ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..

ಮ್ಯಾಂಚೆಸ್ಟರ್[ಜು.09]: ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮಳೆಯದ್ದೇ ಕಾರುಬಾರು ನಡೆದಿದೆ. ಮಳೆಯಿಂದ ಕೆಲವು ಪಂದ್ಯಗಳು ರದ್ದಾದ ಪರಿಣಾಮ ಕೆಲ ತಂಡಗಳು ಸೆಮಿಫೈನಲ್ ಪ್ರವೇಶದ ಕನಸು ಲೀಗ್ ಹಂತದಲ್ಲೇ ಭಗ್ನವಾದವು. ಕಾರಣ ಲೀಗ್ ಹಂತದಲ್ಲಿ ಮಳೆಯಿಂದ ರದ್ದಾದ ಪಂದ್ಯಗಳಿಗೆ ಮೀಸಲು ದಿನ ಇರಲಿಲ್ಲ. ಆದರೆ ಸೆಮೀಸ್’ನಲ್ಲಿ ಹಾಗಿಲ್ಲ. 

ಮಳೆಗೆ ವಿಶ್ವಕಪ್ ಸೆಮಿಫೈನಲ್ ಪಂದ್ಯ ರದ್ದಾದರೆ, ಯಾರು ಫೈನಲ್‌ಗೆ?

ನಾಕೌಟ್‌ ಹಂತದ ಮಾದರಿಯಲ್ಲಿ ಹಲವು ಬದಲಾವಣೆಗಳಿವೆ. ಎರಡು ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳನ್ನು ನಿಗದಿ ಮಾಡಲಾಗಿದೆ. ಒಂದೊಮ್ಮೆ ಮಳೆಯಿಂದಾಗಿ ಮೊದಲ ದಿನ ಪಂದ್ಯ ಮುಕ್ತಾಯಗೊಳ್ಳದಿದ್ದರೆ, ಮೀಸಲು ದಿನದಂದು ಹೊಸದಾಗಿ ಪಂದ್ಯ ಆರಂಭವಾಗುವುದಿಲ್ಲ ಬದಲಿಗೆ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ. 

ವಿಶ್ವಕಪ್‌ 2019: ಭಾರತಕ್ಕೆ ಸಿಗುತ್ತಾ ಫೈನಲ್‌ ಟಿಕೆಟ್‌?

ಮೊದಲ ದಿನ ಪಂದ್ಯ ಒಂದೂ ಎಸೆತ ಕಾಣದಿದ್ದರೆ ಮೀಸಲು ದಿನದಂದು ಪೂರ್ತಿ 50 ಓವರ್‌ ಪಂದ್ಯ ನಡೆಸಲಾಗುತ್ತದೆ. ಮೀಸಲು ದಿನದಂದೂ ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಅಂಕಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದ ತಂಡ ಫೈನಲ್‌ ಪ್ರವೇಶಿಸಲಿದೆ. ಉದಾಹರಣೆಗೆ ಭಾರತ-ನ್ಯೂಜಿಲೆಂಡ್‌ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ, ಪಂದ್ಯ ಮೀಸಲು ದಿನದಂದೂ ರದ್ದಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಾರಣ, ಭಾರತ ಫೈನಲ್‌ಗೇರಲಿದೆ.

ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾಗಿ, ಎರಡೂ ದಿನ ಆಟ ನಡೆಸಲು ಸಾಧ್ಯವಾಗದಿದ್ದರೆ ಫೈನಲ್‌ ಪ್ರವೇಶಿಸಿದ ಎರಡೂ ತಂಡಗಳಿಗೆ ಟ್ರೋಫಿ ಹಂಚಲಾಗುತ್ತದೆ. ಸೆಮೀಸ್‌ ಹಾಗೂ ಫೈನಲ್‌ ಪಂದ್ಯಗಳು ಟೈ ಆದರೆ, ಫಲಿತಾಂಶಕ್ಕಾಗಿ ಸೂಪರ್‌ ಓವರ್‌ನ ಮೊರೆ ಹೋಗಲಾಗುತ್ತದೆ.