Asianet Suvarna News Asianet Suvarna News

ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ಮೂವರು ವಿದ್ಯಾರ್ಥಿಗಳು ಒಟ್ಟಿಗೆ ನೇಣಿಗೆ ಶರಣು

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ಮೂವರು ವಿದ್ಯಾರ್ಥಿಗಳು ಒಟ್ಟಿಗೆ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

3 student killed self in Rajasthan who preparing competitive exams in kota akb
Author
First Published Dec 12, 2022, 8:31 PM IST | Last Updated Dec 12, 2022, 8:31 PM IST

ಜೈಪುರ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ಮೂವರು ವಿದ್ಯಾರ್ಥಿಗಳು ಒಟ್ಟಿಗೆ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳು ಕ್ರಮವಾಗಿ 16, 17 ಹಾಗೂ 18 ವರ್ಷ ಪ್ರಾಯದವರಾಗಿದ್ದಾರೆ. ಅಂಕುಶ್, ಉಜ್ವಲ್ ಹಾಗೂ ಪ್ರಣವ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು. ಇವರಲ್ಲಿ ಅಂಕುಶ್ ಹಾಗೂ ಉಜ್ವಲ್ ಬಿಹಾರ ಮೂಲದವರಾಗಿದ್ದು, ಅಕ್ಕಪಕ್ಕದ ಕೋಣೆಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಸಿದ್ದಗೊಳ್ಳುತ್ತಿದ್ದರು. ಇನ್ನೊಬ್ಬ ವಿದ್ಯಾರ್ಥಿ ಪ್ರಣವ್, ಮಧ್ಯಪ್ರದೇಶದವರಾಗಿದ್ದು, ಮೆಡಿಕಲ್ ಕೋರ್ಸ್‌ ಪ್ರವೇಶ (NEET)ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇವರ ಸಾವಿಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಅಲ್ಲದೇ ಯಾವುದೇ ಡೆತ್‌ನೋಟ್ ಕೂಡ ಲಭ್ಯವಾಗಿಲ್ಲ.

ರಾಜಸ್ಥಾನದ ಕೋಟಾವೂ ಖಾಸಗಿ ಕೋಚಿಂಗ್ ಸೆಂಟರ್‌ಗಳ (coaching centres) ಕೇಂದ್ರವಾಗಿದ್ದು, ಅಲ್ಲಿ ಅನೇಕ ಸಂಸ್ಥೆಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು (competitive exams) ನಡೆಸುತ್ತವೆ. ಇಲ್ಲಿ ಕಳೆದ ಹಲವು ವರ್ಷಗಳಿಂದಲೂ ಗಾಬರಿ ಮೂಡಿಸುವ ಸಂಖ್ಯೆಯಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ದೇಶದ ಅತ್ಯುತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಲುವಾಗಿ ಅನೇಕ ಯುವಕ ಯುವತಿಯರು ಅತೀಯಾದ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಇಲ್ಲಿ ಹೆಚ್ಚು ನಡೆದಿವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಕೊನೆಯ ವರ್ಷದಲ್ಲಿರುವಾಗಲೇ ಜೊತೆ ಜೊತೆಯಲ್ಲೇ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುತ್ತಾರೆ. ಜೊತೆಗೆ ಅತೀಯಾದ ಒತ್ತಡಕ್ಕೊಳಗಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಅನೇಕರಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. 

ಈ ಕೋಚಿಂಗ್ ಸೆಂಟರ್‌ಗಳು ಸುದೀರ್ಘ ಅವಧಿಗೆ ತರಗತಿಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಮತ್ತಷ್ಟು ಒತ್ತಡಕ್ಕೆ ತಳ್ಳುವ ಕುಖ್ಯಾತಿಗೆ ಒಳಗಾಗಿವೆ. ದೊಡ್ಡ ದೊಡ್ಡ ಅಸೈನ್‌ಮೆಂಟ್‌ಗಳು(long assignments), ಅಂತರಿಕ ಪರೀಕ್ಷೆಗಳು (internal tests), ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಕಳುಹಿಸಲು ಈ ಕೋಚಿಂಗ್ ಸಂಸ್ಥೆಗಳು ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಫೈಲಾದರೆ ಎಂಬ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತವೆ. 

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಮಾಧ್ಯಮಗಳು ಬಯಲಿಗೆ ತಂದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವು ಆತ್ಮಹತ್ಯೆ ಮಾಡಿಕೊಳ್ಳದಂತೆ ಸಾಂತ್ವನ ನೀಡುವ ಆಪ್ತ ಸಲಹಾ ಕೇಂದ್ರವನ್ನು (counselling) ಸ್ಥಾಪಿಸಿದೆ. 2016ರಲ್ಲಿ ವಿದ್ಯಾರ್ಥಿನಿಯೋರ್ವಳು ಐಐಟಿ ಜೆಇಇಯಲ್ಲಿ ಪಾಸಾದರೂ ಸಾವಿಗೆ ಶರಣಾಗುವ ಮೊದಲು ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಕರೆ ನೀಡಿದ್ದಳು. ಹೀಗಾಗಿ 2019ರಲ್ಲಿ, ರಾಜಸ್ಥಾನ ಸರ್ಕಾರವು (Rajasthan government) ಇಂತಹ ಕೋಚಿಂಗ್ ಸೆಂಟರ್‌ಗಳಲ್ಲಿ (coaching centres) ಅಧ್ಯಯನ ಮಾಡುವವರಲ್ಲಿ ಒತ್ತಡವನ್ನು ಕಡಿಮೆ ಮಾಡಲು ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕಾಗಿ ಶಾಸಕಾಂಗ ಕರಡನ್ನು ತಯಾರಿಸಲು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿತು. ಆದರೆ ಆ ಕರಡು ಕುರಿತು ಇನ್ನೂ ಯಾವುದೇ ಸಾರ್ವಜನಿಕ ಮಾಹಿತಿ ಇಲ್ಲ.

3 student killed self in Rajasthan who preparing competitive exams in kota akb

Udupi: ತರಗತಿ ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಬಂದಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ

Bengaluru: ಶಿಕ್ಷಕಿ ಬೈದಿದ್ದಕ್ಕೆ ಡೆತ್‌ನೋಟ್‌ ಬರೆದಿಟ್ಟು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ವೃದ್ಧನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮೂಡಬಿದಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ!

Bengaluru: ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಅವಮಾನ: ವಿದ್ಯಾರ್ಥಿ ಆತ್ಮಹತ್ಯೆ

Latest Videos
Follow Us:
Download App:
  • android
  • ios