Asianet Suvarna News Asianet Suvarna News

ಸೌತ್ಆಫ್ರಿಕಾ-ವೆಸ್ಟ್ ಇಂಡೀಸ್ ವಿಶ್ವಕಪ್ ಪಂದ್ಯ ರದ್ದು!

ಸೌತ್ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಲೀಗ್ ಪಂದ್ಯ ರದ್ದಾಗಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಸತತ 3 ಪಂದ್ಯ ಸೋತಿರುವ ಸೌತ್ ಆಫ್ರಿಕಾ ಇದೀಗ 4ನೇ ಪಂದ್ಯ ರದ್ದಾಗೋ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.

World cup West Indies vs South africa Match abandoned due to rain
Author
Bengaluru, First Published Jun 10, 2019, 9:11 PM IST

ಸೌಥಾಂಪ್ಟನ್(ಜೂ.10): ವಿಶ್ವಕಪ್ ಟೂರ್ನಿಯಲ್ಲಿ ಮಳೆಕಾಟದಿಂದ ಇದೀಗ 2ನೇ ಪಂದ್ಯ ರದ್ದಾಗಿದೆ. ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ 15ನೇ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಗಿದೆ. ಆದರೆ ಸತತ 3 ಪಂದ್ಯ ಸೋತಿರುವ ಸೌತ್ ಆಫ್ರಿಕಾ ಇದೀಗ 4ನೇ ಪಂದ್ಯ ರದ್ದಾಗೋ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.

ಇದನ್ನೂ ಓದಿ: ಫಿಟ್ ಇದ್ರೂ ತಂಡದಿಂದ ಹೊರದಬ್ಬಿದ್ರು- ಅಳಲು ತೋಡಿಕೊಂಡ ಶೆಹಝಾದ್!

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ 7.3 ಓವರ್ ಬ್ಯಾಟಿಂಗ್ ನಡೆಸಿತ್ತು. ಆರಂಭದಲ್ಲೇ ಹಶೀಮ್ ಆಮ್ಲಾ ಹಾಗೂ ಏಡನ್ ಮರ್ಕಾಂ ವಿಕೆಟ್ ಕಳಂದುಕೊಂಡಿತು. ಇನ್ನು ಕ್ವಿಂಟನ್ ಡಿಕಾಕ್ ಅಜೇಯ 17  ರನ್ ಸಿಡಿಸಿದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಕ್ರೀಸ್‌ಗೆ ಆಗಮಿಸುತ್ತಿದ್ದಂತೆ ಮಳೆ ಆಟ ಶುರುವಾಯಿತು. 2 ವಿಕೆಟ್ ನಷ್ಟಕ್ಕೆ 29 ರನ್ ಸಿಡಿಸಿದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತ ಗೊಂಡಿತು.

ಇದನ್ನೂ ಓದಿ: ಡೇಂಜರ್: ಬ್ಯಾಟ್‌ ಸೆನ್ಸರ್‌ ಬಳಸುತ್ತಿದ್ದಾರೆ ವಾರ್ನರ್‌..!

ನಿರಂತರವಾಗಿ ಸುರಿದ ಮಳೆ ಅಭಿಮಾನಿಗಳನ್ನು ನಿರಾಸೆ ಮಾಡಿತು. ಒಂದು ಹಂತದಲ್ಲಿ ಮಳೆ ನಿಂತು ಪಂದ್ಯ ಪುನರ್ ಆರಂಭಕ್ಕೆ ಸಿದ್ಧತೆ ನಡೆಸಲಾಯಿತು. ಅಷ್ಟರಲ್ಲೇ ಮತ್ತೆ ಸುರಿದ ಮಳೆಯಿಂದ ಪಂದ್ಯ ಆರಂಭವಾಗಲೇ ಇಲ್ಲ. ಕೊನೆಗೆ ಪಂದ್ಯ ಸ್ಥಗಿತಗೊಳಿಸಲಾಯಿತು. 

Follow Us:
Download App:
  • android
  • ios