Asianet Suvarna News Asianet Suvarna News

60 ಆಗುತ್ತಿದ್ದಂತೆ 'ವಿಶೇಷ ಉದ್ಯೋಗಿ'ಗೆ ನಿವೃತ್ತಿ ನೀಡಿದ ಸ್ಪ್ರೈಟ್

60-62 ಆಗುತ್ತಿದ್ದಂತೆ ಸರ್ಕಾರಿ ಕೆಲಸದಲ್ಲಿರುವವರು ನಿವೃತ್ತಿ ಪಡಯುತ್ತಾರೆ. ಆದರ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆಯೂ ಕೂಡ ಈಗ ತನ್ನ ವಿಶೇಷ ಉದ್ಯೋಗಿಗೆ ನಿವೃತ್ತಿ ನೀಡಿದೆ.

sprite give retirment to green bottle, Sprite will no longer available in green bottles akb
Author
Mumbai, First Published Jul 30, 2022, 6:52 PM IST

60-62 ಆಗುತ್ತಿದ್ದಂತೆ ಸರ್ಕಾರಿ ಕೆಲಸದಲ್ಲಿರುವವರು ನಿವೃತ್ತಿ ಪಡಯುತ್ತಾರೆ. ಆದರ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆಯೂ ಕೂಡ ಈಗ ತನ್ನ ವಿಶೇಷ ಉದ್ಯೋಗಿಗೆ ನಿವೃತ್ತಿ ನೀಡಿದೆ. ಯಾರು ಆ ವಿಶೇಷ ಅತಿಥಿ ಅಂತಿರಾ? ಬಾಟಲ್‌ ಕಾಣ್ರೀ. ಕೋಕಾ ಕೋಲಾದ ಸಂಸ್ಥೆಯ ಉತ್ಪನ್ನವಾಗಿರುವ ಸ್ಪ್ರೈಟ್ ತನ್ನ ಸಾಂಪ್ರದಾಯಿಕ ಹಸಿರು ಬಣ್ಣದ ಬಾಟಲ್‌ಗೆ ಗುಡ್‌ ಬೈ ಹೇಳಿದ್ದು, ಅದರ ಬದಲು ನೀರಿನ ಬಣ್ಣದ ಬಾಟಲ್‌ನಲ್ಲಿ ಇನ್ನು ಮುಂದೆ ಸ್ಪ್ರೈಟ್ ವಿತರಣೆ ಮಾಡಲು ನಿರ್ಧರಿಸಿದೆ.

ಸ್ಪ್ರೈಟ್ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಇದುವರೆಗೂ ಹಸಿರು ಬಣ್ಣದ ಬಾಟಲ್‌ಗಳಲ್ಲೇ ವಿತರಣೆಯಾಗುತ್ತಿತ್ತು. ಆದರೆ ಬಹುಶಃ ಸಂಸ್ಥೆಗೂ ಈ ಬಗ್ಗೆ ಬೋರೆನಿಸಿದೆಯೋ ಏನೋ ಅದು ತನ್ನ ಬಣ್ಣವನ್ನು ಬದಲಿಸಿದೆ. ಇದರ ಹಿಂದೆ ಪರಿಸರದ ಕಾಳಜಿಯ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಸುಸ್ಥಿರ ಅಭಿವೃದ್ಧಿ ಪರ್ಯಾಯವಾಗಿ ಬಿಳಿ ಬಣ್ಣದ ಬಾಟಲಿಯನ್ನು ಬಿಡುಗಡೆಗೊಳಿಸಿದೆ. ಇದು 'ಪ್ಲಾಸ್ಟಿಕ್ ಪ್ಯಾಕೇಜಿಂಗ್‌ಗಾಗಿ ಆರ್ಥಿಕತೆಯನ್ನು ಬೆಂಬಲಿಸಿ' ಈ ನಿರ್ಧಾರ ಕೈಗೊಂಡಿದೆ. 

ಸ್ಪ್ರೈಟ್‌ನ ಹಸಿರು ಬಾಟಲಿಗಳ ಹಸಿರು ಪಾಲಿಎಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪ್ಯಾಕೇಜಿಂಗ್ ಅನ್ನು ಮರುಬಳಕೆ ಮಾಡಬಹುದಾದರೂ, ಅದನ್ನು ಇತರ ಸ್ಪಷ್ಟ ವಸ್ತುಗಳಿಂದ ಪ್ರತ್ಯೇಕಿಸಲಾಗಿದೆ. ಇದರಿಂದಾಗಿ ಹೊಸ ಬಾಟಲಿಗಳನ್ನು ತಯಾರಿಸಲು ಬಳಸುವ ವೇಳೆ ಇದು ಬಣ್ಣ ಕಳೆದುಕೊಳ್ಳುವುದಿಲ್ಲ. ಹೀಗಾಗಿ ಮರುಬಳಕೆಯ ವಸ್ತುವನ್ನು ಹೆಚ್ಚಾಗಿ ಬಟ್ಟೆ ಮತ್ತು ಕಾರ್ಪೆಟ್‌ಗಳಂತಹ ಏಕ ಬಳಕೆಯ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ, ಅದನ್ನು ಹೊಸ ಪಿಇಟಿ ಬಾಟಲಿಗಳಾಗಿ ಮರುಬಳಕೆ ಮಾಡಲಾಗುವುದಿಲ್ಲ. ಹಸಿರು ಬಣ್ಣದಿಂದ ಸ್ಪಷ್ಟ ತಿಳಿ ಬಣ್ಣಕ್ಕೆ ಬದಲಾಯಿಸುವುದು ಕಷ್ಟಕರ. ಹೀಗಾಗಿ ಕೋಕಾಕೋಲಾ ಸಂಸ್ಥೆ ಬಾಟಲಿಯ ಬಣ್ಣ ಬದಲಾಯಿಸಲು ಮುಂದಾಗಿದೆ. 

ಕೋಕಾ ಕೋಲಾ R3Cycle ಜೊತೆ ಪಾಲುದಾರಿಕೆ ವಹಿಸಿಕೊಂಡಿದೆ. R3Cycle ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಬಾಟಲ್-ಟು-ಬಾಟಲ್ ಮರುಬಳಕೆಯನ್ನು ಕಾರ್ಯಗತಗೊಳಿಸಲು ಮರುಸಂಸ್ಕರಣೆ ಮಾಡುವ ಕಂಪನಿಯಾಗಿದೆ. ಬಣ್ಣವಿಲ್ಲದ ಬಾಟಲ್‌ಗಳ ಮರುಬಳಕೆ  ವಸ್ತುಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು  R3CYCLE ನ ಸಿಇಒ ಜೂಲಿಯನ್ ಓಚೋವಾ ಹೇಳಿದ್ದಾರೆ. 
 

Follow Us:
Download App:
  • android
  • ios