Asianet Suvarna News Asianet Suvarna News

ಹಾಡಹಗಲೇ ಚಿನ್ನದಂಗಡಿ ಮಾಲೀಕನಿಗೆ ಇರಿದು ಜ್ಯುವೆಲ್ಲರಿ ಶಾಪ್ ದರೋಡೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ತೆಲಂಗಾಣದ ಹೈದರಾಬಾದ್‌ನಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್‌ನಲ್ಲಿ ದರೋಡೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ. 

Robbers stabbed jewelry shop owner before looting shops in broad daylight at Hyderabad Robbers act caught on CCTV akb
Author
First Published Jun 20, 2024, 5:30 PM IST

ಹೈದರಾಬಾದ್‌: ತೆಲಂಗಾಣದ ಹೈದರಾಬಾದ್‌ನಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್‌ನಲ್ಲಿ ದರೋಡೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ. ಬುರ್ಖಾ ಧರಿಸಿ ಬಂದ ವ್ಯಕ್ತಿಯೊಬ್ಬ ಬಂಗಾರದ ಅಂಗಡಿಗೆ ನುಗ್ಗಿ ಮಾಲೀಕನ ಕತ್ತಿಗೆ ಚಾಕುವಿನಿಂದ ಇರಿದು ಅಂಗಡಿ ದರೋಡೆ ಮಾಡಿದ್ದಾನೆ. ಹೈದರಾಬಾದ್‌ನ ಮೆಡ್ಚಲ್‌ ನಗರದಲ್ಲಿ ಈ ಘಟನೆ ನಡೆದಿದೆ. ಹಾಡಹಗಲೇ ನಡೆದ ಈ ಭಯಾನಕ ಕೃತ್ಯ ಮುತ್ತಿನ ನಗರಿಯನ್ನು ಬೆಚ್ಚಿ ಬೀಳಿಸಿದೆ. 

ಬುರ್ಕಾ ಧರಿಸಿ ಬಂದ ದುಷ್ಕರ್ಮಿ ಹಾಗೂ ಆತನ ಸಹಚರರು ಚಿನ್ನದಂಗಡಿಯನ್ನು ದರೋಡೆ ಮಾಡಿ ಹೋಗುವ ವೇಳೆ ಮಾಲೀಕನಿಗೆ ಕಠಾರಿಯಿಂದ ಇರಿದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿನ್ನದಂಗಡಿ ಮಾಲೀಕರು ಭಯಬೀಳುವಂತೆ ಮಾಡಿದೆ. 

ನಡುಬೀದಿಯಲ್ಲೇ 28 ವರ್ಷದ ಯುವಕನ ಅಟ್ಟಾಡಿಸಿ ಹತ್ಯೆ: ಭೀಕರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ವೀಡಿಯೋದಲ್ಲಿ ಕಾಣಿಸುವಂತೆ ಬುರ್ಖಾ ಧರಿಸಿ ಬಂದ ವ್ಯಕ್ತಿ ಅಂಗಡಿ ಮಾಲೀಕ ಹಾಗೂ ಆತನನ್ನು ಬೆದರಿಸಿದ್ದು, ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಿ ಹಾಗೂ ನಿಮ್ಮ ಬಳಿ ಏನಿದೆ ಅದೆಲ್ಲವನ್ನು ಈ ಬ್ಯಾಗ್‌ಗೆ ಹಾಕಿ ಎಂದು ಹೇಳಿದ್ದಾನೆ. ಈ ವೇಳೆ ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ದರೋಡೆಕೋರ ಆತನ ಕತ್ತಿಗೆ ತನ್ನ ಬಳಿ ಇದ್ದ ಕಠಾರಿಯಿಂದ ಇರಿದಿದ್ದಾನೆ.  ಈ ವೇಳೆ ಅಂಗಡಿಯ ಕೆಲಸಗಾರ  ಹಿಂಬದಿಯಿಂದ ಓಡಿ ಹೋಗಿದ್ದರೆ, ಇತ್ತರ ಅಂಗಡಿ ಮಾಲೀಕ ಬುರ್ಖಾ ಧರಿಸಿರುವ ದರೋಡೆಕೋರನ ಮುಂದೆ ಅಸಹಾಯಕನಾಗಿ ನಿಂತಿರುವುದು ಕಾಣಿಸುತ್ತಿದೆ. 

ಹೈದರಾಬಾದ್‌ನಲ್ಲಿ ತಲೆ ಎತ್ತಿದ 50 ಮಹಡಿಗಳ ಅವಳಿ ಗಗನಚುಂಬಿ ಕಟ್ಟಡ

ಆದರೆ ಕೆಲ ಕ್ಷಣದಲ್ಲಿ ಮಾಲೀಕನಿಗೆ ಅಲ್ಲಿಂದ ಓಡುವ ಅವಕಾಶ ಸಿಕ್ಕಿದ್ದು, ಹೆಲ್ಮೆಟ್ ಧರಿಸಿದ್ದ ದರೋಡೆಕೋರರ ಗ್ಯಾಂಗ್‌ನ ಒಬ್ಬನನ್ನು ದೂರ ತಳ್ಳಿ ಹೊರಗೆ ಓಡಿದ್ದು,  ಬಳಿಕ ಜೋರಾಗಿ ಕಳ್ಳ ಕಳ್ಳ ಎಂದು ಕೂಗಾಡಲು ಶುರು ಮಾಡಿದ್ದಾನೆ. ಈ ವೇಳೆ ಇಬ್ಬರು ಅಂಗಡಿಯಿಂದ ಓಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

 

Latest Videos
Follow Us:
Download App:
  • android
  • ios