LIVE NOW
India Latest News Live: ಪಾಕ್ ವೆಬ್ಸಿರೀಸ್ ನಿಷೇಧಿಸಿ: ಮೋದಿಗೆ ಚಿತ್ರರಂಗದ ಮನವಿ

ಸಾರಾಂಶ
ನವದೆಹಲಿ: ಡಿ.4ರಂದು ಬಿಡುಗಡೆಯಾಗಲಿರುವ ಪಾಕಿಸ್ತಾನದ ಮೊದಲ ನೆಟ್ ಫ್ಲಿಕ್ಸ್ನ ವೆಬ್ ಸಿರೀಸ್ ‘ಜೋ ಬಚಾಯ್ ಹೈ ಸಂಗ್ ಸಮೈತ್ ಲೋ’ ಟ್ರೇಲರ್ ಬಿಡುಗಡೆಯಾಗಿದೆ. ಆದರೆ ಇದನ್ನು ಭಾರತದಲ್ಲಿ ನಿಷೇಧಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಫರ್ಹತ್ ಇಷ್ತಿಯಾಕ್ ಅವರ ಕಾದಂಬರಿ ಆಧರಿಸಿದ ಸಿರೀಸ್ನಲ್ಲಿ ಫವಾದ್ ಖಾನ್, ಮಹಿರಾ ಖಾನ್ ಮತ್ತು ಸನಮ್ ಸಯೀದ್ ಸೇರಿದಂತೆ ಪಾಕಿಸ್ತಾನದ ಖ್ಯಾತ ತಾರೆಯರು ಅಭಿನಯಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದರೆ ಕಳೆದ ವರ್ಷ ನಡೆದ ಪಹಲ್ಗಾಂ ದಾಳಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ಪಾಕಿಸ್ತಾನ ಕಲಾವಿದರ ಮೇಲಿರುವ ಅಘೋಷಿತ ನಿರ್ಬಂಧದ ಕಾರಣದಿಂದ ಭಾರತದಲ್ಲಿ ಈ ವೆಬ್ ಸಿರೀಸ್ ಬಿಡಗಡೆಯಾಬಾರದು ಎನ್ನುವ ಕೂಗು ಜೋರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯೂಎ) ಮತ್ತು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್ಡಬ್ಲ್ಯೂಐಸಿಇ)ಸಂಘಟನೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದೆ.