ಪಂಜಾಬ್ ಗಡಿ ಬಳಿ ಮತ್ತೆ ಪಾಕ್ ಡ್ರೋನ್‌ಗಳು ಪತ್ತೆ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ
ಪಂಜಾಬ್‌ನಲ್ಲಿ ಶನಿವಾರ ರಾತ್ರಿ ಪಾಕ್‌ನ 2 ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ (Pakistan) ಪದೇ ಪದೇ ತನ್ನ ಪಾಪಿ ಬುದ್ಧಿಯನ್ನು ತೋರಿಸುತ್ತಲೇ ಇದೆ. ಕಾಲು ಕೆರೆದುಕೊಂಡು ಭಾರತದತ್ತ (India) ತಂಟೆ ಮಾಡುತ್ತಲೇ ಬಂದಿದೆ. ಉಗ್ರರನ್ನು (Terrorists) ತನ್ನ ದೇಶದಿಂದ ಹೆಚ್ಚು ನಮ್ಮ ದೇಶಕ್ಕೆ ಕಳಿಸುವ ಪಾಪಿ ಪಾಕಿಸ್ತಾನ, ಈಗ ಉಗ್ರರ ಜತೆಗೆ ಡ್ರೋನ್‌ಗಳನ್ನೂ (Drone) ಕಳಿಸುತ್ತಿದೆ. ಇದೇ ರೀತಿ, ಈಗ ಪಂಜಾಬ್‌ನಲ್ಲಿ (Punjab) 2 ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಶನಿವಾರ ರಾತ್ರಿ 2 ಪ್ರದೇಶದಲ್ಲಿ ತಲಾ ಒಂದೊಂದು ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ (Gurdaspur) ಜಿಲ್ಲೆಯ ಕಾಸ್ಸೋವಾಲ್ ಪ್ರದೇಶದಲ್ಲಿ ಭಾರತ ಹಾಗೂ ಪಾಕ್‌ನ ಅಂತಾರಾಷ್ಟ್ರೀಯ ಗಡಿ ಬಳಿ ಡ್ರೋನ್ ಕಾಣಿಸಿಕೊಂಡಿದ್ದು, ಗಡಿ ಭದ್ರತಾ ಪಡೆ ಯೋಧರು ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ ನಂತರ ಡ್ರೋನ್ ಪಾಕಿಸ್ತಾನಕ್ಕೆ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇದನ್ನು ಓದಿ: ಎನ್‌ಐಎ ಹಿಟ್ ಲಿಸ್ಟ್‌ನಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರ ಪಾಕಿಸ್ತಾನದಲ್ಲಿ ಸಾವು
ಡ್ರೋನ್‌ನತ್ತ ಬಿಎಸ್‌ಎಫ್ ಸಿಬ್ಬಂದಿ ಕನಿಷ್ಠ 96 ಸುತ್ತು ಗುಂಡು ಹಾರಿಸಿದರು ಹಾಗೂ 5 ಇಲ್ಯೂಮಿನೇಷನ್ ಬಾಂಬ್‌ಗಳನ್ನು ಬಳಸಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಸಂಬಂಧ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಅವರು ಹೇಳಿದರು.
ಇನ್ನೊಂದೆಡೆ, ಪಂಜಾಬ್‌ನ ಅಮೃತಸರ ಜಿಲ್ಲೆಯ ಚನ್ನ ಪಟನ್ ಪ್ರದೇಶದಲ್ಲಿ ಮತ್ತೊಂದು ಡ್ರೋನ್ ಸಹ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ 11.46ರ ವೇಳೆಗೆ ಈ ಡ್ರೋನ್ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದರು. ಹಾಗೂ, ಬಿಎಸ್‌ಎಫ್ ಸಿಬ್ಬಂದಿ 10 ಸುತ್ತು ಗುಂಡು ಹಾರಿಸುತ್ತಿದ್ದಂತೆ ಡ್ರೋನ್ ವಾಪಸಾಯಿತು. ಈ ಸಂಬಂಧ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಾಂಗ ನೀತಿ ಹೆಸರಲ್ಲಿ ಭಯೋತ್ಪಾದನೆ ಬೆಂಬಲಿಸುವ ದೇಶಗಳಿಗೆ ತಕ್ಕ ಪಾಠ, ಪಾಕ್-ಚೀನಾಗೆ ಮೋದಿ ಎಚ್ಚರಿಕೆ!
ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಒಳನುಸುಳುವಿಕೆ ತಡೆ ಕ್ರಮಗಳನ್ನು ರಕ್ಷಣಾ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯ ಕೈಗೊಳ್ಳುತ್ತಿದೆ. ಈ ಹಿನ್ನೆಲೆ, ಪಮಜಾಬ್ ಪ್ರದೇಶದಲ್ಲಿ ಈಗ ಹೆಚ್ಚಿನ ಡ್ರೋನ್‌ಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹೆಚ್ಚು ಡ್ರೋನ್‌ಗಳು ಪತ್ತೆಯಾಗುತ್ತಿದ್ದು, ಪಂಜಾಬ್‌ನ ಭಾರತದ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರದೇಶದತ್ತ ತನ್ನ ಗಮನವನ್ನು ಬದಲಾಯಿಸುತ್ತಿದೆ ಮತ್ತು ಭದ್ರತಾ ಕ್ರಮಗಳಲ್ಲಿನ ಲೋಪದೋಷಗಳನ್ನು ಬಳಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪಂಜಾಬ್‌ನ ಭಾರತ-ಪಾಕ್ ಗಡಿಯುದ್ದಕ್ಕೂ ಡ್ರೋನ್ ವೀಕ್ಷಣೆಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತವು 100% ಕ್ಕಿಂತ ಹೆಚ್ಚು ಹೆಚ್ಚಳವನ್ನು ಕಂಡಿದೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ. ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ರವಾನಿಸಲು ಭಾರತದ ವಾಯು ಪ್ರದೇಶದೊಳಗೆ ಪ್ರವೇಶಿಲು ಯತ್ನಿಸಿದ ಅಥವಾ ಪ್ರವೇಶಿಸಿದ ಡ್ರೋನ್‌ಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ವರ್ಷದ ಜನವರಿ ಮತ್ತು ನವೆಂಬರ್ ನಡುವೆ, ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ 215 ಡ್ರೋನ್‌ಗಳು ಕಾಣಿಸಿಕೊಂಡಿರುವ ಘಟನೆಗಳಿಗೆ ಬಿಎಸ್‌ಎಫ್ ಸಾಕ್ಷಿಯಾಗಿದೆ. ಅಂದರೆ, ಪ್ರತಿ ತಿಂಗಳಿಗೆ ಅಂದಾಜು ಸುಮಾರು 20 ಡ್ರೋನ್‌ಗಳು ಪತ್ತೆಯಾಗುತ್ತಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸತ್ಯ ಒಪ್ಪಿಕೊಂಡ ಪಾಕ್, ಭಯೋತ್ಪಾದನೆ ದೇಶದ ಪ್ರಮುಖ ಸಮಸ್ಯೆ ಎಂದ ಪ್ರಧಾನಿ ಶೆಹಬಾಜ್ ಷರೀಫ್!