ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್‌ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಮೇಲರಗಿ, ಆಕೆಯನ್ನು ಮಹಡಿಗಳ ಮೇಲಿಂದ ಕೆಳಕ್ಕೆ ಎಸೆದ ದುರುಳರಿಗೆ ತಕ್ಕ ಶಾಸ್ತಿ ಮಾಡಲಾಗಿದೆ. 

ಲಖನೌ(ಜ.03) ಆರು ವರ್ಷದ ಪುಟ್ಟ ಬಾಲಕಿ ಮಹಡಿ ಮೇಲೆ ಆಟವಾಡುತ್ತಿದ್ದ ವೇಳೆ ಅದೆ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಇಬ್ಬರು ದುರುಳರನ್ನು ಆಕೆ ಮೇಲರಿಗಿದ್ದಾರೆ. ಬಾಲಕಿ ಬಾಯಿ ಮುಚ್ಚಿ ಕೃತ್ಯ ಎಸಗಿದ್ದಾನೆ. ಬಳಿಕ ಬಾಲಕಿ ಅಳು ನಿಲ್ಲದಿದ್ದಾಗ ಮಹಡಿಯಿಂದ ಕೆಳಕ್ಕೆ ಎಸದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳ ಪತ್ತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಆರೋಪಿಗಳ ಅರೆಸ್ಟ್ ಮಾಡಲು ಗುಂಡಿನ ದಾಳಿ ನಡೆಸಿದ್ದಾರೆ. ಎನ್‌ಕೌಂಟರ್ ಮೂಲಕ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಾಡಿಗೆ ಮನೆಯಲ್ಲಿದ್ದವರೇ ಆರೋಪಿಗಳು

ಮೃತ ಬಾಲಕಿ ತಂದೆ ಘಟನೆ ಕುರಿತು ದೂರು ನೀಡಿದ್ದಾರೆ. ಈ ದೂರಿನ ಪ್ರಕಾರ, 6 ವರ್ಷದ ಬಾಲಕಿ ಮಹಡಿ ಮೇಲೆ ಆಟವಾಡಲು ತೆರಳಿದ್ದಾಳೆ. ಮಗಳು ಆಡವಾಡುತ್ತಿರುವುದನ್ನು ತಂದೆ ಗಮನಿಸಿದ್ದಾರೆ. ಬಳಿಕ ತಂದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆ ನೀಡಿದ್ದ ಬ್ಯಾಚುಲರ್ ಹುಡುಗರು ಅತ್ತ ಇತ್ತ ಓಡಾಡುತ್ತಿರುವುದನ್ನು ಬಾಲಕಿ ತಂದೆ ಗಮನಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಮಗಳ ಸದ್ದು ಕೇಳಿಸುತ್ತಿಲ್ಲ ಎಂದು ಮಹಡಿ ಮೇಲೆ ಹೋಗಿ ನೋಡಿದಾಗ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ತಂದೆ ಮಹಡಿ ಮೇಲೆ ನೋಡಿದ್ದಾರೆ. ಮನೆಯ ಕೆಳಗೆ ನೋಡಿದಾಗ ಪಕ್ಕದ ಖಾಲಿ ಜಾಗದಲ್ಲಿ ಬಾಲಕಿ ತೀವ್ರ ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿದೆ.

ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡ ತಂದೆ ಆಸ್ಪತ್ರೆಗೆ ಓಡಿದ್ದಾರೆ. ಆದರೆ ಪರಿಶೀಲನೆ ನಡೆಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ವರದಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿ ತಂದೆ ನಡೆದ ಘಟನೆ ಹೇಳಿದ್ದಾರೆ. ಬಾಲಕಿ ಮೇಲೆ ಮೇಲಿನ ಮಹಡಿಯಲ್ಲಿದ್ ಇಬ್ಬರು ಬಾಡಿಗೆದಾರರಾದ ರಾಜು ಹಾಗೂ ವೀರೂ ಕಶ್ಯಪ್ ಎರಗಿದ್ದಾರೆ. ಬಳಿಕ ಬಾಲಕಿಯನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಮೃತ ಬಾಲಕಿ ತಂದೆ ಹೇಳಿದ್ದಾಳೆ.

ಪೊಲೀಸರ ಕಾರ್ಯಾಚರಣೆ

ತಕ್ಷಣವೇ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯರ ವಿಚಾರಿಸಿದಾಗ ನಿರ್ಮಾಣ ಹಂತದ ಕಟ್ಟಡದ ಒಳಗೆ ಆರೋಪಿಗಳು ಅಡಗಿರುವ ಮಾಹಿತಿ ಸಿಕ್ಕಿದೆ . ಇತ್ತ ಪೊಲೀಸರು ಕಟ್ಟಡ ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೈಕ್ ಮೂಲಕ ಕಟ್ಟದೊಳಗೆ ಇರುವ ಇಬ್ಬರು ಆರೋಪಿಗಳಿಗೆ ಶರಣಾಗಲು ಸೂಚಿಸಿದ್ದಾರೆ. ಯಾವುದೇ ಉತ್ತರ ಬಂದಿಲ್ಲ. ಇದೇ ವೇಳೆ ಯಾರೇ ಕಟ್ಟಡದ ಒಳಗಿದ್ದರೆ ಹೊರಬರುವಂತೆ ಸೂಚಿಸಿದ್ದಾರೆ. ತಕ್ಷಣವೇ ಹೊರಬರಬೇಕು ಎಂದಿದ್ದಾರೆ. ಇದಕ್ಕೂ ಉತ್ತರ ಸಿಗಲಿಲ್ಲ. ಬಳಿಕ ಪೊಲೀಸ್ ತಂಡ ಕಟ್ಟಡದ ಒಳಕ್ಕೆ ಪ್ರವೇಶಿಸಿದೆ. ಇತ್ತ ಅಢಗಿಕುಳಿತಿದ್ದ ಆರೋಪಿಗಳು ಕಟ್ಟದಲ್ಲಿನ ಧೂಳು, ಮಣ್ಣು ಹಿಡಿದು ಪೊಲೀಸರ ಕಣ್ಣಿಗೆ ಎರಚಿ ಪರಾರಿಯಾಗಲು ಪ್ಲಾನ್ ಮಾಡಿದ್ದರು. ಮಣ್ಣು ಎರಚಿ ಪರಾರಿಯಾಗಲು ಯತ್ನಿಸುತ್ತಿದ್ದಂತೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.