PM Security Lapse : ಪ್ರಧಾನಿ ಮೋದಿ ಪಂಜಾಬ್‌ ರಸ್ತೆಯಲ್ಲಿ  ನಿಂತಿದ್ದು ಕಟ್ಟುಕತೆಯಂತೆ!

* ಜಾವೇದ್ ಅಖ್ತರ್ ಮತ್ತು ಇಮ್ರಾನ್ ಖಾನ್ ಟ್ವೀಟ್ ಗೆ ಸಾಕಷ್ಟು ಹೋಲಿಕೆ
* ಇಮ್ರಾನ್ ಖಾನ್ ಟ್ವಿಟ್ ಮಾಡಿದ ನಂತರ ಜಾವೇದ್ ಟ್ವಿಟ್
* ಪಂಬಾಬ್ ಭದ್ರತಾ ವೈಫಲ್ಯ ಪ್ರಕರಣ ಬೇರೆ ರೀತಿ ಕರೆದ ಅಖ್ತರ್
* ದೇಶದಲ್ಲಿನ ಹಿಂಸಾಚಾರದ ಬಗ್ಗೆ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ

Javed Akhtar and Pakistani PM Imran Khan s tweet showed amazing synergy PM Modi on target of both mah

ನವದೆಹಲಿ (ಜ.11) ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ (Javed Akhtar)ಮತ್ತೊಮ್ಮೆ  ಸುದ್ದಿಯಲ್ಲಿದ್ದಾರೆ. ಜಾವೇದ್ ಅಖ್ತರ್ ಪ್ರಧಾನಿ ನರೇಂದ್ರ (Narendra Modi ) ಮೋದಿಯವರ ಭದ್ರತಾ ಲೋಪದ ಪ್ರಕರಣವನ್ನು ಒಂದು ಕಟ್ಟುಕಥೆ ಎಂದು ಕರೆದಿದ್ದು ಸುದ್ದಿಯ ಮೂಲ. ಇಲ್ಲಿ ಇನ್ನೊಂದು ಸಂಗತಿಯೂ ಇದೆ. ಪಾಕಿಸ್ತಾನದ ಪಿಎಂ ಇಮ್ರಾನ್ (Imran Khan) ಖಾನ್ ಮಾಡಿರುವ ಟ್ವಿಟ್ ಗೂ ಜಾವೇದ್ ಮಾಡಿರುವ ಟ್ವೀಟ್ ಗೂ ಅಂಥ ಯಾವ ವ್ಯತ್ಯಾಸ ಇಲ್ಲ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎರಡು ಟ್ವಿಟ್ ಗಳ ಪ್ರತಿ ವೈರಲ್ ಆಗುತ್ತಿದೆ.  ನಾಗರಿಕರು ಭಿನ್ನ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮಯ ಗಮನಿಸಿದರೆ ಮೊದಲು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದು ನಂತರ ಜಾವೇದ್ ಮಾಡಿದ್ದಾರೆ. ಇಬ್ಬರ ಟ್ವೀಟ್‌ಗಳಲ್ಲಿ ಅನೇಕ ಸಾಮ್ಯತೆಗಳಿವೆ. 

PM Security Lapse ಗಂಭೀರ ಪ್ರಕರಣವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಧೀಶ ನೇತೃತ್ವದ ತ್ರಿಸದಸ್ಯ ಸಮಿತಿ ರಚನೆ!

ಜಾವೇದ್ ಅಖ್ತರ್ ಟ್ವೀಟ್ ನಲ್ಲಿ ಏನಿದೆ? ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ತಮಗೆ ಜೀವ ಬೆದರಿಕೆ ಇದೆ ಎನ್ನುವ ವಿಚಾರ  ಹೇಳಿಕೊಂಡಿದ್ದರು. .LMG (ಲೈಟ್ ಮೆಷಿನ್ ಗನ್) ಹೊಂದಿದ ಅಂಗರಕ್ಷಕರಿಂದ ಸುತ್ತುವರಿದ ಬುಲೆಟ್ ಪ್ರೂಫ್ ವಾಹನದಲ್ಲಿ ಕುಳಿತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು 20 ಕೋಟಿ ಭಾರತೀಯರ ಮೇಲೆ ನರಮೇಧ ನಡೆಯುತ್ತಿರುವ ಬಗ್ಗೆ,  ಬಗ್ಗೆ ಜೀವ ಬೆದರಿಕೆ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಯಾಕೆ ಮಿಸ್ಟರ್ ಮೋದಿ? ಎಂದು ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ಟ್ವೀಟ್:  ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳು ದಾಳಿಗೆ ಒಳಗಾಗುತ್ತಿವೆ.  ಮೋದಿ ಸರ್ಕಾರ ತನ್ನ ಮೌನ ಮುಂದುವರಿಸಿದ್ದು ಏನೂ ಹೇಳುತ್ತಿಲ್ಲ. ಭಾರತದಲ್ಲಿನ 200 ಮಿಲಿಯನ್ ಮುಸ್ಲಿಂ ಸಮುದಾಯಕ್ಕೆ ಆತಂಕ ಉಂಟಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆ ಆಗಬೇಕಿದೆ ಎಂದು ಖಾನ್  ಹೇಳಿದ್ದರು.

ಮೂಲ ಎಲ್ಲದೆ?  ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದ  ಭಾಷಣಗಳನ್ನು ಆಧಾರವಾಗಿಟ್ಟುಕೊಂಡು ಇಬ್ಬರು ನಾಯಕರು ಟ್ವೀಟ್ ಮಾಡಿರುವುದು ಗೊತ್ತಾಗುತ್ತಿದೆ.  ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ನಡೆದ ಧರ್ಮ ಸಂಸತ್ತಿನಲ್ಲಿ ಹಿಂದುತ್ವದ ಕುರಿತು ಸಂತರು ಮತ್ತು ಸಂತರ ವಿವಾದಾತ್ಮಕ ಭಾಷಣಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ, ಸಂತರು ಮತ್ತು ಸಂತರು ಧರ್ಮ ರಕ್ಷಣೆಯ ಹೆಸರಿನಲ್ಲಿ ಪ್ರಖರವಾಗಿ ಮಾತನಾಡಿರುವುದು ಇದೆ. ಧರ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಎತ್ತುವುದು, ಮುಸ್ಲಿಮರಿಗೆ ಪ್ರಧಾನಿಯಾಗಲು ಬಿಡುವುದಿಲ್ಲ.  ಮುಸ್ಲಿಂ ಜನಸಂಖ್ಯೆ ಬೆಳೆಯಲು ಬಿಡುವುದಿಲ್ಲ ಎಂದೆಲ್ಲ ಹೇಳಿರುವುದು ಸಹಜವಾಗಿಯೇ ಖಾನ್ ಕೆರಳಿದೆ.

ಸುದ್ದಿ ನಿರೂಪಕರೊಬ್ಬರು ಎರಡು ಟ್ವೀಟ್ ಗಳಲ್ಲಿ ಸಾಮ್ಯತೆ ಗಮನಿಸಿ ಹಂಚಿಕೊಂಡಿದ್ದಾರೆ. ಇದಾದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್ ಆಗಲು ಆರಂಭಿಸಿದೆ. ಕಳೆದ 
ಬುಧವಾರ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದರು. ಭಾರೀ ಮಳೆಯಿಂದಾಗಿ, ಪ್ರಧಾನ ಮಂತ್ರಿ ರಸ್ತೆಯ ಮೂಲಕ ಹೋಗಬೇಕಾಯಿತು, ಆದರೆ ಈ ಸಮಯದಲ್ಲಿ ಪ್ರತಿಭಟನಾಕಾರರು ಹುಸೇನಿವಾಲಾದಿಂದ 30 ಕಿಮೀ ದೂರದಲ್ಲಿ ರಸ್ತೆಗೆ ಅಡ್ಡಲಾಗಿ ನಿಂತಿದ್ದರು.ಪ್ರಧಾನಿ ಮತ್ತು  ಬೆಂಗಾವಲು ಪಡೆ ಸುಮಾರು 20 ನಿಮಿಷಗಳ ಕಾಲ  ಅಸುರಕ್ಷಿತ ಪ್ರದೇಶದಲ್ಲಿ ಕಳೆಯಬೇಕಾದ ಸ್ಥಿತಿ  ನಿರ್ಮಾಣವಾಗಿತ್ತು.

 

Latest Videos
Follow Us:
Download App:
  • android
  • ios