ಇಂಗ್ಲೆಂಡ್ ಈ ದಶಕದ ಹೊಸ ಚೋಕರ್ಸ್..!
ಇಲ್ಲೀವರೆಗೂ ಚೋಕರ್ಸ್ ಎನ್ನುವ ಹಣೆಪಟ್ಟಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೀಮಿತವಾಗಿತ್ತು. ಆದರೀಗ ಆ ಹಣೆಪಟ್ಟಿ ಇಂಗ್ಲೆಂಡ್‌ಗೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?
ಬೆಂಗಳೂರು(ಜೂ.27): ದಕ್ಷಿಣ ಆಫ್ರಿಕಾ ತಂಡ ಬಹಳ ವರ್ಷಗಳಿಂದ ‘ಚೋಕರ್ಸ್’ ಹಣೆಪಟ್ಟಿಯೊಂದಿಗೆ ಕ್ರಿಕೆಟ್ ಆಡುತ್ತಿದೆ. ಐಸಿಸಿ ಟೂರ್ನಿಗಳ ವಿಷಯಕ್ಕೆ ಬಂದಾಗ ಇಂಗ್ಲೆಂಡ್ ನಿಜವಾದ ‘ಚೋಕರ್ಸ್’. ಕಳೆದ 6-7 ವರ್ಷಗಳಲ್ಲಿ ಇಂಗ್ಲೆಂಡ್‌ಗೆ ಐಸಿಸಿ ಟೂರ್ನಿಗಳಲ್ಲಿ ಅದೃಷ್ಟಕೈಕೊಟ್ಟಿದೆ. ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
ಟೀಂ ಇಂಡಿಯಾ ಕೇಸರಿ ಜೆರ್ಸಿಗೆ ಕಾಂಗ್ರೆಸ್ ತೀವ್ರ ವಿರೋಧ
2013ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್‌ಗೆ ಕೊನೆ 16 ಎಸೆತಗಳಲ್ಲಿ 20 ರನ್ ಮಾತ್ರ ಬೇಕಿತ್ತು. ಕೈಯಲ್ಲಿ 6 ವಿಕೆಟ್ ಇತ್ತು. ಆದರೂ ಇಂಗ್ಲೆಂಡ್ 5 ರನ್ ಸೋಲು ಅನುಭವಿಸಿತು. 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 22 ರನ್‌ಗೆ 4 ವಿಕೆಟ್ ಕಳೆದುಕೊಂಡು ಗುಂಪು ಹಂತದಲ್ಲೇ ಹೊರಬಿದ್ದಿತ್ತು.
ಕಿತ್ತಳೆ ಬಣ್ಣದ ಟೀಂ ಇಂಡಿಯಾ ಜೆರ್ಸಿ ಅನಾವರಣ
2016ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿಸಿಕೊಂಡಿದ್ದ ಇಂಗ್ಲೆಂಡ್, ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಗೆದ್ದಿದ್ದ ಇಂಗ್ಲೆಂಡ್, ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 8 ವಿಕೆಟ್‌ಗಳ ಸೋಲು ಕಂಡು ನಿರ್ಗಮಿಸಿತ್ತು.
ಇದೀಗ 2019ರ ಏಕದಿನ ವಿಶ್ವಕಪ್‌ನಲ್ಲೂ ಇಂಗ್ಲೆಂಡ್ ಸೆಮಿಫೈನಲ್ ಹಾದಿ ಕಠಿಣಗೊಂಡಿದೆ. ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ ಆಗುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಇಂಗ್ಲೆಂಡ್, ಒಂದೊಮ್ಮೆ ಸೆಮೀಸ್‌ಗೇರದಿದ್ದರೆ ‘ಚೋಕರ್ಸ್’ ಹಣೆಪಟ್ಟಿ ಅಧಿಕೃತವಾಗಿ ಇಂಗ್ಲೆಂಡ್ ಪಾಲಾಗಲಿದೆ.