ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.27): ಟೆಕ್ನಾಲಜಿ ಬಳಕೆ ಹೆಚ್ಚಾಗುತ್ತಿದ್ದಂತೆ ಕ್ರಿಕೆಟ್‌ನಲ್ಲಿ ಅಪಸ್ವರಗಳು ಹೆಚ್ಚಾಗುತ್ತಿದೆ. ಅಂಪೈರ್ ತೀರ್ಪು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಈ ವಿಶ್ವಕಪ್ ಟೂರ್ನಿಯಲ್ಲೂ ಅಂಪೈರ್ ತೀರ್ಪು ಹಲವು ಬಾರಿ ವಿವಾದಕ್ಕೆ ಗುರಿಯಾಗಿದೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಔಟ್ ಕೂಡ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಇಂಡೋ-ಪಾಕ್ ಅಭಿಮಾನಿಗಳಿಂದ ಡ್ಯಾನ್ಸ್-ವೈರಲ್ ಆಯ್ತು ವೀಡಿಯೋ!

ಉತ್ತಮ ಲಯದಲ್ಲಿದ್ದ ರೋಹಿತ್ ಶರ್ಮಾಗೆ , ವಿಂಡೀಸ್ ವೇಗಿ ಕೆಮರ್ ರೋಚ್ ಸ್ವಿಂಗ್ ಮೂಲಕ ಕಾಡಿದರು.  ರೋಹಿತ್ ವಿರುದ್ಧ ಇನ್‌ಸೈಡ್ ಎಡ್ಜ್ ಹಾಗೂ ಕ್ಯಾಚ್‌ಗಾಗಿ ವಿಂಡೀಸ್  ಮನವಿ ಮಾಡಿತು. ಆದರೆ ಫೀಲ್ಡ್ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ಥ್ ನಾಟೌಟ್  ತೀರ್ಪು ನೀಡಿದರು. ಇದರಿಂದ ತೃಪ್ತಿಯಾಗದ ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ DRS(ಅಂಪೈರ್ ರಿವ್ಯೂ ಸಿಸ್ಟಮ್) ಮೂಲಕ ತೀರ್ಪನ್ನು ಮರುಪರಿಶೀಲಿಸಲು ಮನವಿ ಮಾಡಿದರು.

ಇದನ್ನೂ ಓದಿ:ಪಾರ್ಟಿ ಬದಲಿಸಿದ ಪಾಕಿಗಳು: ಟೀಂ ಇಂಡಿಯಾ ಬೆಂಬಲಕ್ಕೆ ಹೊಸ ಗಿರಾಕಿಗಳು!

ಥರ್ಡ್ ಅಂಪೈರ್ ಪರಿಶೀಲಿಸಿದಾಗ ಸ್ನಿಕೋ ಮೀಟರ್‌ನಲ್ಲಿ ಬ್ಯಾಟ್ ಎಡ್ಜ್ ಆಗಿರೋ ಸುಳಿವು ನೀಡಿತು. ಆದರೆ ಬಾಲ್ ಬ್ಯಾಟ್‌ಗೆ ತಾಗಿರಲಿಲ್ಲ. ಚೆಂಡು ವೇಗವಾಗಿ ಬ್ಯಾಟ್ ಬದಿಯಿಂದ ಸಾಗಿದ ಕಾರಣ ಗಾಳಿಯ ಶಬ್ಧವನ್ನು ಸ್ನಿಕೋ ಮೀಟರ್ ಗ್ರಹಿಸಿದೆ. ಹೀಗಾಗಿ ಫೀಲ್ಡ್ ಅಂಪೈರ್ ತೀರ್ಪನ್ನೇ ಗೌರವಿಸಬೇಕಿತ್ತು. ಆದರೆ ಥರ್ಡ್ ಅಂಪೈರ್ ನೇರವಾಗಿ ಔಟ್ ತೀರ್ಪು ನೀಡಿದರು. ಇದು ಚರ್ಚೆಗೆ ಗ್ರಾಸವಾಗಿದೆ. ಹಲವು ಕ್ರಿಕೆಟ್ ದಿಗ್ಗಜರು ಥರ್ಡ್ ಅಂಪೈರ್ ತೀರ್ಪನ್ನು ವಿರೋಧಿಸಿದ್ದಾರೆ.