ಪುಲ್ವಾಮಾ ಲೋಪದ ಬಗ್ಗೆ ಮೋದಿ ನನ್ನನ್ನು ಮೌನವಾಗಿಸಿದರು ಎಂದ ಸತ್ಯಪಾಲ್‌ ಮಲಿಕ್: 'ಕೈ'ನಿಂದ ಪ್ರಶ್ನೆಗಳ ಸುರಿಮಳೆ

ಈ ವೇಳೆ, ತನ್ನ ಸಿಬ್ಬಂದಿಯನ್ನು ಸಾಗಿಸಲು ಸಿಆರ್‌ಪಿಎಫ್‌ 5 ವಿಮಾನಗಳನ್ನು ಕೇಳಿತ್ತು, ಆದರೆ ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಬೆಂಗಾವಲು ಪಡೆ ರಸ್ತೆಯ ಮೂಲಕ ಚಲಿಸುವಂತಾಯ್ತು ಮತ್ತು ಮಾರಣಾಂತಿಕ ಭಯೋತ್ಪಾದಕ ಹೊಂಚುದಾಳಿಯ ಗುರಿಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯ ಹತ್ಯೆಗೆ ಕಾರಣವಾಯಿತು ಎಂದೂ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

pm told me chup raho on Pulwama says ex jammu and kashmir governor malik congress calls for answers ash

ಹೊಸದೆಹಲಿ (ಏಪ್ರಿಲ್ 16, 2023): ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಮೃತಟ್ಟಿದ್ದರು. ಆ ಘಟನೆ ನಡೆದು 4 ವರ್ಷಗಳು ಕಳೆದಿದ್ದು, ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪುಲ್ವಾಮಾ ಘಟನೆಯ ಆಪಾದಿತ ಲೋಪಗಳ ಬಗ್ಗೆ ಮೌನವಾಗಿರಲು ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದರು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಇನ್ನು, ಫೆಬ್ರವರಿ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕಳೆದ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ತನ್ನ ಪ್ರಮುಖ ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಒಂದನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್‌, ಸತ್ಯಪಾಲ್‌ ಮಲಿಕ್ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಮೋದಿ ಸರ್ಕಾರಕ್ಕೆ ಆಗ್ರಹಿಸಿದೆ. 

ಇದನ್ನು ಓದಿ: ಪುಲ್ವಾಮಾದಲ್ಲಿ ಗುಂಡಿನ ದಾಳಿ: ಉಗ್ರರ ಗುಂಡಿಗೆ ಮತ್ತೊಬ್ಬರು ಕಾಶ್ಮೀರಿ ಪಂಡಿತರ ಬಲಿ

ಶುಕ್ರವಾರ ಕರಣ್ ಥಾಪರ್‌ ಅವರಿಗೆ ದಿ ವೈರ್‌ ವೆಬ್‌ಸೈಟ್‌ಗೆ ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದ ಸತ್ಯಪಾಲ್‌ ಮಲಿಕ್ ಸಂದರ್ಶನ ನೀಡಿದ್ದಾರೆ. ಈ ವೇಳೆ, ತನ್ನ ಸಿಬ್ಬಂದಿಯನ್ನು ಸಾಗಿಸಲು ಸಿಆರ್‌ಪಿಎಫ್‌ 5 ವಿಮಾನಗಳನ್ನು ಕೇಳಿತ್ತು, ಆದರೆ ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಬೆಂಗಾವಲು ಪಡೆ ರಸ್ತೆಯ ಮೂಲಕ ಚಲಿಸುವಂತಾಯ್ತು ಮತ್ತು ಮಾರಣಾಂತಿಕ ಭಯೋತ್ಪಾದಕ ಹೊಂಚುದಾಳಿಯ ಗುರಿಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯ ಹತ್ಯೆಗೆ ಕಾರಣವಾಯಿತು ಎಂದೂ ಹೇಳಿದ್ದಾರೆ.

ಒಂದು ವೇಳೆ, ‘’ಅವರು ನನ್ನನ್ನು ಕೇಳಿದ್ದರೆ, ನಾನು ಅವರಿಗೆ ವಿಮಾನವನ್ನು ನೀಡುತ್ತಿದ್ದೆ. ಹೇಗಾದರೂ ಸರಿ ಕೊಡುತ್ತಿದ್ದೆ. ಅವರಿಗೆ ಐದು ವಿಮಾನಗಳು ಬೇಕಾಗಿದ್ದವು. ಅದನ್ನು ಒದಗಿಸಲಾಗಿಲ್ಲ ಎಂದೂ ಸತ್ಯಪಾಲ್‌ ಮಲಿಕ್‌ ತಿಳಿಸಿದ್ದಾರೆ. ಅಲ್ಲದೆ, ಅದೇ ಸಂಜೆ ನಾನು (ಇದನ್ನು) ಪ್ರಧಾನ ಮಂತ್ರಿಯವರಿಗೆ ಹೇಳಿದೆ. ನಮ್ಮ ತಪ್ಪಿನಿಂದ ಇದು ಸಂಭವಿಸಿದೆ. ನಾವು ವಿಮಾನವನ್ನು ಒದಗಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಹೇಳಿದೆ. ಅವರು ನನಗೆ ಮೌನವಾಗಿರಲು ಹೇಳಿದರು’’ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ

ಅಲ್ಲದೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಮೌನವಾಗಿರುವಂತೆ ಹೇಳಿದ್ರು ಎಂದೂ ಸತ್ಯಪಾಲ್‌ ಮಲಿಕ್ ಹೇಳಿದ್ದಾರೆ. ಹಾಗೆ, ಪಾಕಿಸ್ತಾನದ ಮೇಲೆ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸಲಾಗುತ್ತಿದೆ ಎಂದು ನಾನು ಆಗಲೇ ಭಾವಿಸಿದೆ ಎಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಲ್ಲೆ. ಆದ್ದರಿಂದ ನಾನು ಮೌನವಾಗಿರಬೇಕಾಗುತ್ತದೆ ಎಂದುಕೊಂಡೆ" ಎಂದೂ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಹೇಳಿದ್ದಾರೆ.

ಇನ್ನು, ಸತ್ಯಪಾಲ್‌ ಮಲಿಕ್ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಮೋದಿ ಸರ್ಕಾರವನ್ನು ಪ್ರಶ್ನಿಸಿದೆ. ಶನಿವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷವು ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. “ಸಿಆರ್‌ಪಿಎಫ್ ಯೋಧರಿಗೆ ವಿಮಾನದಲ್ಲಿ ಪ್ರಯಾಣಿಸಲು ಏಕೆ ಅವಕಾಶ ನೀಡಲಿಲ್ಲ, ಮೋದಿ ಸರ್ಕಾರ ಅದಕ್ಕೆ ಏಕೆ ಅನುಮತಿ ನೀಡಲಿಲ್ಲ? ಜೈಶ್ ಬೆದರಿಕೆಗಳನ್ನು ಏಕೆ ನಿರ್ಲಕ್ಷಿಸಲಾಯಿತು? 2 ಜನವರಿ 2019 ಮತ್ತು 13 ಫೆಬ್ರವರಿ 2019 ರ ನಡುವೆ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದ ಗುಪ್ತಚರ ಮಾಹಿತಿಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ಉಗ್ರಗಾಮಿಗಳು ಇಷ್ಟು ದೊಡ್ಡ ಆರ್‌ಡಿಎಕ್ಸ್ ಅನ್ನು ಹೇಗೆ ಸಂಗ್ರಹಿಸಿದರು? ನಾಲ್ಕು ವರ್ಷಗಳ ಅವಧಿಯ ನಂತರ, ಪುಲ್ವಾಮಾ ಭಯೋತ್ಪಾದನಾ ದಾಳಿಯ ವಿಚಾರಣೆ ಎಲ್ಲಿಗೆ ತಲುಪಿತು? ಎಂದು ಪಕ್ಷದ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಮತ್ತು ಡಿಜಿಟಲ್ ಕಮ್ಯುನಿಕೇಶನ್ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಅವರನ್ನು ಉದ್ದೇಶಿಸಿ ಕಾಂಗ್ರೆಸ್ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ಕೊಟ್ಟಿಲ್ಲ: ಪ್ರೂಫ್‌ ಕೇಳಿದ ಕಾಂಗ್ರೆಸ್‌ ನಾಯಕ

“ಎನ್ಎಸ್ಎ ಅಜಿತ್ ದೋವಲ್ ಮತ್ತು ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಯಾವ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ? ಇಷ್ಟು ದೊಡ್ಡ ಭಯೋತ್ಪಾದನಾ ದಾಳಿಯ ನಂತರ, ಪ್ರಧಾನಿ ಮೋದಿಯವರು ರಾಜ್ಯಪಾಲರನ್ನು ಏಕೆ ಸುಮ್ಮನಿರಿ ಎಂದು ಕೇಳಿದರು? ದೇಶದ್ರೋಹದ ಪ್ರಮಾಣಪತ್ರಗಳನ್ನು ನೀಡುವ ಜನರು ಇದು ದೇಶದ್ರೋಹವೋ ಅಲ್ಲವೋ ಎಂದು ಉತ್ತರಿಸಬೇಕಾಗಿದೆ, ”ಎಂದೂ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Latest Videos
Follow Us:
Download App:
  • android
  • ios