ಮಳೆಗೆ ವಿಶ್ವಕಪ್ ಸೆಮಿಫೈನಲ್ ಪಂದ್ಯ ರದ್ದಾದರೆ, ಯಾರು ಫೈನಲ್‌ಗೆ?

ಈ ವಿಶ್ವಕಪ್ ಟೂರ್ನಿಯ ಹಲವು ಲೀಗ್ ಪಂದ್ಯಗಳು ಮಳೆಯಿಂದ ರದ್ದಾಗಿದೆ. ಇದು ಕೆಲ ತಂಡಗಳಿಗೆ ಭಾರಿ ಹೊಡೆತ ನೀಡಿದೆ. ಇದೀಗ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ

World cup 2019 options for 4 teams if semifinal washed out by rains

ಲಂಡನ್(ಜು.08): ವಿಶ್ವಕಪ್ ಸೆಮಿಫೈನಲ್ ಹೋರಾಟಕ್ಕೆ ನಾಲ್ಕು ತಂಡಗಳು ಮಾತ್ರವಲ್ಲ, ಅಭಿಮಾನಿಗಳು ಕಾಯುತ್ತಿದ್ದಾರೆ. ಜುಲೈ 9 ರಂದು ಭಾರತ-ನ್ಯೂಜಿಲೆಂಡ್ ಹಾಗೂ ಜುಲೈ 11 ರಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಈ ವಿಶ್ವಕಪ್ ಟೂರ್ನಿಯ 4 ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಮಳೆ ಆತಂಕ ಕಾಡುತ್ತಿದೆ. ಸೆಮಿಫೈನಲ್ ಹೋರಾಟಕ್ಕೆ ಮಳೆ ಬರುವ ಸಾಧ್ಯತಗಳು ತೀರಾ ಕಡಿಮೆ ಇದೆ. ಒಂದು ವೇಳೆ ಮಳೆ ಬಂದರೂ ಹಲವು ಆಯ್ಕೆಗಳಿವೆ.

ಇದನ್ನೂ ಓದಿ: ಇಂಡೋ-ಕಿವೀಸ್ ಪಂದ್ಯಕ್ಕೆ ಇಂಗ್ಲೆಂಡ್ ತೀರ್ಪುಗಾರರು

ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಶೇಕಡಾ 40. ಇನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಸಾಧ್ಯತೆ ಶೇಕಡಾ 30. ಒಂದು ವೇಳೆ ಮಳೆಯಿಂದಾಗಿ ಒಂದು ಎಸೆತವೂ ಕಾಣದಿದ್ದರೆ, ರಿಸರ್ವ್ ಡೇನಲ್ಲಿ ಪಂಡ್ಯ ಆಡಿಸಲು ಅವಕಾಶವಿದೆ.  ಜುಲೈ 9 ರ ಸೆಮಿಫೈನಲ್ ಪಂದ್ಯಕ್ಕೆ ಜುಲೈ 10 ಮೀಸಲು ದಿನವಾದರೆ, ಜುಲೈ 11 ರ ಸೆಮಿಫೈನಲ್ ಪಂದ್ಯಕ್ಕೆ ಜುಲೈ 12 ರಂದು ಮೀಸಲು ದಿನ ಇಡಲಾಗಿದೆ.

ಇದನ್ನೂ ಓದಿ: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಶುರುವಾಯ್ತು ಸಂಕಷ್ಟ!

ಮೀಸಲು ದಿನದಲ್ಲೂ ಮಳೆ ಬಂದರೆ ಹೆಚ್ಚುವರಿ ಸಮಯದಲ್ಲಿ ಕನಿಷ್ಠ 20 ಓವರ್ ಪಂದ್ಯ ಆಡಲಿಸಲು ಅವಕಾಶವಿದೆ. 20 ಓವರ್ ಪಂದ್ಯಕ್ಕೂ ಮಳೆ ಅವಕಾಶ ನೀಡದಿದ್ದರೆ, ಸೂಪರ್ ಓವರ್(1 ಓವರ್ ಪಂದ್ಯ) ಆಡಿಸಿ, ಫಲಿತಾಂಶ ನಿರ್ಧರಿಸಲಾಗುತ್ತೆ. (ಪಂದ್ಯ ಟೈ ಆದರೂ ಸೂಪರ್ ಓವರ್ ಮೂಲಕ ಗೆಲುವು ನಿರ್ಧರಿಸಲಾಗುತ್ತೆ) ಒಂದು ವೇಳೆ ಸೂಪರ್ ಓವರ್‌ಗೂ ಅವಕಾಶ ಸಿಗದಿದ್ದರೆ, ಲೀಗ್ ಹಂತದಲ್ಲಿ ಗರಿಷ್ಠ ಅಂಕ ಸಂಪಾದಿಸಿದ ತಂಡ ಫೈನಲ್ ಪ್ರವೇಶಿಸಲಿದೆ.

World cup 2019 options for 4 teams if semifinal washed out by rains

ಎರಡೂ ದಿನ ಪಂದ್ಯ ನಡೆಯದಿದ್ದರೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಫೈನಲ್ ಪ್ರವೇಶಿಸೋ ಅವಕಾಶಗಳಿದೆ. ಕಾರಣ ಭಾರತ ಹಾಗೂ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಹಂಚಿಕೊಂಡಿದೆ. 

Latest Videos
Follow Us:
Download App:
  • android
  • ios