Imran Khan : ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಉತ್ತಮವಾಗಿದೆ ಎಂದ ಪಾಕ್ ಪ್ರಧಾನಿ!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ
ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ವಿಶ್ವ ವಾಣಿಜ್ಯ ಸಮ್ಮೇಳನ
ವಿಶ್ವದ ಇತರ ಎಲ್ಲಾ ದೇಶಗಳಿಗಿಂತ ನಮ್ಮಲ್ಲಿ ಇಂಧನ ಬೆಲೆ ಬಹಳ ಕಡಿಮೆ
ಇಸ್ಲಾಮಾಬಾದ್ (ಜ. 12): ಪಾಕಿಸ್ತಾನದ (Pakistan) ಆರ್ಥಿಕ ಸಂಕಷ್ಟ ಜಗಜ್ಜಾಹಿರಾಗಿದ್ದರೂ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ( Pakistan prime minister Imran Khan) ಪಾಲಿಗೆ ಮಾತರ ಇಂದಿಗೂ ಪಾಕಿಸ್ತಾನದ ಆರ್ಥಿಕತ ಅದ್ಭುತವಾಗಿದೆಯಂತೆ. ಅದರಲ್ಲೂ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತಲೂ (India) ಉತ್ತಮವಾಗಿದೆ ಎಂದು ಇಸ್ಲಾಮಾಬಾದ್ ನಲ್ಲಿ (Islamabad) ಮಂಗಳವಾರ ಆರಂಭಗೊಂಡ ಮೊದಲ ಆವೃತ್ತಿಯ ವಿಶ್ವ ವಾಣಿಜ್ಯ ಸಮ್ಮೇಳನದಲ್ಲಿ (International Chambers Summit)ಹೇಳಿದ್ದಾರೆ. ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಇಮ್ರಾನ್ ಖಾನ್, ವಿಶ್ವದ ಅನೇಕ ದೇಶಗಳಿಗಿಂತ ಪಾಕಿಸ್ತಾನದ ಆರ್ಥಿಕತೆ ಉತ್ತಮವಾಗಿದೆ. ಅದರಲ್ಲೂ ಭಾರತಕ್ಕಿಂತಲೂ ಉತ್ತಮವಾಗಿದೆ ಎಂದು ಹೇಳುವ ಮೂಲಕ ಅಚ್ಚರಿ ನೀಡಿದರು.
ರಾವಲ್ಪಿಂಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (Rawalpindi Chamber of Commerce and Industry ) (ಆರ್‌ಸಿಸಿಐ) ಆಯೋಜಿಸಿದ್ದ ಶೃಂಗಸಭೆಯನ್ನು ಉದ್ಘಾಟಿಸಿದ ಇಮ್ರಾನ್ ಖಾನ್, "ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನ ಇನ್ನೂ ಅಗ್ಗದ ದೇಶಗಳಲ್ಲಿ ಒಂದಾಗಿದೆ. ಹಾಗಿದ್ದರೂ ವಿರೋಧ ಪಕ್ಷದವರು ನಮ್ಮನ್ನು ಅಸಮರ್ಥರು ಎಂದು ಟೀಕೆ ಮಾಡುತ್ತಾರೆ. ಆದರೆ, ನಮ್ಮ ಸರ್ಕಾರ ದೇಶವನ್ನು ಎಲ್ಲಾ ಬಿಕ್ಕಟ್ಟುಗಳಿಂದ ರಕ್ಷಣೆ ಮಾಡಿದೆ ಎನ್ನುವುದು ಅಷ್ಟೇ ಸತ್ಯ' ಎಂದು ಹೇಳಿದ್ದಾರೆ.
ಬೇರೆ ಎಲ್ಲಾ ವಿಚಾರಗಳನ್ನು ಮಾತನಾಡುವುದರೊಂದಿಗೆ, ಪಾಕಿಸ್ತಾನದಲ್ಲಿ ತೈಲ ಬೆಲೆಗಳು (Oil Price)ಇತರ ದೇಶಗಳಿಗಿಂತ ಅಗ್ಗವಾಗಿದೆ. ವಿಶ್ವ ಹಣಕಾಸು ನಿಧಿ (ಐಎಂಎಫ್) (IMF) ಹೇಳಿರುವ ಷರತ್ತಿನ ಭಾಗವಾಗಿ ಮಾತ್ರವೇ ಸರ್ಕಾರವು ಸಂಸತ್ತಿನಲ್ಲಿ ಹಣಕಾಸು ಮಸೂದೆಯನ್ನು ಪರಿಚಯಿಸಿದೆ ಎಂದು ಹೇಳಿದರು. ಹಾಗೇನಾದರೂ ಈ ಮಸೂದೆ ಅಂಗೀಕಾರವಾದಲ್ಲಿ ಪಾಕಿಸ್ತಾನಕ್ಕೆ ಐಎಂಎಫ್ ನಿಂದ 1 ಶತಕೋಟಿ ಡಾಲರ್ ಗೂ ಅಧಿಕ ಧನಸಹಾಯ ಸಿಗಲಿದೆ ಎಂದು ಹೇಳಿದರು.
Mini Budget in Pakistan : ಇಮ್ರಾನ್ ಖಾನ್ , ದಯವಿಟ್ಟು ಪಾಕಿಸ್ತಾನವನ್ನು ಮಾರಬೇಡಿ!
ಈ ಮಸೂದೆಯನ್ನು ಮಂಗಳವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಚರ್ಚೆಗೆ ಇಡಲಾಯಿತು. ಈ ವೇಳೆ ಮಾತನಾಡಿದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನಾಯಕ ಮತ್ತು ನ್ಯಾಷನಲ್ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಸರ್ಕಾರವು "ಕೇವಲ $1 ಬಿಲಿಯನ್‌ಗೆ ಪಾಕಿಸ್ತಾನವನ್ನು ಮಾರಾಟ ಮಾಡಲಾಗುತ್ತಿದೆ" ಎಂದು ಆರೋಪಿಸಿದರು. ಹೆಚ್ಚುತ್ತಿರುವ ಹಣದುಬ್ಬರ ಮತ್ತು ದೇಶದ ವ್ಯಾಪಾರ ಕೊರತೆಯ ಉಲ್ಬಣದ ಮಧ್ಯೆ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ವಿರೋಧ ಪಕ್ಷದ ನಾಯಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಸಾಲ ತೆಗೆದುಕೊಳ್ಳುವ ಸಲುವಾಗಿ ಮಸೂದೆ: ಐಎಂಎಫ್ ಈಗಾಗಲೇ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಮೊತ್ತವನ್ನು ಸಾಲವಾಗಿ ನೀಡಲು ಒಪ್ಪಿದೆ. ಆದರೆ, ಹಣವನ್ನು ನೀಡುವ ಸಲುವಾಗಿ ಕೆಲ ಷರತ್ತುಗಳನ್ನೂ ಮುಂದಿಟ್ಟಿದೆ. ದೇಶದ ಬಜೆಟ್ ಅನ್ನು ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವ ರೀತಿಯಲ್ಲಿ ಮಸೂದೆ ತರಬೇಕು ಎಂದು ಹೇಳಿತ್ತು. ಜನವರಿ 12 ರಂದು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳ ಬಗ್ಗ ಮರುಪರಿಶೀಲನಾ ಸಭೆ ನಡೆಯಲಿದೆ. ಈ ವೇಳೆ ವ್ಯವಸ್ಥಾಪಕ ಮಂಡಳಿ ಒಪ್ಪಿಗೆ ನೀಡಿದಲ್ಲಿ ಮಾತ್ರವೇ ಪಾಕಿಸ್ತಾನಕ್ಕೆ ಈ ಸಾಲದ ಮೊದಲ ಕಂತಿನ ರೂಪದಲ್ಲಿ 1 ಬಿಲಿಯನ್ ಡಾಲರ್ ಹಣ ಸಿಗಲಿದೆ.
PM Security Lapse : ಪ್ರಧಾನಿ ಮೋದಿ ಪಂಜಾಬ್ ರಸ್ತೆಯಲ್ಲಿ ನಿಂತಿದ್ದು ಕಟ್ಟುಕತೆಯಂತೆ!
ಇದನ್ನು ಟೀಕಿಸಿರುವ ಪಾಕ್ ಪ್ರತಿಪಕ್ಷಗಳು, ಹಾಲಿ ಸರ್ಕಾರ ಆರ್ಥಿಕ ನೀತಿಯನ್ನು ಸ್ವಂತ ಬಲದಲ್ಲಿ ಕೈಗೊಳ್ಳುವ ಶಕ್ತಿ ಹೊಂದಿಲ್ಲ. ಐಎಂಎಫ್ ನ ಒತ್ತಡದಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದೆ. ಪಾಕಿಸ್ತಾನ ಮುಸ್ಲೀಂ ಲೀಗ್-ನವಾಜ್ (Pakistan Muslim League-Nawaz) ಪಕ್ಷದ ನಾಯಕ ಖವಾಜಾ ಆಸಿಫ್ (Khawaja Asif), ದೇಶದ ಸೆಂಟ್ರಲ್ ಬ್ಯಾಂಕ್ ನ ಸಂಪೂರ್ಣ ಹಿಡಿತವನ್ನು ಐಎಂಎಫ್ ಗೆ ನೀಡಲಾಗಿದೆ ಎಂದು ಹೇಳಿದೆ.