80-90 ರ ದಶಕದ ಮಕ್ಕಳ ಫೇವರೇಟ್ ರಸ್ನಾ ಜ್ಯೂಸ್ ಸಂಸ್ಥಾಪಕ ಇನ್ನಿಲ್ಲ...
ರಸ್ನಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಪಾನೀಯಗಳ ಬೆಲೆ ಅತ್ಯಂತ ದುಬಾರಿಯಾಗಿದ್ದ ಸಮಯದಲ್ಲಿ ಜನ ಸಾಮಾನ್ಯರೂ ಪಾನೀಯ ರುಚಿ ನೋಡುವಂತೆ ಮಾಡಿದ ರಸ್ನಾದ ಸಂಸ್ಥಾಪಕ ಆರೀಜ್ ಫಿರೋಜ್‌ಶಾ ಖಂಬ್ವಟಾ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 85 ವರ್ಷ ವಯಸ್ಸಾಗಿತ್ತು.
ಅಹ್ಮದಾಬಾದ್: ರಸ್ನಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಪಾನೀಯಗಳ ಬೆಲೆ ಅತ್ಯಂತ ದುಬಾರಿಯಾಗಿದ್ದ ಸಮಯದಲ್ಲಿ ಜನ ಸಾಮಾನ್ಯರೂ ಪಾನೀಯ ರುಚಿ ನೋಡುವಂತೆ ಮಾಡಿದ ರಸ್ನಾದ ಸಂಸ್ಥಾಪಕ ಆರೀಜ್ ಫಿರೋಜ್‌ಶಾ ಖಂಬ್ವಟಾ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಗುಜರಾತ್ ಅಹ್ಮದಾಬಾದ್‌ನಲ್ಲಿ ಅವರು ನಿನ್ನೆ ನಿಧನಾರಾಗಿದ್ದಾರೆ ಎಂದು ರಸ್ನಾ ಸಂಸ್ಥೆ ತಿಳಿಸಿದೆ. ಪಾರ್ಸಿ ಸಮುದಾಯದ ಈ ಉದ್ಯಮಿ ಪತ್ನಿ ಪರ್ಸಿಸ್ (Persis), ಮಕ್ಕಳಾದ ಫಿರೋಝ್ (Piruz), ಡೆಲ್ನಾ(Delna), ರುಜಾನ್(Ruzan) ಹಾಗೂ ಸೊಸೆ ಬಿನೈಶಾ (Binaisha), ಮೊಮ್ಮಕಳಾದ ಅರ್ಜಿನ್, ಅರ್ಜಾದ್ ಅವನ್, ಅರೀಜ್ (Areez) ಫಿರೋಜಾ ಅರ್ನಾವಾಜ್ (Arnavaz) ಅವರನ್ನು ಅಗಲಿದ್ದಾರೆ.
ದಶಕಗಳ ಹಿಂದೆ ತಮ್ಮ ತಂದೆ ಫಿರೋಜ್ ಖಂಬ್ವಟಾ (Phiroja Khambatta) ಅವರು ಸ್ಥಾಪಿಸಿದ ಸಾಧಾರಣವಾದ ಸಂಸ್ಥೆಯನ್ನು ಪುತ್ರ ಆರೀಜ್ ಫಿರೋಜ್‌ಶಾ ಖಂಬ್ವಟಾ ವಿಶಾಲವಾಗಿ ಪ್ರಪಂಚದಾದ್ಯಂತ ಬೆಳೆಸಿದರು. ಇಂದು ಸುಮಾರು 60 ದೇಶಗಳಲ್ಲಿ ರಸ್ನಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪಾನೀಯಗಳಿಗೆ ದುಬಾರಿ ಬೆಲೆ ಇದ್ದ 1970ರ ಕಾಲದಲ್ಲಿ ಆರೀಜ್ ಅವರು ಕೈಗೆಟುಕುವ ಬೆಲೆಯಲ್ಲಿ ಈ ತ್ವರಿತವಾಗಿ ಪಾನೀಯ (soft drink products) ತಯಾರಿಸುವ ರಸ್ನಾ ಪೌಡರ್‌ನ್ನು ಜನ ಸಾಮಾನ್ಯರ ಕೈಗೂ ಸಿಗುವಂತೆ ಮಾಡಿದರು. ಪ್ರಸ್ತುತ ಇದು ದೇಶದ 1.8 ಮಿಲಿಯನ್‌ಗೂ ಹೆಚ್ಚು ಚಿಲ್ಲರೆ ಅಂಗಡಿಗಳಲ್ಲಿ ದೊರೆಯುತ್ತಿದೆ. ಇದು ಇಂದು ಜಗತ್ತಿನ ಅತ್ಯಂತ ದೊಡ್ಡ ಉತ್ಪಾದಕ ಕೇಂದ್ರಿಕೃತವಾದ ಪಾನೀಯವಾಗಿದೆ.
Reliance Retail ಕ್ಯಾಂಪಾ ಕೋಲಾ ಸ್ವಾಧೀನಪಡಿಸಿಕೊಂಡಿದ್ದೇಕೆ..? ಪೆಪ್ಸಿ, ಕೋಕ್‌ಗೆ ಆತಂಕ ಶುರು..!
ಕೆಲವು ವರ್ಷಗಳ ಹಿಂದೆ ಅರೀಜ್ ಖಂಬಟ್ಟ (Areez Khambatta) ಅವರು ತಮ್ಮ ಪುತ್ರ ಫಿರೋಜ್ ಖಂಬಟ್ ಅವರಿಗೆ ತಮ್ಮ ಸಂಸ್ಥೆಗಳ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಅರೀಜ್ ಖಂಬಟ್ಟ ಅವರು ಭಾರತದ ಕೈಗಾರಿಕೆಗಳಿಗೆ ಅಪೂರ್ವವಾದ ಕೊಡುಗೆ ನೀಡಿದ್ದು, ಅವರ ವ್ಯವಹಾರಗಳು (business) ಭಾರತದ ಸಾಮಾಜಿಕ ಬೆಳವಣಿಗೆಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ರಸ್ನಾ ಗ್ರೂಪ್ ಹೇಳಿದೆ. ಪಾರ್ಸಿ ಇರಾನಿ ಝಾರ್ಥೋಸ್ಟಿಸ್‌ನ (Parsi Irani Zarthostis) ಅಧ್ಯಕ್ಷರಾಗಿಯೂ ಕೆಲ ಕಾಲ ಖಂಬಟ್ ಅವರು ಕಾರ್ಯ ನಿರ್ವಹಿಸಿದ್ದರು.
60 ಆಗುತ್ತಿದ್ದಂತೆ 'ವಿಶೇಷ ಉದ್ಯೋಗಿ'ಗೆ ನಿವೃತ್ತಿ ನೀಡಿದ ಸ್ಪ್ರೈಟ್
ಇಂದಿಗೂ ಜನ ರಸ್ನಾ ಎಂದರೆ ವಾಹ್ ಎನ್ನುತ್ತಾರೆ. ಅಲ್ಲದೇ ರಸ್ನಾ ಜೊತೆಗಿನ ತಮ್ಮ ಹಲವು ಅನುಭಗಳನ್ನು ಬಿಚ್ಚಿಡುತ್ತಾರೆ. 80 ಹಾಗೂ 90 ದಶಕದ ಮಕ್ಕಳ ಫೇವರೇಟ್ ಲಿಸ್ಟ್‌ನಲ್ಲಿ ಈ ರಸ್ನಾ ಜಾಗ ಪಡೆದಿದೆ. ಅನೇಕ ಸಾಮಾಜಿಕ ಜಾಲತಾಣದ ಕೇಲ ಮೀಮ್ಸ್ ಪೇಜ್‌ಗಳು 80 -90ರ ದಶಕದ ಇಷ್ಟದ ವಸ್ತುಗಳು ಸುಂದರ ನೆನಪುಗಳ ಲಿಸ್ಟ್‌ನಲ್ಲಿ ಈ ರಸ್ನಾವನ್ನು ಮೊದಲಿಗಿಟ್ಟಿದ್ದಾರೆ. ಕೆಲವರು ಮನೆಗೆ ದಿಢೀರ್ ನೆಂಟರು ಬಂದಾಗ ಅಮ್ಮ ರಸ್ನಾ ಪ್ಯಾಕೇಟ್ ತರಲು ದುಡ್ಡು ಕೊಟ್ಟು ಅಂಗಡಿಗೆ ಓಡಿಸುತ್ತಿದ್ದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!