Asianet Suvarna News Asianet Suvarna News

ಎನ್‌ಐಎ ಹಿಟ್ ಲಿಸ್ಟ್‌ನಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರ ಪಾಕಿಸ್ತಾನದಲ್ಲಿ ಸಾವು

ಪಂಜಾಬ್‌ನಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ, ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದ ಖಲಿಸ್ತಾನ್ ಬೆಂಬಲಿತ ಭಯೋತ್ಪಾದಕ ಹರ್ವಿಂದರ್ ಸಸಿಂಗ್ ಸಂಧು ಅಲಿಯಾಸ್ ರಿಂಡಾ ಪಾಕಿಸ್ತಾನದ ಲಾಹೋರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತಮ ಮೂಲಗಳು ವರದಿ ಮಾಡಿವೆ.

NIAs most wanted criminal, Gangster turned Khalistan terrorist Harvinder Singh Sandhu alias Rinda died in pakistan after drug overdose akb
Author
First Published Nov 20, 2022, 1:24 PM IST

ನವದೆಹಲಿ: ಪಂಜಾಬ್‌ನಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ, ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದ ಖಲಿಸ್ತಾನ್ ಬೆಂಬಲಿತ ಭಯೋತ್ಪಾದಕ ಹರ್ವಿಂದರ್ ಸಸಿಂಗ್ ಸಂಧು ಅಲಿಯಾಸ್ ರಿಂಡಾ ಪಾಕಿಸ್ತಾನದ ಲಾಹೋರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತಮ ಮೂಲಗಳು ವರದಿ ಮಾಡಿವೆ. ಪಂಜಾಬ್‌ನ ಹಲವು ಭಾಗಗಳಲ್ಲಿ ನಡೆದ ಕನಿಷ್ಠ 10 ಭಯೋತ್ಪಾದಕ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ ಆರೋಪವಿದೆ. ಒದಲಿನ ಪಂಜಾಬ್‌ನ ಗ್ಯಾಂಗ್ ಸ್ಟಾರ್ ಆಗಿದ್ದ ಈತ ನಂತರ ಉಗ್ರನಾಗಿ ಬದಲಾಗಿದ್ದ. ಡ್ರಗ್ ಓವರ್‌ ಡೋಸ್‌ನ ಪರಿಣಾಮದಿಂದಾಗಿ ಇತ್ತೀಚೆಗೆ ಈತನ ಕಿಡ್ನಿ ಕೈ ಕೊಟ್ಟಿದ್ದು, ಇದಕ್ಕಾಗಿ ಲಾಹೋರ್‌ನ ಆಸ್ಪತ್ರೆಯಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಈತ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. 

ಆದರೆ ಮತ್ತೊಂದು ವರದಿಯ ಪ್ರಕಾರ ದೇವಿಂದರ್ ಭಂಬಿಹ ಮಾಫಿಯಾ ಗುಂಪು (Davinder Bhambiha mafia group) ಈತನ ಸಾವಿನ ಹೊಣೆಯನ್ನು ಹೊತ್ತುಕೊಂಡಿದೆ. ತನ್ನ ಗುಂಪಿನ ವಿರುದ್ಧ ರಿಂಡಾ  ತಿರುಗಿಬಿದ್ದ ಹಿನ್ನೆಲೆಯಲ್ಲಿ ದೇವಿಂದರ್ ಭಂಬಿಹ ಮಾಫಿಯಾ ಗುಂಪು ಈ ಘೋಷಣೆ ಮಾಡಿದೆ. ಇತ್ತ ನರಹತ್ಯೆ ಸೇರಿದಂತೆ ಕನಿಷ್ಠ 24 ಅಪರಾಧ ಪ್ರಕರಣಗಳಲ್ಲಿ ರಿಂಡಾ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ. ಗುತ್ತಿಗೆ ಪಡೆದು ಹತ್ಯೆ, ದರೋಡೆ, ಸುಲಿಗೆ  ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ. ಅಲ್ಲದೇ ಇತ್ತೀಚೆಗೆ ಫರಿದಾಕೋಟ್‌ನಲ್ಲಿ ನಡೆದ ಡೇರಾ ಸಚ್ಚಾ ಸೌದದ (Dera Sacha Sauda) ಮುಖ್ಯಸ್ಥ ಪ್ರದೀಪ್ ಸಿಂಗ್ ಕಟರಿಯಾ (Pardeep Singh Kataria) ಕೊಲೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. ಆರು ಜನ ಹಂತಕರು ಹಾಡಹಗಲೇ ಪ್ರದೀಪ್ ಸಿಂಗ್‌ಗೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅಲ್ಲದೇ ಕಳೆದ ತಿಂಗಳು ನಡೆದ ಹಿಂದೂ ಮುಖಂಡ ಸುಧೀರ್ ಸುರಿ (Sudhir Suri) ಹತ್ಯೆ ಪ್ರಕರಣದಲ್ಲೂ ಈತನ ಮೇಲೆ ಸಂಶಯವಿತ್ತು. 

ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸಿದ್ವಿ ಅಂದುಕೊಂಡ್ರು, ಆದರೆ, ಆಗಿದ್ದೇ ಬೇರೆ..!

ರಿಂಡಾ ಕುರಿತ ಯಾವುದೇ ಮಾಹಿತಿ ನೀಡಿದಲ್ಲಿ 10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಘೋಷಿಸಿತ್ತು. ಅಲ್ಲದೇ ಇಂಟರ್‌ಫೊಲ್ ಆತನ ವಿರುದ್ಧ ರೆಡ್ ನೋಟೀಸ್ ಜಾರಿಗೊಳಿಸಿತ್ತು. ಸಂಡೇ ಎಕ್ಸ್‌ಪ್ರೆಸ್ ಹೇಳುವಂತೆ ರಿಂಡಾ ಪಂಜಾಬ್‌ನ ಬಹಳ ಬೇಕಾಗಿದ್ದ ಎ ಪ್ಲಸ್ ಕೆಟಗರಿಯಾ ಗ್ಯಾಂಗ್‌ಸ್ಟಾರ್ (gangster) ಆಗಿದ್ದ. ಬರೀ ಪಂಜಾಬ್‌ನಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರ(Maharashtra), ಚಂಢೀಗಡ (Chandigarh), ಹರಿಯಾಣ (Haryana), ಪಶ್ಚಿಮ ಬಂಗಾಳ ಪೊಲೀಸರಿಗೂ ಈತ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ. 2017ರ ಆಗಸ್ಟ್ 18 ರಂದು ಈತನ ವಿರುದ್ಧ ಲುಕೌಟ್ ನೋಟೀಸ್‌ ಜಾರಿಗೊಳಿಸಲಾಗಿತ್ತು.  ಹಾಗೆಯೇ ಈ ವರ್ಷದ ಮೇ 5 ರಂದು ಕೇಂದ್ರ ತನಿಖಾ ದಳ ಈತನ ವಿರುದ್ಧ ರೆಡ್‌ ಕಾರ್ನರ್ ನೊಟೀಸ್ ಜಾರಿಗೊಳಿಸಿತ್ತು. ಇದಾಗಿ ನಾಲ್ಕು ದಿನ ಆಗುವಷ್ಟರಲ್ಲಿ ಪಂಜಾಬ್‌ನ ಮೊಹಾಲಿಯಲ್ಲಿ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಆರ್‌ಪಿಜಿ (rocket-propelled grenade) ದಾಳಿ ನಡೆದಿತ್ತು.

ವರದಿ ನಿರಾಕರಿಸಿದ ಪಾಕಿಸ್ತಾನದ ಆಸ್ಪತ್ರೆ

ಆದರೆ ಪಾಕಿಸ್ತಾನದ ಲಾಹೋರ್‌ನಲ್ಲಿ ಕಾರ್ಯ ನಿರ್ವಹಿಸುವ ಎರಡು ಸರ್ಕಾರಿ ಆಸ್ಪತ್ರೆಗಳು ಈ ವರದಿಯನ್ನು ನಿರಾಕರಿಸಿವೆ. ಕಳೆದೆರಡು ದಿನಗಳಲ್ಲಿ ಆಸ್ಪತ್ರೆಯಲ್ಲಿ ಯಾವುದೇ ಅಂತಹ ಸಾವು ಸಂಭವಿಸಿಲ್ಲ ಎಂದು ಹೇಳಿವೆ. ಆದರೆ ಕೆಲವು ಮಾಧ್ಯಮಗಳು ಆತ ಮಿಲಿಟರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ವರದಿ ಮಾಡಿವೆ. ಆಂಗ್ಲ ಮಾಧ್ಯಮ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅದು  ಲಾಹೋರ್‌ನ (Lahore) ಸಂಯೋಜಿತ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿ ಡ್ರಗ್ ಓವರ್‌ಡೋಸ್ ಆಗಿ ಮೊಹಮ್ಮದ್ ಉಸ್ಮಾನ್ (Mohammad Usmaan) ಎಂಬಾತ ಸಾವನ್ನಪ್ಪಿದ್ದಾನೆ ಆದರೆ ರಿಂಡಾ ಅಥವಾ ಹರ್ವಿಂದರ್ ಸಿಂಗ್ ಸಂಧು (Harvinder Singh Sandhu) ಎಂಬುವವರು ಯಾರೂ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ ಎಂದು ತಿಳಿದು ಬಂದಿದೆ.

Rocket Attack ಪಂಜಾಬ್‌ ರಾಕೆಟ್‌ ದಾಳಿ ಕೇಸಲ್ಲಿ ಬಬ್ಬರ್‌ ಖಾಲ್ಸಾ, ಐಎಸ್‌ಐ ಕೈವಾಡ!

ಇನ್ನು ಈ ರಿಂಡಾ ಭಯೋತ್ಪಾದಕ ಗುಂಪಾದ ಬಬ್ಬರ್ ಖಲ್ಸಾ ಇಂಟರ್‌ನ್ಯಾಷನಲ್ (Babbar Khalsa International) ಜೊತೆಯೂ ಸಂಪರ್ಕ ಹೊಂದಿದ್ದ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಈತ  ನಿರ್ಣಾಯಕ ಬೆಂಬಲವನ್ನು ನೀಡಿದ್ದ. ಅಲ್ಲದೇ ಪಾಕಿಸ್ತಾನದಿಂದ ಪಂಜಾಬ್‌ಗೆ ಡ್ರಗ್ ಪೂರೈಸುತ್ತಿದ್ದ. ಅಲ್ಲದೇ ಆತ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಆರ್‌ಪಿಜಿ ದಾಳಿಯ (RPG attack) ಮಾಸ್ಟರ್ ಮೈಂಡ್ ಆಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರಿಂಡಾ ಸಾವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪಂಜಾಬ್‌ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಿಂಡಾ ಸಾವಿನ ಬಗ್ಗೆ ಖಚಿತ ಕಾರಣ ತಿಳಿದಿಲ್ಲ. ಆದರೆ ಆತನ ಸಾವು ಪಂಜಾಬ್‌ಗೆ ದೊಡ್ಡ ಮಟ್ಟದ ನೆಮ್ಮದಿ ನಿಡಲಿದೆ ಎಂದು ಹೇಳಿದ್ದಾರೆ. ಕೇಂದ್ರ ಏಜೆನ್ಸಿಗಳಿಂದ ಬಂದ ಮಾಹಿತಿ ಪ್ರಕಾರ, ರಿಂಡಾ ಹೆರೊಯಿನ್ ವ್ಯಸನಿಯಾಗಿದ್ದು, ಡ್ರಗ್ ಓವರ್‌ಡೋಸ್‌ನಿಂದ (drug-overdose) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ರಿಂಡಾ ಸಾವಿನ ಹಿಂದೆ ಐಎಸ್‌ಐ(ISI) ಕೈವಾಡವಿರುವುದನ್ನು ಕೂಡ ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ. 

ಮೂಲತಃ ಪಂಜಾಬ್ ತರ್ನ್ ತರನ್ ಪ್ರದೇಶದವನಾದ ರಿಂಡಾ 2008ರಲ್ಲಿ ಮೊದಲ ಬಾರಿ ತನ್ನ ಕುಟುಂಬದಲ್ಲಿನ ಹೊಡೆದಾಟಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಆತ ಕುಖ್ಯಾತ ಅಪರಾಧಿಗಳ ಸಂಪರ್ಕಕ್ಕೆ ಬಂದಿದ್ದ. ನಂತರ ಮಹಾರಾಷ್ಟ್ರದ (Maharashtra) ನಾಂದೇಡ್ (Nanded) ಜೈಲಿಗೆ ಆತನನ್ನು ಶಿಫ್ಟ್ ಮಾಡಲಾಗಿತ್ತು. ನಂತರ ಬಿಡುಗಡೆಗೊಂಡಿದ್ದ ಆತ ಖಲಿಸ್ತಾನ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ಆ ಉಗ್ರ ಸಂಘಟನೆಯೇ ಆತನಿಗೆ ಭದ್ರತೆ ಹಾಗೂ ನಕಲಿ ಡಾಕ್ಯುಮೆಂಟ್ ಒದಗಿಸುತ್ತಿತ್ತು. ನಂತರ 2020 ರಲ್ಲಿ ಆತ ಪಾಕಿಸ್ತಾನಕ್ಕೆ (Pakistan) ಪರಾರಿಯಾಗಿದ್ದ. 

Mohali Rocket Attack ಗ್ರೆನೇಡ್ ದಾಳಿಯ ಸುಳಿವು ನೀಡಿದ ಪಿಜ್ಜಾ ಆರ್ಡರ್, ಪಂಜಾಬ್ ಪೊಲೀಸ್ ತನಿಖೆ ಚುರುಕು!

Follow Us:
Download App:
  • android
  • ios