ಅಪರಿಚಿತನಿಂದ ಪುಲ್ವಾಮಾ ಸಂಚುಕೋರ, ಜೈಶ್‌ ಭಯೋತ್ಪಾದಕ ಅಲಂಗೀರ್‌ ಕಿಡ್ನಾಪ್‌!

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ನಿಬಂಧನೆಗಳ ಅಡಿಯಲ್ಲಿ ಗೃಹ ಸಚಿವಾಲಯವು ಏಪ್ರಿಲ್ 2022 ರಲ್ಲಿ ಅಧಿಕೃತವಾಗಿ ಜೆಇಎಂ ಭಯೋತ್ಪಾದಕ ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.

JeM terrorist Alamgir 2019 Pulwama attack conspirator kidnapped unknown people in Pakistan san

ನವದೆಹಲಿ (ಡಿ.9): ಭಾರತದ ಇತಿಹಾಸ ಮರೆಯದ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಾಗೂ  ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿ ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್‌ನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿದ್ದಾರೆ. ಹಫೀಜಾಬಾದ್‌ನಲ್ಲಿ ಈತನ ಅಪಹರಣ ನಡೆದಿದೆ. ಡೇರಾ ಹಾಜಿ ಗುಲಾಮ್‌ನಲ್ಲಿ ಕುಟುಂಬ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಹರಣಕ್ಕೆ ಕಾರಣರಾದ ಅಪರಿಚಿತ ಕಾರು ಸವಾರರು ಈವರೆಗೂ ಪತ್ತೆಯಾಗಿಲ್ಲ. ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ಘಟನೆಯಲ್ಲಿ 40 ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಈ ದಾಳಿಯ ಬಗ್ಗೆ ಜಾಗತಿಕ ಆಕ್ರೋಶ ಎದ್ದಿರುವುದು ಮಾತ್ರವಲ್ಲದೆ, ಭಾರಯ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿತ್ತು.

ಪಾಕಿಸ್ತಾನದ ಹಫೀಜಾಬಾದ್‌ನಲ್ಲಿ ಅಲಂಗೀರ್‌ನ ಅಪಹರಣ ನಡೆದಿದ್ದು, ಅವರು ಕುಟುಂಬ ಕಾರ್ಯಕ್ರಮಕ್ಕೆ ಈ ವೇಳೆ ತೆರಳಿದ್ದರು.. ಅಪರಿಚಿತ ಕಾರು ಸವಾರರು ಅವರನ್ನು ಸಂಬಂಧಿಕರೊಂದಿಗೆ ಅಡ್ಡಗಟ್ಟಿ, ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಲಂಗೀರ್‌ ಮತ್ತು ಅವನ ಸಂಬಂಧಿ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ, ಅವರ ಸುರಕ್ಷತೆ ಮತ್ತು ಘಟನೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಜೈಶ್‌ ಸಂಘಟನೆಗೆ ಕಳವಳ ವ್ಯಕ್ತವಾಗಿದೆ.

ಅಪಹರಣಕ್ಕೆ ಪ್ರತಿಕ್ರಿಯೆಯಾಗಿ, ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ISI) ಮತ್ತು ಪಾಕಿಸ್ತಾನ ಸೇನೆ ಸೇರಿದಂತೆ ಪಾಕಿಸ್ತಾನಿ ಅಧಿಕಾರಿಗಳು ಹಫೀಜಾಬಾದ್ ಪ್ರದೇಶದಲ್ಲಿ ಅಪರಿಚಿತ ಅಪಹರಣಕಾರರನ್ನು ಬಂಧಿಸಲು ಅನೇಕ ರೈಡ್‌ಗಳನ್ನು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಯತ್ನಗಳ ಹೊರತಾಗಿಯೂ, ಅಪರಿಚಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಈ ನಡುವೆ ಅಲಂಗೀರ್‌ನ ಮೋಟಾರ್‌ ಸೈಕಲ್‌ ನಿರ್ಜನ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ.

ಏಪ್ರಿಲ್ 2022 ರಲ್ಲಿ, ಭಾರತವು ಮೊಹಿಯುದ್ದೀನ್ ಔರಂಗಜೇಬ್ ಅಲಂಗೀರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತು. ಅಲಂಗೀರ್ ಜೆಎಂನ ನಿಧಿ ಸಂಗ್ರಹ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಈ ನಿಧಿಯನ್ನು ಕಾಶ್ಮೀರಕ್ಕೆ ಕಳುಹಿಸುತ್ತಿದ್ದರು ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಲು ಮತ್ತು ಅಫ್ಘಾನಿಸ್ತಾನದ ಸೈನಿಕರ ಒಳನುಸುಳುವಿಕೆಯನ್ನು ಸುಗಮಗೊಳಿಸುವಲ್ಲಿ ಈತ ನಿರತನಾಗಿದ್ದ.

1983 ಜನವರಿ 1 ರಂದು ಜನಿಸಿದ ಅಲಂಗೀರ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ ಮೂಲದವ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ನಿಬಂಧನೆಗಳ ಅಡಿಯಲ್ಲಿ ಗೃಹ ಸಚಿವಾಲಯವು ಕಳೆದ ವರ್ಷ ಅಧಿಕೃತವಾಗಿ ಅಲಂಗೀರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಸಚಿವಾಲಯದ ಪ್ರಕಾರ, ಮಕ್ತಾಬ್ ಅಮೀರ್, ಮುಜಾಹಿದ್ ಭಾಯ್, ಮುಹಮ್ಮದ್ ಭಾಯ್, ಎಂ ಅಮ್ಮರ್, ಮತ್ತು ಅಬು ಅಮ್ಮರ್ ಮೇಡಂ ಸೇರಿದಂತೆ ಹಲವಾರು ಅಲಿಯಾಸ್‌ಗಳಿಂದ ಅಲಂಗೀರ್‌ನನ್ನು ಕರೆಯಲಾಗುತ್ತದೆ.

ಪುಲ್ವಾಮಾ ದಾಳಿಯಾಗದಿದ್ದರೆ ಮೋದಿ ಗೆಲ್ಲುತ್ತಿರಲಿಲ್ಲ: ಶಾಸಕ ಬಾಲಕೃಷ್ಣ ಕೀಳು ಹೇಳಿಕೆ

ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜೆಇಎಂ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಸ್ಗರ್, ಮೃತ ಭಯೋತ್ಪಾದಕ ಮೊಹಮ್ಮದ್ ಉಮರ್ ಫಾರೂಕ್, ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಇತರ ಭಯೋತ್ಪಾದಕ ಕಮಾಂಡರ್‌ಗಳನ್ನು ಪುಲ್ವಾಮಾ ದಾಳಿಯಲ್ಲಿ ಆರೋಪಿಗಳೆಂದು ಗುರುತಿಸಿದೆ. 

News Hour: ‘ಪುಲ್ವಾಮ ದಾಳಿ ಆಗದಿದ್ದರೆ ಮೋದಿ ಪ್ರಧಾನಿ ಆಗ್ತಿರಲಿಲ್ಲ..' ಶಾಸಕ ಎಚ್.ಸಿ ಬಾಲಕೃಷ್ಣ ವಿವಾದ!

Latest Videos
Follow Us:
Download App:
  • android
  • ios