ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಸಿಮ್ಮಿ ಹೆಸರಿನ ಲ್ಯಾಬ್ರಡಾರ್‌ ತಳಿಯ ಶ್ವಾನ ಇತ್ತೀಚೆಗೆ ಪಂಜಾಬ್‌ ಶ್ವಾನದಳಕ್ಕೆ ಮರಳಿ ಸೇವೆಗೆ ನಿಯೋಜನೆಯಾಗಿದೆ. ಇದರ ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರ ಪ್ರವೀಣ್‌ ಕಾಸ್ವಾನ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ನವದೆಹಲಿ (ಮೇ.19): ಬರೀ ರಾಜಕೀಯ, ಅಪರಾಧ ಸುದ್ದಿಗಳ ನಡುವೆ ಹೃದಯ ಬೆಚ್ಚಗೆ ಮಾಡುವಂಥ ಸುದ್ದಿ ಇದು. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಸಿಮ್ಮಿ ಹೆಸರಿನ ಲ್ಯಾಬ್ರಡಾರ್‌ ಇತ್ತೀಚೆಗೆ ಮತ್ತೆ ಸೇವೆಗೆ ನಿಯೋಜನೆಯಾಗಿದೆ. ಲ್ಯಾಬ್ರಡಾರ್‌ ತಳಿಯ ಶ್ವಾನ ಪಂಜಾಬ್‌ ಪೊಲೀಸ್‌ನ ಶ್ವಾನ ದಳದ ಪ್ರಮುಖ ಶ್ವಾನವಾಗಿತ್ತು. ರೋಗದಿಂದ ಚೇತರಿಸಿಕೊಂಡ ಬೆನ್ನಲ್ಲಿಯೇ ಮತ್ತೆ ಸೇವೆಗೆ ನಿಯೋಜನೆಗೊಂಡಿದೆ. ಎಎನ್‌ಐ ಸುದ್ದಿಸಂಸ್ಥೆ ಇದರ ವಿಡಿಯೋವನ್ನು ಶೇರ್‌ ಮಾಡಿಕೊಂಡಿದೆ. ಸಿಮ್ಮಿ ವಾಹನದಿಂದ ಕೆಳಗಿಳಿಯುವ ವೇಳೆ, ಪೊಲೀಸ್‌ ಅಧಿಕಾರಿಯೊಬ್ಬರು ಅದರ ಕುತ್ತಿಗೆಗೆ ಕಟ್ಟಿದ್ದ ದಾರವನ್ನು ಹಿಡಿದು ಕೆಳಗಿಳಿಸಲು ಸಹಾಯ ಮಾಡಿದ್ದಾರೆ. ಐಎಫ್‌ಎಸ್‌ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಈ ವಿಡಿಯೋವನ್ನು ಕೋಟ್‌ ಟ್ವೀಟ್‌ ಮಾಡಿ ಶೇರ್‌ ಮಾಡಿಕೊಂಡಿದ್ದಾರೆ. 'ಜೋಪಾನ, ಆಕೆ ಫೈಟರ್‌' ಎಂದು ಅವರು ಬರೆದುಕೊಂಡಿದ್ದಾರೆ. ಬಹಳ ಸಮಯದಿಂದ ಸಿಮ್ಮಿ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. ಈಗ ಆಕೆಯ ಆರೋಗ್ಯ ಉತ್ತಮವಾಗಿದೆ. ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆಗೆ ಆಕೆ ಸಹಾಯ ಮಾಡುತ್ತಿದ್ದಳು ಮತ್ತು ಈ ಹಿಂದೆ ವಿದೇಶಿಯರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಹಾಯ ಮಾಡಿದ್ದಾಳೆ ಎಂದು ಫರೀದ್‌ಕೋಟ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿತ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ಈ ಸುದ್ದಿ ಪ್ರಸಾರವಾದ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆಕೆ ನಿಜಕ್ಕೂ ಚಾಂಪಿಯನ್‌ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಸ್ವಾಗತ ಸಿಮ್ಮಿ, ನಾವು ತುಂಬಾ ಹೆಮ್ಮೆಪಡುತ್ತೇವೆ. ದೇವರು ನಿಮಗೆ ಉತ್ತಮ ಆರೋಗ್ಯವನ್ನು ನೀಡಲಿ." ಎಂದು ಇನ್ನೊಬ್ಬರು ಬರೆದಿದ್ದಾರೆ.

ಕ್ಯಾನ್ಸರ್‌ನೊಂದಿಗಿನ ಸಿಮ್ಮಿಯ ಹೋರಾಟದ ಸಮಯದಲ್ಲಿ, ಸಿಮ್ಮಿಯ ಅಚಲವಾದ ಮನೋಭಾವವು ಅವಳನ್ನು ತಿಳಿದಿರುವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕರ್ತವ್ಯದ ಮೇಲಿನ ಅವಳ ಭಕ್ತಿ ಮತ್ತು ಅಚಲ ನಿರ್ಣಯವು ಅವಳ ನಿರ್ವಾಹಕರು ಮತ್ತು ಸಹೋದ್ಯೋಗಿಗಳಿಗೆ ಸಮಾನವಾಗಿ ಸ್ಫೂರ್ತಿ ನೀಡಿತು. ಸುದೀರ್ಘ ಹೋರಾಟದ ಹೊರತಾಗಿಯೂ, ಅವಳು ವಿಜಯಶಾಲಿಯಾಗಿ ಹೊರಹೊಮ್ಮಿದಳು, ಸಮಾಜವನ್ನು ರಕ್ಷಿಸುವ ತನ್ನ ಧ್ಯೇಯವನ್ನು ಮುಂದುವರಿಸಲು ಸಿದ್ಧಳಾದಳು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Scroll to load tweet…

ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಕಳೆದ ವರ್ಷ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಕ್ರಿಯ ಕರ್ತವ್ಯದಿಂದ ನಿವೃತ್ತಿಯಾದ ಶ್ವಾನಕ್ಕೆ ಪೊಲೀಸ್‌ ಪಡೆಯಿಂದ ದೊಡ್ಡ ಮಟ್ಟದ ವಿದಾಯ ನೀಡಲಾಗಿತ್ತು. ಈ ವಿಡಿಯೋ ಕೂಡ ವೈರಲ್‌ ಆಗಿತ್ತು. ತೆರೆದ ವಾಹನದಲ್ಲಿ ಕುಳಿತುಕೊಂಡಿದ್ದ ಶ್ವಾನ ಭವ್ಯವಾದ ಬೀಳ್ಕೊಡುಗೆಯನ್ನು ಕಂಡಿತ್ತಲ್ಲದೆ, ಆಕೆಯ ಮೇಲೆ ಪುಷ್ಪವೃಷ್ಟಿಯನ್ನು ಮಾಡಲಾಗಿತ್ತು.

ಕಣ್ಣಿಗೆ ಕೂಲಿಂಗ್ ಗ್ಲಾಸ್‌ ಕಾಲಿಗೆ ಶೂಸ್‌: ಶ್ವಾನದಳಕ್ಕೆ ವಿಶೇಷ ಸವಲತ್ತು