- Home
- News
- India News
- Aero India 2027 ಮಿಸ್ ಮಾಡ್ಕೋಬೇಡಿ; ಬೆಂಗಳೂರಲ್ಲೇ ಯುದ್ಧವಿಮಾನಗಳ ಅಬ್ಬರ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಗೊತ್ತಾ?
Aero India 2027 ಮಿಸ್ ಮಾಡ್ಕೋಬೇಡಿ; ಬೆಂಗಳೂರಲ್ಲೇ ಯುದ್ಧವಿಮಾನಗಳ ಅಬ್ಬರ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಗೊತ್ತಾ?
Aero India 2027: ನವದೆಹಲಿ: ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ಉದ್ದೇಶದಿಂದ ರಕ್ಷಣಾ ಸಚಿವಾಲಯ ಹಮ್ಮಿಕೊಳ್ಳುವ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ 2027’ ಬೆಂಗಳೂರಿನ ಯಲಹಂಕದಲ್ಲಿ ಫೆ.8ರಿಂದ 12ರವರೆಗೆ ನಡೆಯಲಿದೆ.

ಏರೋ ಇಂಡಿಯಾ 2027 ಫೆ.8ರಿಂದ 12ರವರೆಗೆ
ನವದೆಹಲಿ: ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ಉದ್ದೇಶದಿಂದ ರಕ್ಷಣಾ ಸಚಿವಾಲಯ ಹಮ್ಮಿಕೊಳ್ಳುವ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ 2027’ ಬೆಂಗಳೂರಿನ ಯಲಹಂಕದಲ್ಲಿ ಫೆ.8ರಿಂದ 12ರವರೆಗೆ ನಡೆಯಲಿದೆ.
ಏರೋ ಇಂಡಿಯಾ 2027: ಜಾಗತಿಕ ಮತ್ತು ದೇಶೀಯ ಪ್ರದರ್ಶಕರ ಬೇಡಿಕೆ ಹೆಚ್ಚಳ
ಜಾಗತಿಕ ಮತ್ತು ದೇಶೀಯ ಪ್ರದರ್ಶಕರ ಬೇಡಿಕೆಯಲ್ಲಿ ಗಣನೀಯ ಏರಿಕೆಯಾಗಿರುವುದರಿಂದ, ರಕ್ಷಣಾ ಉತ್ಪಾದನಾ ಇಲಾಖೆಯು ಏರೋ ಇಂಡಿಯಾ 2027ಕ್ಕಾಗಿ ಪ್ರಮುಖ ಮೂಲಸೌಕರ್ಯ ವಿಸ್ತರಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಪ್ರದರ್ಶನ ಸ್ಥಳಕ್ಕಾಗಿ ಬಂದಿರುವ ಮನವಿಗಳು ಆರಂಭಿಕ ಸಾಮರ್ಥ್ಯಕ್ಕಿಂತ ಸುಮಾರು 12,000 ಚದರ ಮೀಟರ್ಗಳಷ್ಟು ಹೆಚ್ಚಾಗಿದ್ದು, ಇದು ಭಾರತದ ತ್ವರಿತವಾಗಿ ಬೆಳೆಯುತ್ತಿರುವ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಹೊಸ ಮೆಜ್ಜನೈನ್ ವ್ಯವಸ್ಥೆ:
ಗರಿಷ್ಠ ಸಂಖ್ಯೆಯ ಪ್ರದರ್ಶಕರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಒಟ್ಟಾರೆ ಪ್ರದರ್ಶನ ಸ್ಥಳದ ಸಾಮರ್ಥ್ಯವನ್ನು ಹೆಚ್ಚಿಸಲು 2 ಹೊಚ್ಚ ಹೊಸ ಪ್ರದರ್ಶನ ಹ್ಯಾಂಗರ್ಗಳನ್ನು (ವಿಮಾನ ನಿಲ್ಲಿಸುವ ಸ್ಥಳ) ನಿರ್ಮಿಸಲಾಗುತ್ತಿದೆ. ಅಲ್ಲದೆ, ನೆಲದ ವಿಸ್ತೀರ್ಣವನ್ನು ಹೆಚ್ಚಿಸದೆಯೇ ಲಂಬಾಕಾರವಾಗಿ ಸ್ಥಳಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು, ಏರೋ ಇಂಡಿಯಾ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರದರ್ಶಕರು ತಮ್ಮ ಮಳಿಗೆಗಳ ಒಳಗೆ ‘ಮೆಜ್ಜನೈನ್’ (ಮಧ್ಯಂತರ ಮಹಡಿ) ಅನುಮತಿ ನೀಡಲಾಗುತ್ತಿದೆ.
ಏರೋ ಇಂಡಿಯಾ 2027
ಜಾಗತಿಕ ವೈಮಾನಿಕ ದಿಗ್ಗಜರು, ದೇಶೀಯ ಉತ್ಪಾದಕರು ಮತ್ತು ನಾವೀನ್ಯಕಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸುವುದು ರಕ್ಷಣಾ ಉತ್ಪಾದನಾ ಇಲಾಖೆಯ ಗುರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ















