Asianet Suvarna News Asianet Suvarna News

ಶ್ವಾನ ಚಾರ್ಲಿಗೆ 16 ಲಕ್ಷ ಮೌಲ್ಯದ ಮನೆ ಕಟ್ಟಿಸಿದ ಯೂಟ್ಯೂಬರ್

ಇಲ್ಲೊಬ್ಬ ಯೂಟ್ಯೂಬರ್ ತನ್ನ ಪ್ರೀತಿಯ ಶ್ವಾನಕ್ಕೆ ಬರೋಬ್ಬರಿ 16 ಲಕ್ಷ ವೆಚ್ಚ ಮಾಡಿ ಮನೆಯೊಂದನ್ನು ಕಟ್ಟಿದ್ದು, ಇದರಲ್ಲಿ  ಎಸಿ, ಟೀವಿ ಕಾಫಿ ಟೇಬಲ್, ಫ್ರೀಡ್ಜ್ ಸೇರಿದಂತೆ ಎಲ್ಲಾ ಐಷಾರಾಮಿ ಉಪಕರಣಗಳು ಇವೆ.

YouTuber who built a house worth 16 lakhs for dog Charlie akb
Author
First Published Jun 1, 2023, 3:11 PM IST

ಶ್ವಾನ ಸಾಕುವವರಿಗೆ ಅದರ ಮೇಲೆ ಇರುವ ಪ್ರೀತಿ ಅಪರಿಮಿತವಾದುದು. ಇತ್ತೀಚೆಗೆ ಶ್ವಾನ ಮನುಷ್ಯರನ್ನು ಪ್ರೀತಿಸುವಂತೆ ಶ್ವಾನದ ಮಾಲೀಕರು ತನ್ನ ಪ್ರೀತಿಯ ಸಾಕು ನಾಯನ್ನು ಪ್ರೀತಿಸುವುದು ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವರು ಲಕ್ಷಗಟ್ಟಲೇ ವೆಚ್ಚ ಮಾಡಿ ಊರಿಗೆಲ್ಲಾ ಊಟ ಹಾಕಿ ತಮ್ಮ ಪ್ರೀತಿಯ ನಾಯಿಯ ಹುಟ್ಟುಹಬ್ಬ ಮಾಡಿದ ಘಟನೆ ಈ ಹಿಂದೆ ನಡೆದಿತ್ತು. ಮತ್ತೆ ಕೆಲವರು ತಮ್ಮ ಶ್ವಾನಕ್ಕೆ ಅದ್ಧೂರಿಯಾಗಿ ಮದ್ವೆಯನ್ನು ಮಾಡಿದ್ದರು. ನಮ್ಮ ದೇಶದಲ್ಲಿ ಕೆಲವು ಕಡೆ ಶ್ವಾನಕ್ಕೆ ದೇಗುಲವೂ ಇದೆ. ಆದರೆ ಶ್ವಾನಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟಿದ ಪ್ರಕರಣ ಎಲ್ಲೂ ಕೇಳಿಲ್ಲ. ಆದರೆ ಇಲ್ಲೊಬ್ಬ ಯೂಟ್ಯೂಬರ್ ತನ್ನ ಪ್ರೀತಿಯ ಶ್ವಾನಕ್ಕೆ ಬರೋಬ್ಬರಿ 16 ಲಕ್ಷ ವೆಚ್ಚ ಮಾಡಿ ಮನೆಯೊಂದನ್ನು ಕಟ್ಟಿದ್ದು, ಇದರಲ್ಲಿ  ಎಸಿ, ಟೀವಿ ಕಾಫಿ ಟೇಬಲ್, ಫ್ರೀಡ್ಜ್ ಸೇರಿದಂತೆ ಎಲ್ಲಾ ಐಷಾರಾಮಿ ಉಪಕರಣಗಳು ಇವೆ.

ಯೂಟ್ಯೂಬರ್ ಬ್ರೆಂಟ್ ರಿವೇರಾ ಎಂಬಾತನೇ ತನ್ನ ಪ್ರೀತಿಯ ಶ್ವಾನ ಚಾರ್ಲಿಗಾಗಿ 16ಲಕ್ಷ ಮೌಲ್ಯದ ಮನೆ ಕಟ್ಟಿದ ಶ್ವಾನಪ್ರೇಮಿ. ಇದಕ್ಕೆ 20 ಸಾವಿರ ಡಾಲರ್ (16.5 ಲಕ್ಷ ಭಾರತೀಯ ರೂಪಾಯಿ)ವೆಚ್ಚವಾಗಿದೆ. ತನ್ನ ಸ್ನೇಹಿತರ ಸಹಾಯದಿಂದ ಈ ಮನೆ ಕಟ್ಟಿದ್ದಾಗಿ ಬ್ರೆಂಟ್ ಹೇಳಿದ್ದಾನೆ. ಮೊದಲಿಗೆ ಗೋಡೆಯನ್ನು ಕಟ್ಟಿ ಅಮೇಲೆ ಮೇಲ್ಛಾವಣಿಯನ್ನು ಜೋಡಿಸಿದ್ದಾನೆ. ಬಳಿಕ ಮನೆಗೆ ಸುಂದರವಾಗಿ ಪೇಂಟಿಂಗ್ ಮಾಡಿಸಿದ್ದಾನೆ. 

ಕಳ್ಳರು ಕದ್ದೊಯ್ದ ಹಣದ ಪೆಟ್ಟಿಗೆ ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಪೊಲೀಸ್‌ ಶ್ವಾನ ರೂಬಿ

ಅಲ್ಲದೇ ಈತ ಆ ಮನೆಯಲ್ಲಿ ನಾಯಿಗಾಗಿ ವಾರ್ಡ್‌ರೋಬ್, ಸಣ್ಣ ಫ್ರಿಡ್ಜ್, ಬೆಡ್‌ರೂಮ್, ಟಿವಿಯನ್ನೂ ಹೊಂದಿದ್ದು, ಈ ಟಿವಿಯಲ್ಲಿ ಅಳಿಲುಗಳ ಕ್ಲಿಫಿಂಗ್‌ಗಳನ್ನು ಒಂದರ ನಂತರ ಒಂದು ಪ್ಲೇ ಆಗುವಂತೆ ವ್ಯವಸ್ಥೆ ಮಾಡಿದ್ದಾನೆ. ಅಲ್ಲದೇ ಮನೆಯ ಮೆಟ್ಟಿಲ ಮೇಲೆ ಬೆಡ್ ಇದ್ದು, ಅದಕ್ಕೆ ಅಲಂಕಾರಿಕ ತಲೆದಿಂಬನ್ನು ಕೂಡ ಇಡಲಾಗಿದೆ. ಇದರ ಜೊತೆಗೆ ಮಲಗಲು ಶ್ವಾನಕ್ಕೆ ಕೌಚ್‌ನ್ನು ಕೂಡ ತಂದಿಡಲಾಗಿದೆ.

ಇದರ ಜೊತೆಗೆ ಸಣ್ಣದಾದ ಕಾಫಿ ಟೇಬಲ್, ಹೂ ಕುಂಡಗಳು, ಇದ್ದು, ನೆಲಕ್ಕೆ ಹಾಸಿದ ಮ್ಯಾಟ್ ಮೇಲೆ  ಡಾಗ್ಸ್‌ ವೆಲ್‌ಕಂ ಪೀಪಲ್ಸ್ ಟಾಲರೇಬಲ್ (ಶ್ವಾನಗಳಿಗೆ ಸ್ವಾಗತ ಜನರನ್ನು ಸಹಿಸಿಕೊಳ್ಳಬಹುದು) ಎಂದು ಬರೆಯಲಾಗಿದೆ.  ಅಲ್ಲದೇ ಮನೆಯ ಮುಂದೆ ಚಾರ್ಲಿಸ್ ಹೌಸ್ ಎಂದು ಬೋರ್ಡ್ ಹಾಕಲಾಗಿದೆ. 

ತಾನು ಹೀಗೆ ಐಷಾರಾಮಿ ಜೀವನ ಕಲ್ಪಿಸಿದ್ದಕ್ಕೆ ಎಲ್ಲರೂ ನಾನು ಚಾರ್ಲಿಯನ್ನು ಹಾಳು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಆದರೆ ಅದು ಹಾಗಲ್ಲ, ಈ ಮನೆ ಶ್ವಾನದ ಹುಟ್ಟುಹಬ್ಬಕ್ಕೆ ನೀಡಿದ ಕೊಡುಗೆ ಎಂದು ಹೇಳುತ್ತಾರೆ ಬ್ರೆಂಟ್, ಅಲ್ಲದೇ ತಾನು ತನ್ನ ಕೆಲಸದಲ್ಲಿ ತೊಡಗಿರುವಾಗ ಚಾರ್ಲಿಯನ್ನು ನೋಡಿಕೊಳ್ಳಲು, ವೃತ್ತಿಪರ ಶ್ವಾನ ಸಾಕುವವರನ್ನು ನೇಮಿಸಿರುವುದಾಗಿ ಬ್ರೆಂಟ್ ಹೇಳುತ್ತಾನೆ. ಕಳೆದ ವರ್ಷದಿಂದ ಈ ಚಾರ್ಲಿ ನನ್ನ ಆತ್ಮೀಯ ಗೆಳೆಯನಾಗಿದ್ದಾನೆ. ಕಳೆದ ವರ್ಷ ನನ್ನ ಪ್ರೀತಿಯ ಶ್ವಾನ ಬೆಕ್ಕರ್ ತೀರಿಕೊಂಡಿದ್ದ, ಅದಾದ ಬಳಿಕ ಚಾರ್ಲಿ ಒಳ್ಳೆಯ ಸಂಗಾತಿಯಾದ ಎಂದು ಹೇಳುತ್ತಾನೆ ಬ್ರೆಂಟ್.

Watch: ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಸೇವೆಗೆ ವಾಪಸಾದ ಪಂಜಾಬ್‌ ಶ್ವಾನದಳದ ಲ್ಯಾಬ್ರಡಾರ್‌!

ಆದರೆ ಈ ವಿಚಾರ ತಿಳಿದ ಜನ ಮಾತ್ರ ದಂಗಾಗಿದ್ದು, ನಾಯಿಗೆ ಇಷ್ಟೊಂದು ವೆಚ್ಚದಲ್ಲಿ ಮನೆ ನಿರ್ಮಿಸಿರುವುದಕ್ಕೆ ಶಾಕ್ ಆಗಿದ್ದಾರೆ. ಮತ್ತೆ ಕೆಲವರು ನಿಮಗೆ ಸರಿ ಇದೆ ತಾನೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಪುಟ್ಟ ಗುಡಿಸಲು ಕಟ್ಟಿಸಿಕೊಳ್ಳಲು ಸಾವಿರಾರು ಜನ ಕಷ್ಟ ಪಡುತ್ತಿರುವಾಗ ಈತ ಶ್ವಾನಕ್ಕೆ ಇಷ್ಟೊಂದು ದುಬಾರಿ ವೆಚ್ಚದ ಮನೆ ಕಟ್ಟಿರುವುದು ವಿಚಿತ್ರವೇ ಸರಿ.

 

Follow Us:
Download App:
  • android
  • ios