ಯುವತಿಯೊಬ್ಬಳು ರೀಲ್ಸ್‌ಗಾಗಿ ಎತ್ತರದ ಕಟ್ಟಡದಿಂದ ಕೆಳಗೆ ನೇತಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತ ಮೂಡಿಸಿದೆ. 

ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ಯುವತಿಯೊಬ್ಬಳು ರೀಲ್ಸ್‌ಗಾಗಿ ಬೆಟ್ಟದ ತುದಿಯಲ್ಲಿ ಕಾರು ರಿವರ್ಸ್ ಮಾಡುವ ವೇಳೆ ಬೆಟ್ಟದ ಕೆಳಗಿನಿಂದ ಕಾರು ಬಿದ್ದು ಸಾವನ್ನಪ್ಪಿದ ಘಟನೆ ಇನ್ನೂ ನೆನಪಿನಿಂದ ಮಾಸಿಲ್ಲ, ಹೀಗಿರುವಾಗ ಯುವತಿಯೊಬ್ಬಳು ರೀಲ್ಸ್‌ಗಾಗಿ ಎತ್ತರದ ಕಟ್ಟಡದಿಂದ ಕೆಳಗೆ ನೇತಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತ ಮೂಡಿಸಿದೆ. ಇವತ್ತಿನ ಜನರೇಷನ್‌ನ ಮಕ್ಕಳು ಹಾಗೂ ಯುವ ಸಮೂಹ ರೀಲ್ಸ್‌ಗಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಕಾಮೆಂಟ್‌ಗಾಗಿ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ವೀಡಿಯೋದಲ್ಲಿ ಕಾಣಿಸುವಂತೆ ದೊಡ್ಡದಾದ ಕಟ್ಟಡವೊಂದರ ಅಂಚಿನಲ್ಲಿ ಯುವತಿ ನೇತಾಡುತ್ತಿದ್ದರೆ, ಆಕೆಯ ಸ್ನೇಹಿತ ಆಕೆಯ ಕೈಯನ್ನು ಹಿಡಿದುಕೊಂಡಿದ್ದಾನೆ. ಗೆಳೆಯನ ಮೇಲಿನ ನಂಬಿಕೆಯಲ್ಲಿ ಯುವತಿ ಕಟ್ಟಡದಿಂದ ಕೆಳಗೆ ನೇತಾಡಿದ್ದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಜೀವ ಹೋಗುವುದಂತೂ ಪಕ್ಕಾ. ಯುವಕ ಕಟ್ಟಡದ ಮೇಲೆ ಮಲಗಿ ಯವತಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ಅತ್ತ ಆಕೆ ಯುವಕನ ಕೈ ಹಿಡಿದುಕೊಂಡು ಮತ್ತೊಂದು ಕೈಯನ್ನು ಬಿಟ್ಟು ಗಾಳಿಯಲ್ಲಿ ಕಟ್ಟಡದ ಕೆಳಗೆ ನೇತಾಡುತ್ತಿದ್ದಾಳೆ. ಅವರ ಪಕ್ಕದಲ್ಲೇ ಇರುವ ಮತ್ತೊಬ್ಬ ಯುವಕ ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಬೆಟ್ಟದ ತುದಿಯಲ್ಲಿ ಕಾರ್‌ ರಿವರ್ಸ್‌ ಮಾಡುವ ರೀಲ್‌, 300 ಫೀಟ್‌ ಆಳಕ್ಕೆ ಬಿದ್ದು ಯುವತಿ ಸಾವು ಕಂಡ ವಿಡಿಯೋ ವೈರಲ್‌!

ಸಿನಿಮಾದಲ್ಲಿಯೂ ಕೂಡ ಇಂತಹ ಸೀನ್ ಮಾಡುವುದಕ್ಕಾಗಿ ಅವರು ಗ್ರಾಫಿಕ್ಸ್ ವಿಎಫ್‌ಎಕ್ಸ್ ಮುಂತಾದವನ್ನು ಬಳಸುತ್ತಾರೆ. ಹಿರಿಯ ನಟರೇ ಇಂತಹ ಸಾಹಸ ಚಿತ್ರೀಕರಣದ ವೇಳೆ ಡ್ಯೂಪ್ ಬಳಸುತ್ತಾರೆ. ಆದರೆ ಬರೀ ರೀಲ್ಸ್‌ಗಾಗಿ ತಮ್ಮ ಜೀವವನ್ನೇ ಬಲಿ ಕೊಡಲು ಮುಂದಾಗಿರುವ ಈ ಹುಚ್ಚರು ಯಾರು ಎಂದು ಒಬ್ಬರು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇಂತಹ ಹುಚ್ಚು ಸಾಹಸ ತೋರಿಸುವವರನ್ನೆಲ್ಲಾ ಬಂಧಿಸಿ ಜೈಲಿಗಟ್ಟಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯಂತೂ ಭಯಾನಕವಾಗಿದ್ದು, ಸಾವನ್ನು ಆಹ್ವಾನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮಗುವನ್ನು ಎತ್ತಿಕೊಂಡು ಸಿಗರೇಟು ಎಳೆಯುತ್ತಾ ರೀಲ್ಸ್: ಮಹಿಳೆಯ ವರ್ತನೆಗೆ ನೆಟ್ಟಿಗರ ತೀವ್ರ ಆಕ್ರೋಶ

ಇದೊಂದು ಮೂರ್ಖತನವೇ ಸರಿ, ಆದರೆ ಇವರಿಗೆ ಬುದ್ದಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ನನ್ನ ಜೀವನ ನನ್ನ ರೂಲ್ಸ್ ಅಂತ ಹೇಳುವ ಜನರೇಷನ್ ಇದು, ಹೀಗಾಗಿ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿ ಬಹಳ ಬೇಸರವಾಗುತ್ತಿದೆ. ಕೇವಲ ಜನರ ಸೆಳೆಯುವುದಕ್ಕಾಗಿ ಇವರು ತಮ್ಮ ಜೀವ ಬಲಿ ಕೊಡುವುದಕ್ಕೂ ಸಿದ್ಧರಿದ್ದಾರೆ. ಇವರನ್ನು ಜೈಲಿಗೆ ಕಳುಹಿಸಬೇಕು ಇದರಿಂದ ಬೇರೆಯವರಾದರು ಪಾಠ ಕಲಿಯುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪೊಲೀಸರಿಗೆ ಈ ವೀಡಿಯೋ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಇಲ್ಲಿದೆ ನೊಡಿ ಭಯಾನಕ ವೀಡಿಯೋ

Scroll to load tweet…