ಲಂಡನ್(ಜೂ.10): ಅಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್ ಇಂಜುರಿ ಕಾರಣದಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಅಫ್ಘಾನಿಸ್ತಾನ ಮಂಡಳಿ ಷಡ್ಯಂತ್ರ ಮಾಡಿ ನನ್ನನ್ನು ವಿಶ್ವಕಪ್ ಟೂರ್ನಿಯಿಂದ ಹೊರದಬ್ಬಿದ್ದಾರೆ ಎಂದು ಮೊಹಮ್ಮದ್ ಶೆಹಝಾದ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಝಂಫಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ-ನಾಯಕ ಫಿಂಚ್ ಹೇಳಿದ್ದೇನು?

ಅಭ್ಯಾಸ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ಮೊಹಮ್ಮದ್ ಶೆಹಝಾದ್ ವಿಶ್ರಾಂತಿಗೆ ಜಾರಿದ್ದರು. ಆದರೆ ವಿಶ್ವಕಪ್ ಲೀಗ್ ಹಂತದ ಆರಂಭಿಕ 2 ಪಂದ್ಯದಲ್ಲಿ ಶೆಹಝಾದ್ ಕಣಕ್ಕಿಳಿದಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಶೆಹಝಾದ್ ಮೊಣಕಾಲಿನ ಗಾಯದಿಂದ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿ ಘೋಷಿಸಿತ್ತು.

ಇದನ್ನೂ ಓದಿ: ಯುವಿ ನಿವೃತ್ತಿ- ನಿಟ್ಟುಸಿರುಬಿಟ್ಟ ಸ್ಟುವರ್ಟ್ ಬ್ರಾಡ್!

ನಾನು ಸಂಪೂರ್ಣ ಫಿಟ್ ಇದ್ದೆ. ಆದರೆ ಮಂಡಳಿಯಲ್ಲಿನ ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಟ್ರೈನಿಂಗ್ ಕೂಡ ನಡೆಸಿದ್ದ. ಆದರೆ ಮಂಡಳಿ ದಿಢೀರ್ ಪ್ರಕಟಣೆ ನನಗೆ ಆಘಾತ ತಂದಿತ್ತು. ಕೋಚ್ ಫಿಲ್ ಸಿಮೋನ್ಸ್‌ಗೂ ಕೂಡ ಮಂಡಳಿ ನಿರ್ಧಾರದ ಕುರಿತು ತಿಳಿದಿರಲಿಲ್ಲ ಎಂದು ಶೆಹಝಾದ್ ನೋವು ಹೇಳಿಕೊಂಡಿದ್ದಾರೆ.