ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.27): ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 20,000 ರನ್ ಪೂರೈಸಿದ್ದಾರೆ. ಈ ಮೂಲಕ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ದಾಖಲೆ ಪುಡಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತ-ವೆಸ್ಟ್ ಇಂಡೀಸ್- ವಿವಾದಕ್ಕೆ ಕಾರಣವಾಯ್ತು ರೋಹಿತ್ ಔಟ್!

ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ 37 ರನ್ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಿದ ಸಾಧನೆ ಮಾಡಿದರು. ವಿರಾಟ್ ಕೊಹ್ಲಿ 417 ಇನ್ನಿಂಗ್ಸ್‌‌ಗಳಲ್ಲಿ 20,000 ರನ್ ಪೂರೈಸಿದ್ದಾರೆ. ಈ ಮೂಲಕ ಅತೀ ವೇಗದಲ್ಲಿ 20,000 ರನ್ ಪೂರೈಸಿದ ಕ್ರಿಕೆಟಿಗ ಅನ್ನೋ  ದಾಖಲೆ ಬರೆದರು.

ಇದನ್ನೂ ಓದಿ: ವಿಶ್ವಕಪ್ 2019: ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಪಾಕ್ ಬ್ರೇಕ್

ಕೊಹ್ಲಿಗೂ ಮೊದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರ 453 ಇನ್ನಿಂಗ್ಸ್‌ಗಳಲ್ಲಿ 20,000 ರನ್ ಪೂರೈಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಪೂರೈಸಿದ ಭಾರತದ 3ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್ 34,357 ರನ್ ಹಾಗೂ ರಾಹುಲ್ ದ್ರಾವಿಡ್ 24,208 ರನ್ ಸಿಡಿಸಿದ್ದಾರೆ. 20,000 ರನ್ ಪೂರೈಸಿದ ವಿಶ್ವದ 12ನೇ ಕ್ರಿಕೆಟಿಗ ಅನ್ನೋ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 
ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ 82 ಎಸೆತದಲ್ಲಿ 8 ಬೌಂಡರ್ ನೆರವಿನಿಂದ 72 ರನ್ ಸಿಡಿಸಿ ಔಟಾದರು.