ಕಾಂಪೌಂಡ್ ಗೋಡೆಗೆ ಮಣ್ಣು ಅಗೆಯುತ್ತಿದ್ದ ವೇಳೆ ಪುರಾತನ ಕಲ್ಲು ಹಾಗೂ ಮಣ್ಣಿನ ಆಕೃತಿಗಳು ಪತ್ತೆಯಾಗಿದೆ. ಬರೋಬ್ಬರಿ 400 ವರ್ಷಗಳಿಗೂ ಹಳೇ ಆಕೃತಿಗಳು ಎಂಬುದು ಪ್ರಾಥಮಿಕ ಉತ್ಖನನದಲ್ಲಿ ತಿಳಿದುಬಂದಿದೆ. ಏನಿದರ ಇತಿಹಾಸ

ಮಲಪ್ಪುರಂ (ನ.26) ಹಲವು ಬಾರಿ ಕಾಮಗಾರಿ ವೇಳೆ ಪುರಾತನ ವಸ್ತುಗಳು, ರಾಜ ಮಹಾರಾಜರ ನಿಧಿಗಳು ಪತ್ತೆಯಾದ ಹಲವು ಘಟನೆಗಳು ನಡೆದಿದೆ. ಇತ್ತೀಚೆಗೆ ಕರ್ನಾಟಕದ ಲಕ್ಕುಂಡಿಯಲ್ಲಿ ಪುರಾತನ ದೇವಾಲಯದ ಕುರುಹುಗಳ, ಚಿನ್ನಾಭರಣಗಳು ಪತ್ತೆಯಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಬರೋಬ್ಬರಿ 400 ವರ್ಷಕ್ಕೂ ಹಳೇ ಪುರಾತನ ಕಲ್ಲು ಹಾಗೂ ಮಣ್ಣಿನ ಆಕೃತಿಗಳು ಪತ್ತೆಯಾಗಿದೆ. ಕಾಂಪೌಂಡ್ ಗೋಡೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುವ ವೇಳೆ ಈ ಅಕೃತಿಗಳು ಪತ್ತೆಯಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

ಸಿಯಾದ್ ಜಾಗದ ಕಾಮಗಾರಿಯಲ್ಲಿ ಪುರಾತನ ಆಕೃತಿಗಳು ಪತ್ತೆ

ಸಿಯಾದ್ ಎಂಬುವರಿಗೆ ಸೇರದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಕಾಮಾಗಾರಿ ಆರಂಭಿಸಲಾಗಿತ್ತು. ಇದಕ್ಕಾಗಿ ಮಣ್ಣು ಅಗೆಯುವ ಕಾರ್ಯದ ನಡುವೆ ಅಚಾನಕ್ಕಾಗಿ ಈ ಕಲ್ಲು ಹಾಗೂ ಮಣ್ಣಿನ ಆಕೃತಿಗಳು ಪತ್ತೆಯಾಗಿದೆ. ಕಾಂಪೌಂಡ್ ವಾರ್ ನಿರ್ಮಾಣಕ್ಕಾಗಿ ಆಳದಲ್ಲಿ ಪಾಯ ಅಗೆಯುತ್ತಿದ್ದ ವೇಳೆ ಕಾರ್ಮಿಕರಿಗೆ ಈ ಆಕೃತ್ತಿಗಳು ಪತ್ತೆಯಾಗಿದೆ. ತಕ್ಷಣವೇ ಸಿಯಾದ್‌ಗೆ ಮಾಹಿತಿ ನೀಡಲಾಗಿದೆ. ಹುಲಿ , ಸಿಂಹ ಸೇರಿದಂತೆ ಹಲವು ಆಕೃತಿಗಳು ಪತ್ತೆಯಾಗಿದೆ. ನಾಯಿಯ ಆಕೃತಿ, ರಾಮಾಯಣದಲ್ಲಿ ಶ್ರೀರಾಮನ ಸೇನೆಯಲ್ಲಿದ್ದ ವಾನರ ಸೇನೆಯ ಯೋಧ ವಲಿಮುಖನ ಆಕೃತಿ ಸೇರಿದಂತೆ ಹಲವು ಮುರಿದ ಆಕೃತಿಗಳು ಪತ್ತೆಯಾಗಿದೆ.

ಆಕೃತ್ತಿಗಳು ಪತ್ತೆಯಾಗುತ್ತಿದ್ದಂತೆ ಅಧಿಕಾರಿಗಳಿಗೆ ಮಾಹಿತಿ

ಅಕೃತಿ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ಕಂದಾಯ ಇಲಾಖೆ ಅದಿಕಾರಿಗಳು, ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತಹಶಿಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡಸಿದ್ದಾರೆ. ಮಲಪ್ಪುರಂ ಜಿಲ್ಲಾ ಪಾರಾಂಪರಿಕೆ ವಸ್ತು ಸಂಗ್ರಹಾಲಯದ ಪ್ರತಿನಿಧಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು 400 ವರ್ಷಗಳ ಇತಿಹಾಸವಿರುವ ಪೌರಾಣಿಕ ಆಕೃತಿ ಅನ್ನೋದು ಪತ್ತೆಯಾಗಿದೆ. ಪತ್ತೆಯಾದ ಪುರಾತನ ಆಕೃತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗ್ರಾಮದ ಕಚೇರಿಗೆ ಈ ವಸ್ತುಗಳ ಸ್ಥಳಾಂತರಿಸಲಾಗಿದೆ. ಇದೀಗ ಈ ಜಾಗದಲ್ಲಿ ಪುರಾತನ ಅವಶೇಷಗಳು ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಣ್ಣಿನ ಅಡಿಯಲ್ಲಿ ಹುದುಗಿ ಹೋಗಿರುವ ಈ ಅವಶೇಷಗಳ ಉಳಿದ ಭಾಗಗಳ ಉತ್ಖನನ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲು ಪಾರಪಂರಿಕ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು

ಈ ಮಾಹಿತಿ ಹರಡುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯರು ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ. ಈ ವಸ್ತುಗಳ ಹಿಂದಿನ ಇತಿಹಾಸ ತಿಳಿದುಕೊಳ್ಳಲು ಹಲವರು ಆಸಕ್ತರಾಗಿದ್ದಾರೆ.ಇನ್ನುಳಿದ ಭಾಗಗಳ ಅವಶೇಷಗಳು ಪತ್ತೆಯಾದರೆ ಇತಿಹಾಸ ಪತ್ತೆ ಹಚ್ಚುವುದು ಸುಲಭ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

View post on Instagram