ನಿವೃತ್ತಿಗೊಂಡ CISF ಶ್ವಾನ ರಾಕಿ, ರೋಮಿಯೋ, ಸೋನಿಗೆ ಅದ್ದೂರಿ ಬೀಳ್ಕೊಡುಗೆ
ಸೇನೆಯಿಂದ ಯೋಧರು ನಿವೃತ್ತಿಗೊಂಡಾಗ ಅವರನ್ನು ಸನ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಡಲಾಗುತ್ತದೆ. ಅದೇ ರೀತಿ ಇಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಸಿಐಎಸ್‌ಎಫ್ (Central Industrial Security Force) ಶ್ವಾನಗಳನ್ನು ಸೇನಾ ಸಿಬ್ಬಂದಿ ಸನ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಟ್ಟರು.
ನವದೆಹಲಿ: ಸೇನೆಯಿಂದ ಯೋಧರು ನಿವೃತ್ತಿಗೊಂಡಾಗ ಅವರನ್ನು ಸನ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಡಲಾಗುತ್ತದೆ. ಅದೇ ರೀತಿ ಇಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಸಿಐಎಸ್‌ಎಫ್ (Central Industrial Security Force) ಶ್ವಾನಗಳನ್ನು ಸೇನಾ ಸಿಬ್ಬಂದಿ ಸನ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಟ್ಟರು. ಈ ವೇಳೆ ಶ್ವಾನಗಳನ್ನು ನಿರ್ವಹಣೆ ಮಾಡುತ್ತಿದ್ದ ಯೋಧರು ಸೇರಿದಂತೆ ಎಲ್ಲರೂ ಭಾವುಕರಾದರು.
ಸಿಐಎಸ್‌ಎಫ್ ಶ್ವಾನಗಳಾದ ಸೋನಿ, ರಾಕಿ ಹಾಗೂ ರೋಮಿಯೋಗೆ ಅದ್ಧೂರಿಯಾಗಿ ಸಿಐಎಸ್‌ಎಫ್ ಸಿಬ್ಬಂದಿ ಬೀಳ್ಕೊಟ್ಟರು. ದೆಹಲಿಯಲ್ಲಿ (Delhi) ನಡೆದ ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಶ್ವಾನಗಳನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಗಿದೆ. ಈ ಮೂಲಕ ಹಲವು ವರ್ಷಗಳ ಕಾಲ ಈ ಶ್ವಾನಗಳು ಸಲ್ಲಿಸಿದ ಪ್ರಾಮಾಣಿಕ ದೇಶ ಸೇವೆಯನ್ನು ನೆನೆಯಲಾಯಿತು. ಡಿಎಂಆರ್‌ಸಿ ಘಟಕದಲ್ಲಿ ಸಲ್ಲಿಸಿದ ಸ್ವಾರ್ಥ ರಹಿತ ಸೇವೆಗಾಗಿ ಶ್ವಾನಗಳಾದ ಸೋನಿ, ರಾಕಿ ಹಾಗೂ ರೋಮಿಯೋನನ್ನು ಸನ್ಮಾನಿಸಲಾಯಿತು.
ಶ್ವಾನ ಚಾರ್ಲಿಗೆ 16 ಲಕ್ಷ ಮೌಲ್ಯದ ಮನೆ ಕಟ್ಟಿಸಿದ ಯೂಟ್ಯೂಬರ್
ಆದರೆ ಜರ್ಮನ್ ಶೆಫರ್ಡ್ (German Shepherd) ತಳಿಯ ಶ್ವಾನ ಸೋನಿಗೆ ಈ ಸಮಾರಂಭದಲ್ಲಿ ಅನಾರೋಗ್ಯದ ಕಾರಣಕ್ಕೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಇನ್ನೆರಡು ಶ್ವಾನಗಳಾದ ರೋಮಿಯೋ ಹಾಗೂ ರಾಕಿ ಈ ಸಮಾರಂಭದಲ್ಲಿ ಭಾಗವಹಿಸಿ ಕೆಂಪು ಹಾಸಿನ ಮೇಲೆ ನಡೆದು ಬಂದು ಪ್ರಶಸ್ತಿ ಸ್ವೀಕರಿಸಿದರು. ಸುದ್ದಿಸಂಸ್ಥೆ ಎಎನ್‌ಐ ಈ ಸಮಾರಂಭದ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಸುಂದರ ಸಮಾರಂಭದ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಶ್ವಾನಗಳು ಗಾಂಭೀರ್ಯದಿಂದ ತಮ್ಮ ಹ್ಯಾಂಡಲರ್‌ಗಳ ಜೊತೆ ನಡೆದು ಬಂದು ಎಲ್ಲರ ಗಮನವನ್ನು ಸೆಳೆದವು. ಇವುಗಳಿಗೆ ಮೆಡಲ್ ನೀಡಿ ಸಾಲು ಹೊದಿಸಿ ಹಿರಿಯ ಅಧಿಕಾರಿಗಳು ಸನ್ಮಾನಿಸಿದರು. ಜೊತೆಗೆ ವಿಶೇಷವಾದ ಆಹಾರವನ್ನು ಅವುಗಳಿಗೆ ನೀಡಲಾಯ್ತು. ಈ ವೀಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಕಾರ್ಯಕ್ರಮದ ಬಳಿಕ ಈ ವಾಹನಗಳನ್ನು ಸೇನಾ ವಾಹನದಲ್ಲೇ ಕರೆದುಕೊಂಡು ಹೋಗಲಾಗಿದ್ದು, ಅವುಗಳು ಸಾಗುವ ವಾಹನದ ಮೇಲೆ ಪುಷ್ಪವೃಷ್ಠಿಗೈಯ್ಯಲಾಗಿತ್ತು. ಈ ವೀಡಿಯೋ ನೋಡಿದ ಅನೇಕರು ಶ್ವಾನಗಳಿಗೆ ದೇಶಕ್ಕೆ ನಿಸ್ವಾರ್ಥವಾಗಿ ಸೇವೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದೊಂದು ಹೃದಯ ತಟ್ಟುವ ಸಮಾರಂಭ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ರಾಕಿ, ಸೋನಿ ರೋಮಿಯೋಗೆ ಧನ್ಯವಾದ ತಿಳಿಸಿದರು.
ಕಳ್ಳರು ಕದ್ದೊಯ್ದ ಹಣದ ಪೆಟ್ಟಿಗೆ ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಪೊಲೀಸ್ ಶ್ವಾನ ರೂಬಿ
ಈ ಸಮಾರಂಭವು ಮಾನವರು ಮತ್ತು ಅವರ ಸೇವಾ ಪ್ರಾಣಿಗಳ ನಡುವಿನ ಆಳವಾದ ಬಂಧವನ್ನು ಸಂಕೇತಿಸಿತ್ತು. ನಿವೃತ್ತಿಯ ನಂತರ ಈ ಶ್ವಾನಗಳ ಬದುಕಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಏಕೆಂದರೆ ಇವುಗಳನ್ನು ಫ್ರೆಂಡ್‌ಕೋಸ್-ಎಸ್‌ಇಸಿಎ ಎಂಬ ದೆಹಲಿ ಮೂಲದ ಸಂಸ್ಥೆ ದತ್ತು ಪಡೆಯಲು ಸಿದ್ಧವಾಗಿದ್ದು, ಅಲ್ಲಿ ಇವು ಶಾಶ್ವತವಾಗಿ ನೆಲೆಸಲಿವೆ.
Watch: ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಸೇವೆಗೆ ವಾಪಸಾದ ಪಂಜಾಬ್ ಶ್ವಾನದಳದ ಲ್ಯಾಬ್ರಡಾರ್!