿದೆ. ಪಾಕಿಸ್ತಾನ ಮೂಲದ ಖಾತೆಗಳಿಗೆ ಭಾರತೀಯರು ಹೆಚ್ಚು ಹೆಚ್ಚು ಚಂದಾದಾರಿಕೆಯಾಗುತ್ತಿದ್ದು, ಭಾರತ ವಿರುದ್ಧ ಕತ್ತಿ ಮಸೆಯುತ್ತಿರುವುದು ಇದೀಗ ಗುಪ್ತಚರ ಇಲಾಖೆ ಮಾಹಿತಿಯಿಂದ ಸ್ಪಷ್ಟವಾಗಿದೆ.