ಲಂಡನ್‌[ಜೂ.10]: ವಿಶ್ವಕಪ್‌ನಲ್ಲಿ ಯಶಸ್ಸು ಸಾಧಿಸಲು ಆಸ್ಪ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಬ್ಯಾಟ್‌ ಸೆನ್ಸರ್‌ ಬಳಸುತ್ತಿರುವುದಾಗಿ ವರದಿಯಾಗಿದೆ. 

ನೆಟ್ಸ್‌ ಅಭ್ಯಾಸದ ವೇಳೆ ಬ್ಯಾಟ್‌ ಮಾಡುವಷ್ಟುಹೊತ್ತು ಬ್ಯಾಟಿಂಗ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮೊಬೈಲ್‌ ಆ್ಯಪ್‌ಗೆ ರವಾನೆಯಾಗಲಿದೆ. ಬ್ಯಾಟ್‌ ಬೀಸುವ ವೇಗ, ಬ್ಯಾಕ್‌ ಲಿಫ್ಟ್‌ನ ಕೋನ ಸೇರಿದಂತೆ ಪ್ರತಿಯೊಂದು ಮಾಹಿತಿ ಸಂಗ್ರಹವಾಗಲಿದ್ದು, ಪ್ರತಿಯೊಬ್ಬ ಬೌಲರ್‌ ಎದುರು ಸಮರ್ಥವಾಗಿ ಬ್ಯಾಟ್‌ ಮಾಡಲು ಸಹಕಾರಿಯಾಗಲಿದೆ. 

2017ರಲ್ಲಿ ಬ್ಯಾಟ್‌ ಸೆನ್ಸರ್‌ ಬಳಸಲು ಐಸಿಸಿ ಅನುಮತಿ ನೀಡಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಹೆಚ್ಚಾಗಿ ಇದರ ಬಳಕೆ ಮಾಡುತ್ತಿಲ್ಲ. ವಾರ್ನರ್‌ ಪಂದ್ಯದ ವೇಳೆ ಸೆನ್ಸರ್‌ ಬಳಸುತ್ತಾರೆಯೇ ಎನ್ನುವ ಕುರಿತು ಮಾಹಿತಿ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ 84 ಎಸೆತಗಳಲ್ಲಿ 56 ರನ್ ಬಾರಿಸಿದ್ದರು. ಇದರ ಹೊರತಾಗಿಯೂ ಆಸ್ಟ್ರೇಲಿಯಾ 36 ರನ್ ಗಳ ಸೋಲು ಅನುಭವಿಸಿತ್ತು.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...