Asianet Suvarna News Asianet Suvarna News

ಶೀಘ್ರವೇ ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ: ಮದ್ರಾಸದ ವಿದ್ಯಾರ್ಥಿಯಿಂದ ಟ್ವಿಟ್ಟರ್‌ನಲ್ಲಿ ಪೋಸ್ಟ್

ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಶಿಕ್ಷಣ ಕೇಂದ್ರ ಮದ್ರಾಸದ ವಿದ್ಯಾರ್ಥಿಯೋರ್ವ ಪೋಸ್ಟ್ ಈಗ ಕಂಬಿ ಹಿಂದೆ ಕೂತಿದ್ದಾನೆ. 

Another Pulwama attack happen soon A Madrasa student in Deoband Posted in twitter later arrested by ATS akb
Author
First Published Dec 27, 2023, 1:21 PM IST

ಲಖನೌ: ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ  ವಿದ್ಯಾರ್ಥಿಯೋರ್ವ ಪೋಸ್ಟ್ ಈಗ ಕಂಬಿ ಹಿಂದೆ ಕೂತಿದ್ದಾನೆ. ಮುಸ್ಲಿಂ ವಿದ್ಯಾರ್ಥಿ ಮಾಡಿದ ಈ  ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಕೂಡಲೇ ದಿಯೋಬಂದ್ ಪೊಲೀಸರು ವಿದ್ಯಾರ್ಥಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ಎಟಿಎಸ್‌(ಭಯೋತ್ಪಾದನಾ ನಿಗ್ರಹ ದಳ) ವಿದ್ಯಾರ್ಥಿಯನ್ನು ತನ್ನ ಕಸ್ಟಡಿಗೆ ಪಡೆದಿದೆ. 

ಮೊಹಮ್ಮದ್ ತಲ್ಹಾ ಮಝರ್ ಬಂದಿತ ವಿದ್ಯಾರ್ಥಿ, ಈತ ಜಾರ್ಖಂಡ್‌ನ ಜೆಮ್ಶೆಡ್‌ಪುರದ  ಸೆರೈಕೆಲಾ ನಿವಾಸಿಯಾಗಿದ್ದು, ದಿಯೋಬಂದ್‌ನ ದಾರುಲ್ ಉಲೂಮ್ ಮದ್ರಾಸಾದಲ್ಲಿ ಅಧ್ಯಯನ ನಡೆಸುತ್ತಿದ್ದ.  ಈತ ತನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ 'ಬಹುತ್ ಜಲ್ದಿ ಇನ್ ಶ ಅಲ್ಲಾ ದುಸ್ರಾ ಪುಲ್ವಾಮ ಬೀ ಹೋಗ' ಎಂದು ಬರೆದುಕೊಂಡಿದ್ದಾನೆ. ಅಂದರೆ 'ಆದಷ್ಟು ಬೇಗ ಇನ್ನೊಂದು ಪುಲ್ವಾಮ ದಾಳಿ ಆಗಲಿದೆ ಎಂದು'. ಈ ಪೋಸ್ಟ್ ಕೂಡಲೇ ವೈರಲ್ ಆಗಿದ್ದು, ಉತ್ತರಪ್ರದೇಶದ ಸಹ್ರಾನ್‌ಪುರ ಪೊಲೀಸರು ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.  

ಅಪರಿಚಿತನಿಂದ ಪುಲ್ವಾಮಾ ಸಂಚುಕೋರ, ಜೈಶ್‌ ಭಯೋತ್ಪಾದಕ ಅಲಂಗೀರ್‌ ಕಿಡ್ನಾಪ್‌!

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಹ್ರಾನ್‌ಪುರ ಪೊಲೀಸರು ಸುದ್ದಿ ಖಚಿತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಹಾಗೂ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಯುವಕ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನು ಕೂಡ ಪೊಲೀಸರು ವಿಚಾರಣೆಗಾಗಿ ಪಡೆದಿದ್ದಾರೆ. 

ಪುಲ್ವಾಮ ದಾಳಿ ದುರಂತ

2019ರ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು.  ಈ ಕಾರು ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು.  2574 ಯೋಧರನ್ನು ಹೊತ್ತು  78 ಸೇನಾ ಬೆಂಗಾವಲು ವಾಹನಗಳು ಸಾಗುತ್ತಿದ್ದ ವೇಳೆ ಪುಲ್ವಾಮಾದ ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಈ ಬಾಂಬ್ ಸ್ಫೋಟಗೊಂಡಿತ್ತು.

ಪುಲ್ವಾಮಾ ಲೋಪದ ಬಗ್ಗೆ ಮೋದಿ ನನ್ನನ್ನು ಮೌನವಾಗಿಸಿದರು ಎಂದ ಸತ್ಯಪಾಲ್‌ ಮಲಿಕ್: 'ಕೈ'ನಿಂದ ಪ್ರಶ್ನೆಗಳ ಸುರಿಮಳೆ

Follow Us:
Download App:
  • android
  • ios