ದಿಲ್ಲಿಯಲ್ಲಿ ಮಾರುವೇಷದಲ್ಲಿ ಉಗ್ರ ಅಮೃತ್‌ಪಾಲ್‌ ಪ್ರತ್ಯಕ್ಷ: ಮಾಸ್ಕ್‌, ಸನ್‌ಗ್ಲಾಸ್‌ ಧರಿಸಿ ಸುತ್ತಾಟ

ಪರಾರಿಯಾದ ಬಳಿಕ ಹರ್ಯಾಣದ ಕುರುಕ್ಷೇತ್ರಕ್ಕೆ ತೆರಳಿದ್ದ ಅಮೃತ್‌ಪಾಲ್‌ ಸಿಂಗ್ ಅಲ್ಲಿಂದ ದೆಹಲಿಗೆ ಹೋಗಿದ್ದ ಎನ್ನಲಾಗಿದೆ. ಇದೀಗ ಅಮೃತ್‌ಪಾಲ್‌ ಸಿಂಗ್ ತನ್ನ ನಕಲಿ ಪಾಸ್‌ಪೋರ್ಟ್‌ ಬಳಸಿ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು ಅಲ್ಲಿನ ತನ್ನ ರಾಯಭಾರ ಕಚೇರಿ ಮೂಲಕ ಅಮೃತ್‌ಪಾಲ್‌ ಸಿಂಗ್‌ ಬಗ್ಗೆ ಕಣ್ಗಾವಲು ವಹಿಸುವಂತೆ ಭಾರತ ಕೋರಿತ್ತು.

amritpal singh seen without turban on delhi street in fresh cctv footage ash

ನವದೆಹಲಿ (ಮಾರ್ಚ್ 29, 2023): ಪಂಜಾಬ್‌ ಪೊಲೀಸರಿಂದ ತೆರೆಮರೆಸಿಕೊಂಡಿರುವ ಸಿಖ್‌ ತೀವ್ರಗಾಮಿ ಹಾಗೂ ಖಲಿಸ್ತಾನ್‌ ಪ್ರತ್ಯೇಕ ರಾಷ್ಟ್ರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ದೆಹಲಿಯ ಸಂಚರಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ. ತಾನು ಯಾವಾಗಲೂ ಧರಿಸುತ್ತಿದ್ದ ಸಿಖ್‌ ಪೇಟವನ್ನು ಧರಿಸದೆ ಸ್ಟೈಲಿಶ್‌ ಕನ್ನಡಕ ಹಾಗೂ ಜಾಕೆಟ್‌ ಧರಿಸಿರುವ ಅಮೃತ್‌ಪಾಲ್‌ ಸಿಂಗ್‌, ತನ್ನ ಸಹಚರ ಪಪಲ್‌ಪ್ರೀತ್‌ ಸಿಂಗ್‌ ಜತೆ ಮಾಸ್ಕ್‌ ಧರಿಸಿ ಓಡಾಡುತ್ತಿರುವ ದೃಶ್ಯ ಮಾರ್ಚ್‌ 21 ರಂದು ಸೆರೆಯಾಗಿದೆ.

ಪರಾರಿಯಾದ ಬಳಿಕ ಹರ್ಯಾಣದ ಕುರುಕ್ಷೇತ್ರಕ್ಕೆ ತೆರಳಿದ್ದ ಅಮೃತ್‌ಪಾಲ್‌ ಸಿಂಗ್ ಅಲ್ಲಿಂದ ದೆಹಲಿಗೆ ಹೋಗಿದ್ದ ಎನ್ನಲಾಗಿದೆ. ಇದೀಗ ಅಮೃತ್‌ಪಾಲ್‌ ಸಿಂಗ್ ತನ್ನ ನಕಲಿ ಪಾಸ್‌ಪೋರ್ಟ್‌ ಬಳಸಿ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು ಅಲ್ಲಿನ ತನ್ನ ರಾಯಭಾರ ಕಚೇರಿ ಮೂಲಕ ಅಮೃತ್‌ಪಾಲ್‌ ಸಿಂಗ್‌ ಬಗ್ಗೆ ಕಣ್ಗಾವಲು ವಹಿಸುವಂತೆ ಭಾರತ ಕೋರಿತ್ತು. ಇದಕ್ಕೆ ನೇಪಾಳ ಸಮ್ಮತಿಸಿತ್ತು.

ಇದನ್ನು ಓದಿ: ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್‌ ಪೊಲೀಸರ ವಿಚಾರಣೆ

ಅಮೃತ್‌ ಆಪ್ತನಿಗೆ ಪಾಕ್‌ನ ಐಎಸ್‌ಐ ನಂಟು: ಪಾಕ್‌ ಮಾಜಿ ಸೇನಾ ಮುಖ್ಯಸ್ಥನ ಪುತ್ರನ ಜತೆ ಲಿಂಕ್‌
ಪಂಜಾಬ್‌ ಪೊಲೀಸರಿಂದ ತಲೆ ಮರೆಸಿಕೊಂಡಿರುವ ಸಿಖ್‌ ತೀವ್ರಗಾಮಿ ಹಾಗೂ ಖಲಿಸ್ತಾನ್‌ ಪ್ರತ್ಯೇಕ ರಾಷ್ಟ್ರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ನ ಅತ್ಯಾಪ್ತ ದಲ್ಜಿತ್‌ ಕಾಲ್ಸಿ ಎಂಬಾತ ಪಾಕಿಸ್ತಾನ ಗೂಢಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾನೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಅಲ್ಲದೇ ಪಾಕಿಸ್ತಾನದ ಮಾಜಿ ಮಿಲಿಟರಿ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಪುತ್ರ ಸಾದ್‌ ಬಜ್ವಾನ ಆಪ್ತನಾಗಿರುವ ಕಾಲ್ಸಿ, ಸಾದ್‌ನ ದುಬೈ ಮೂಲದ ಕಂಪನಿಯೊಂದಿಗೆ ಕೈ ಜೋಡಿಸಿದ್ದಾನೆ ಎನ್ನಲಾಗಿದೆ. 2 ತಿಂಗಳಿನಿಂದ ದುಬೈನಲ್ಲಿ ವಾಸಿಸುತ್ತಿರುವ ಕಾಲ್ಸಿಗೆ ಖಲಿಸ್ತಾನ್‌ ಉಗ್ರ ಲಂಡಾ ಎಂಬಾತ ದುಬೈನಲ್ಲಿ ಅಕ್ರಮ ವ್ಯವಸ್ಥೆ ಮಾಡಿಕೊಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಅಫೇರ್‌, ಬ್ಲ್ಯಾಕ್‌ಮೇಲ್‌: ಹನಿಮೂನ್‌ಗೆ ಹೋಗೋಣ ಎಂದು ಚಾಟ್‌ ಮಾಡಿದ್ದ ವಿವಾಹಿತ ಅಮೃತ್‌ಪಾಲ್‌ ಸಿಂಗ್..!

ಈ ಹಿಂದೆ ದೆಹಲಿಯಲ್ಲಿ ನೆಲೆಸಿದ್ದ ಕಾಲ್ಸಿ, ಪಂಜಾಬ್‌ ಚಲನಚಿತ್ರದ ರಂಗದಲ್ಲಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಾಲ್ಸಿ ಅಮೃತ್‌ನ ಅತ್ಯಾಪ್ತ ಸ್ನೇಹಿತನಾಗಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. 

ಕೆನಡಾ: ತಿಂಗಳಲ್ಲಿ 2ನೇ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ
ಟೊರಂಟೊ: ಕೆನಡಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಶಂಕಿತ ಖಲಿಸ್ತಾನಿ ಕಾರ್ಯಕರ್ತರು ಮಂಗಳವಾರ ವಿರೂಪಗೊಳಿಸಿದ್ದಾರೆ. ಇದು ಕಳೆದ 1 ತಿಂಗಳಲ್ಲಿ ಖಲಿಸ್ತಾನಿಗಳಿಂದ ವಿರೂಪಕ್ಕೆ ಒಳಗಾದ 2ನೇ ಮಹಾತ್ಮಾ ಗಾಂಧಿ ಪ್ರತಿಮೆಯಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

ಇಲ್ಲಿನ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದ ಸಿಮೋನ್‌ ಫ್ರೇಸರ್‌ ವಿಶ್ವವಿದ್ಯಾಲಯದ ಬರ್ನ್‌ಬೈ ಆವರಣದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಈಗ ವಿರೂಪ ಮಾಡಲಾಗಿದೆ.
ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಅಲ್ಲಿನ ಭಾರತ ರಾಯಭಾರ ಕಚೇರಿ, ‘ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಶಾಂತಿದೂತರಾದ ಮಹಾತ್ಮ ಗಾಂಧಿ ಅವರು ಪ್ರತಿಮೆಯನ್ನು ಖಲಿಸ್ತಾನಿಗಳು ವಿರೂಪಗೊಳಿಸಿರುವುದು ಹ್ಯೇಯ ಕೃತ್ಯವಾಗಿದೆ. ಈ ಘಟನೆ ಬಗ್ಗೆ ಕೆನಡಾ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದೆ.

ಉಗ್ರ ಅಮೃತ್‌ಪಾಲ್‌ ಮತ್ತೆ ಪರಾರಿ
ಚಂಡೀಗಢ: ಖಲಿಸ್ತಾನಿ ಉಗ್ರ ಅಮೃತ್‌ ಪಾಲ್‌ ಸಿಂಗ್‌ ಮತ್ತೊಮ್ಮೆ ಪೊಲೀಸರಿಂದ ಪರಾರಿಯಾಗಿದ್ದಾನೆ. ಮಂಗಳವಾರ ರಾತ್ರಿ ಪಂಜಾಬ್‌ನ ಹೋಶಿಯಾರ್‌ಪುರದ ಬಳಿ ಕಾಣಿಸಿಕೊಂಡಿದ್ದ ಅಮೃತ್‌ಪಾಲ್‌ ಹಾಗೂ ಆತನ ಬೆಂಬಲಿಗ ಪಾಪಲ್‌ಪ್ರೀತ್‌ ಸಿಂಗ್‌ರನ್ನು ಪೊಲೀಸರು ಬೆನ್ನತ್ತಿದ್ದರು. ಆದರೆ ಈ ಬಾರಿಯೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಲು ಪಾಲ್‌ ಯಶಸ್ವಿಯಾಗಿದ್ದಾನೆ. ಬಿಳಿಬಣ್ಣದ ಇನ್ನೋವಾ ಕಾರಿನಲ್ಲಿ ಅಮೃತ್‌ಪಾಲ್‌ ಸಿಂಗ್ ಪರಾರಿಯಾಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಪರಾರಿಯಾದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಹೈ ಅಲರ್ಟ್‌..!

Latest Videos
Follow Us:
Download App:
  • android
  • ios