ಆಕಸ್ಮಿಕವಾಗಿ ಬಿಗಿದ ಕುಣಿಕೆ: ಸಾವಿನ ರೀಲ್ಸ್ ಮಾಡಲು ಹೋಗಿ ಸತ್ತೇ ಹೋದ ಯುವಕ

ನೇಣು ಕುಣಿಕೆ ಹಾಕಿಕೊಂಡು ಸಾವಿಗೆ ಶರಣಾಗುವ ವೀಡಿಯೋ ಮಾಡಲು ಹೋದ ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಓರ್ವ ಆಕಸ್ಮಿಕವಾಗಿ ನೇಣು ಕುಣಿಕೆ ಕತ್ತಿಗೆ ಬಿಗಿದು ಹೋಗಿ ಸತ್ತೆ ಹೋದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. 

Accidentally Tightened Noose: A young man who went to do death reels died by mistakenly in Warangal Telangana akb

ವಾರಂಗಲ್‌: ನೇಣು ಕುಣಿಕೆ ಹಾಕಿಕೊಂಡು ಸಾವಿಗೆ ಶರಣಾಗುವ ವೀಡಿಯೋ ಮಾಡಲು ಹೋದ ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಓರ್ವ ಆಕಸ್ಮಿಕವಾಗಿ ನೇಣು ಕುಣಿಕೆ ಕತ್ತಿಗೆ ಬಿಗಿದು ಹೋಗಿ ಸತ್ತೆ ಹೋದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಜೂನ್ 18 ರಂದು ಈ ಘಟನೆ ನಡೆದಿದ್ದು, ಮೃತ ಅಜಯ್ ತಾಯಿ ದೇವಮ್ಮ ಈ ಸಾವಿನ ಬಗ್ಗೆ ಸಂಖ್ಯೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. 

ಎಲ್ಲ ಯುವ ಸಮೂಹದಂತೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ 23 ವರ್ಷದ ಕಂಡಕಟ್ಲ ಅಜಯ್ ಸ್ಥಳೀಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬಿಡುವಿನ ಸಮಯದಲ್ಲಿ ರೀಲ್ಸ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಅದರಂತೆ ಅಂದು ಹೊಟೇಲ್‌ನಿಂದ ಕೆಲಸ ಮುಗಿಸಿ ಮಲ್ಲಂಪಲ್ಲಿ ರಸ್ತೆಯಲ್ಲಿರುವ ತನ್ನ ಪುಟ್ಟ ಮನೆಗೆ ಬಂದ ಅಜಯ್ ಮಂಗಳವಾರ ರಾತ್ರಿ ರೀಲ್ಸ್ ಮಾಡಲು ಮುಂದಾಗಿದ್ದಾನೆ.  ಆದರೆ ಇದು ಆತನ ಕೊನೆ ವೀಡಿಯೋ ಆಗಿ ಬದಲಾಗಿದೆ. 

ಹಾಡಹಗಲೇ ಚಿನ್ನದಂಗಡಿ ಮಾಲೀಕನಿಗೆ ಇರಿದು ಜ್ಯುವೆಲ್ಲರಿ ಶಾಪ್ ದರೋಡೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ವರದಿಗಳ ಪ್ರಕಾರ ಅಜಯ್ ತನ್ನ ಮೊಬೈಲ್ ಫೋನ್ ಅನ್ನು ಫ್ರಿಡ್ಜ್ ಮೇಲೆ ವಿಡಿಯೋ ರೆಕಾರ್ಡ್ ಮಾಡುವುದಕ್ಕಾಗಿ ಇಟ್ಟಿದ್ದಾನೆ.  ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟನೆ ಮಾಡಲು ಮುಂದಾಗಿದ್ದಾನೆ. ಅದರಂತೆ ಆತ ತನ್ನ ಕತ್ತಿಗೆ ನೇಣು ಕುಣಿಕೆಯನ್ನು ಹಾಕಿಕೊಂಡಿದ್ದು, ವೀಡಿಯೋ ಚಿತ್ರೀಕರಣ ವೇಳೆ ಇದು ಬಿಗಿಯಾಗಿದ್ದರಿಂದ ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದಾನೆ. ರಾತ್ರಿಯ ಸಮಯ ಇದಾಗಿದ್ದರಿಂದ ಯಾರ ಗಮನಕ್ಕೂ ಇದು ಬಂದಿಲ್ಲ,  ಮುಂಜಾನೆ ಬೆಳಗ್ಗೆ ಅಜಯ್ ಕುಟುಂಬದವರು ಹೋಗಿ ನೋಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. 

ರೀಲ್ಸ್‌ಗಾಗಿ ಹುಡುಗನ ಕೈ ಹಿಡಿದು ಕಟ್ಟಡದ ಅಂಚಿನಲ್ಲಿ ನೇತಾಡಿದ ಯುವತಿ

ಆದರೆ ಅಜಯ್ ತಾಯಿ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಜಯ್ ದೇಹವನ್ನು ವಶಕ್ಕೆ ಪಡೆದು, ಆತನ ಮೊಬೈಲ್ ಫೋನ್‌ಅನ್ನು ಸೀಜ್ ಮಾಡಿದ್ದಾರೆ.  ಘಟನೆ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಅಜಯ್ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೋ ಅಥವಾ ಈ ಸಾವಿನ ಹಿಂದೆ ಏನಾದರೂ ಪಿತೂರಿ ಇದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

Latest Videos
Follow Us:
Download App:
  • android
  • ios