ಇವಳೇ ನೋಡಿ ಖಲಿಸ್ತಾನಿ ಉಗ್ರನ ಎನ್‌ಆರ್‌ಐ ಪತ್ನಿ: ವಿದೇಶಿ ಹಣದ ಮೂಲದ ಬಗ್ಗೆಯೂ ಪಂಜಾಬ್ ಪೊಲೀಸರ ವಿಚಾರಣೆ
ಪಂಜಾಬ್ ಪೊಲೀಸರು ಅಮೃತ್‌ಪಾಲ್, ಅವರ ಪತ್ನಿ, ತಂದೆ ಮತ್ತು ಇತರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಸ್ಕ್ಯಾನ್ ಮಾಡುವುದರ ಮೂಲಕ ಫಂಡಿಂಗ್ ಮೂಲದ ಕಾರ್ಯವಿಧಾನವನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂಡೀಗಢ (ಮಾರ್ಚ್ 23, 2023): ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಪರಾರಿಯಾಗಿ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಮತ್ತು ನಾಪತ್ತೆಯಾಗಿರುವ ವಾರಿಸ್ ಪಂಜಾಬ್ ದೇ ಮುಖ್ಯಸ್ಥನಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ. ಈ ಹುಡುಕಾಟದ ನಡುವೆಯೇ ಅಮೃತಸರದ (ಗ್ರಾಮೀಣ ಪೊಲೀಸರು) ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಖಲಿಸ್ತಾನಿ ಉಗ್ರನ ಪತ್ನಿ ಕಿರಣ್‌ದೀಪ್ ಕೌರ್ ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ಪ್ರಶ್ನಿಸಿದ್ದಾರೆ.
ಹೌದು, ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ಪೊಲೀಸ್ ತಂಡವು ಅಮೃತ್‌ಪಾಲ್ ಸಿಂಗ್ ಪತ್ನಿ ಕಿರಣ್‌ದೀಪ್ ಕೌರ್, ತಂದೆ ತಾರ್ಸೆಮ್ ಸಿಂಗ್ ಮತ್ತು ತಾಯಿಯನ್ನು ಬುಧವಾರ ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಮೂಲಗಳ ಪ್ರಕಾರ, ಅಮೃತ್‌ಪಾಲ್ ಸಿಂಗ್ ಚಟುವಟಿಕೆಗಳಿಗೆ ವಿದೇಶಿ ಧನಸಹಾಯ ಆರೋಪಕ್ಕೆ ಸಂಬಂಧಿಸಿದಂತೆ ಜಲ್ಲುಪುರ್ ಖೇಡಾ ಗ್ರಾಮದಲ್ಲಿ ಕಿರಣ್‌ದೀಪ್ ಕೌರ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.
ಇದನ್ನು ಓದಿ: ಅಫೇರ್, ಬ್ಲ್ಯಾಕ್‌ಮೇಲ್: ಹನಿಮೂನ್‌ಗೆ ಹೋಗೋಣ ಎಂದು ಚಾಟ್ ಮಾಡಿದ್ದ ವಿವಾಹಿತ ಅಮೃತ್‌ಪಾಲ್ ಸಿಂಗ್..!
ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಕಾರು ಬದಲಿಸಿ, ತನ್ನ ಬಟ್ಟೆ ಮತ್ತು ಪೇಟವನ್ನು ಬದಲಿಸಿ, ನಂತರ ತಪ್ಪಿಸಿಕೊಳ್ಳಲು ಮೋಟಾರ್ ಸೈಕಲ್ ಬಳಸಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದರು. ಬೈಕ್ ಮಾತ್ರವಲ್ಲದೆ ಕಾರು, ಕಾರ್ಟ್ ಅನ್ನೂ ಬಳಸಿ ತಪ್ಪಿಸಿಕೊಂಡಿದ್ದು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದಾನೆ.
ಕಿರಣ್‌ದೀಪ್ ಕೌರ್ ಯಾರು..?
ಅಮೃತಪಾಲ್ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ಯುಕೆಯ ಎನ್‌ಆರ್‌ಐ ಕಿರಣದೀಪ್ ಕೌರ್ ಅವರನ್ನು ವಿವಾಹವಾದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಫೆಬ್ರವರಿಯಲ್ಲಿ ಅಮೃತಪಾಲ್ ಸಿಂಗ್ ರೊಂದಿಗಿನ ವಿವಾಹದ ನಂತರ, ಕಿರಣ್‌ದೀಪ್ ಕೌರ್ ಪಂಜಾಬ್‌ಗೆ ತೆರಳಿದ್ದು ಮತ್ತು ಈಗ ಅಮೃತ್‌ಪಾಲ್‌ನ ಪೂರ್ವಜರ ಗ್ರಾಮವಾದ ಜಲ್ಲುಪುರ್ ಖೇಡಾದಲ್ಲಿ ನೆಲೆಸಿದ್ದಾರೆ. ಇನ್ನು, ಕಿರಣ್‌ದೀಪ್ ಕೌರ್ ಕುಟುಂಬದ ಬೇರುಗಳು ಸಹ ಜಲಂಧರ್‌ನಲ್ಲಿವೆ ಎನ್ನಲಾಗಿದೆ.
ಇದನ್ನೂ ಓದಿ: ಸೇಡಿಗೆ ಸೇಡು: ದೆಹಲಿಯ ಯುಕೆ ಹೈಕಮೀಷನ್‌ಗೆ ವಿಶೇಷ ಭದ್ರತೆ ರದ್ದು, ಬ್ಯಾರಿಕೇಡೂ ಇಲ್ಲ..!
ಕಿರಣ್‌ದೀಪ್ ಕೌರ್ ಮತ್ತು ಅಮೃತ್‌ಪಾಲ್ ಸಿಂಗ್ ಅವರ ವಿವಾಹವು ನಟ-ಕಾರ್ಯಕರ್ತ ದೀಪ್ ಸಿಧು ಆರಂಭಿಸಿದ್ದ ವಾರಿಸ್ ಪಂಜಾಬ್ ದೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ತಿಂಗಳ ನಂತರ ನಡೆಯಿತು. ಇನ್ನು, ಅಮೃತ್‌ಪಾಲ್ ಸಿಂಗ್ ಚಟುವಟಿಕೆಗಳಿಗೆ ವಿದೇಶಿ ಧನಸಹಾಯದ ಕುರಿತು ಪಂಜಾಬ್ ಪೊಲೀಸರು ಯುಕೆ ಮೂಲದ ಎನ್‌ಆರ್‌ಐ ಆಗಿರುವ ಕಿರಣ್‌ದೀಪ್ ಕೌರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಹಣದ ಮೂಲದ ಬಗ್ಗೆ ತನಿಖೆ
ಖಲಿಸ್ತಾನಿ ಉಗ್ರನ ಪತ್ನಿಯನ್ನು ಒಂದು ಗಂಟೆ ವಿಚಾರಣೆ ನಡೆಸಿದ್ದರೂ, ಸುದೀರ್ಘ ವಿಚಾರಣೆಯ ಫಲಿತಾಂಶದ ಬಗ್ಗೆ ಪೊಲೀಸ್ ಅಧಿಕಾರಿಗಳು ಬಾಯಿ ಬಿಟ್ಟಿಲ್ಲ. ಅಮೃತ್‌ಪಾಲ್ ಸಿಂಗ್ ಸಹಾಯಕ ದಿಲ್ಜಿತ್ ಕಲ್ಸಿಯ ವಿಚಾರಣೆಯ ನಂತರ ಬೆಳಕಿಗೆ ಬಂದ ಸತ್ಯಗಳನ್ನು ಹೊರತುಪಡಿಸಿ ಯಾವುದೇ ಹಣದ ಜಾಡು ಇದುವರೆಗೆ ಸ್ಥಾಪಿಸಲಾಗಿಲ್ಲ. ಖಲಿಸ್ತಾನಿ ನಾಯಕ ವಿವಿಧ ವಿದೇಶಿ ಮೂಲಗಳಿಂದ ಸುಮಾರು 35 ಕೋಟಿ ರೂಪಾಯಿಗಳನ್ನು ಪಡೆದಿದ್ದಾನೆ ಎಂದು ಹೇಳಲಾಗಿದೆ.
ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?
ಪಂಜಾಬ್ ಪೊಲೀಸರು ಅಮೃತ್‌ಪಾಲ್, ಅವರ ಪತ್ನಿ, ತಂದೆ ಮತ್ತು ಇತರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಸ್ಕ್ಯಾನ್ ಮಾಡುವುದರ ಮೂಲಕ ಫಂಡಿಂಗ್ ಮೂಲದ ಕಾರ್ಯವಿಧಾನವನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳಿಂದ ಪಡೆದ ಹಣವನ್ನು ಖರ್ಚು ಮಾಡಿ ತನಗಾಗಿ ಮತ್ತು ತನ್ನ ಪುರುಷರಿಗಾಗಿ ಅಮೃತ್‌ಪಾಲ್ ಸಿಂಗ್ ವಿದೇಶಿ ಮೂಲಗಳಿಂದ ಪಡೆದ ಹಣವನ್ನು ಖರ್ಚು ಮಾಡಿ ತನಗಾಗಿ ಮತ್ತು ತನ್ನ ಪುರುಷರಿಗಾಗಿ ಹೊಸ ಎಸ್‌ಯುವಿಗಳನ್ನು ಖರೀದಿಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಅಮೃತ್‌ಪಾಲ್ ಸಿಂಗ್ ವಿದೇಶಿ ಖಲಿಸ್ತಾನಿ ಸಹಾನುಭೂತಿದಾರರ ಮೂಲಕ ಪಡೆದ ಹಣದಿಂದ ಅಕ್ರಮ ಶಸ್ತ್ರಾಸ್ತ್ರಗಳ ಜೊತೆಗೆ 35 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಖರೀದಿಸಿದ್ದ ಹಾಗೆ, ಖಲಿಸ್ತಾನಿ ಉಗ್ರ ಐಎಸ್‌ಐ ಜೊತೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಸಲುವಾಗಿ ಯುವ ಸಿಖ್ಖರನ್ನು ತನ್ನ ಗುಂಪಿನ ಅಡಿಯಲ್ಲಿ ತರಲು ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..