ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದು, ಕೊನೆಗೂ ಜೆರ್ಸಿ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಮ್ಯಾಂಚೆಸ್ಟರ್[ಜೂ.27]: ವಿಶ್ವಕಪ್ ಟೂರ್ನಿಯಲ್ಲಿ ತವರು ಹಾಗೂ ತವರಿನಾಚೆ ಪಂದ್ಯಗಳು ಎನ್ನುವ ಮಾದರಿ ಅನುಸರಿಸಲಾಗುತ್ತಿದೆ. ಸಾಮಾನ್ಯವಾಗಿ ಫುಟ್ಬಾಲ್ ಟೂರ್ನಿಗಳಲ್ಲಿ ಈ ಪದ್ಧತಿ ಇದೆ. ಅದನ್ನೇ ಐಸಿಸಿ ಏಕದಿನ ವಿಶ್ವಕಪ್‌ನಲ್ಲೂ ಅಳವಡಿಸಿದೆ. ಹೀಗಾಗಿ ತಂಡಗಳು ಎರಡು ವಿಭಿನ್ನ ಬಣ್ಣಗಳ ಜೆರ್ಸಿಗಳನ್ನು ತೊಡಬೇಕಿದೆ.
ಕೊಹ್ಲಿ ಬಳಗಕ್ಕೆ ಒಪ್ಪೊ, ಆಫ್ಘನ್ ತಂಡಕ್ಕೆ ಅಮುಲ್: ಇದು ಲಾಭದ ಕಮಾಲ್!
ಇಂಗ್ಲೆಂಡ್ ಎದುರು ಕಿತ್ತಳೆ ಜರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ..?
ಭಾರತ ತಂಡ ನೀಲಿ ಜತೆ ಕಿತ್ತಳೆ ಬಣ್ಣದ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡಿದೆ. ಆ ಜೆರ್ಸಿ ಅನಾವರಣಗೊಂಡಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇಂಗ್ಲೆಂಡ್ ವಿರುದ್ಧ ಜೂ.30ರಂದು ನಡೆಯುವ ಪಂದ್ಯಕ್ಕೆ ಭಾರತ ತಂಡ ಈ ಜೆರ್ಸಿ ತೊಡಲಿದೆ ಎನ್ನಲಾಗಿದೆ.
ರೊಚ್ಚಿಗೆದ್ದ ಅಭಿಮಾನಿಗಳನ್ನು ನಾಜೂಕಾಗಿ ಸಮಾಧಾನ ಮಾಡಿದ ಕೋಚ್ ಶಾಸ್ತ್ರಿ
ಇಂದೇ ಕಿತ್ತಳೆ ಜೆರ್ಸಿ: ವಿಂಡೀಸ್ ವಿರುದ್ಧದ ಮ್ಯಾಂಚೆಸ್ಟರ್ ಪಂದ್ಯ ಭಾರತದ ಪಾಲಿಗೆ ತವರಿನಾಚಿನ ಪಂದ್ಯವೆನಿಸಿದ್ದು, ಈ ಪಂದ್ಯಕ್ಕೇ ಕಿತ್ತಳೆ ಜೆರ್ಸಿ ತೊಡಲಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.
10 ದಿನಗಳಲ್ಲಿ 4 ಪಂದ್ಯ ಆಡಲಿರುವ ಭಾರತ ತಂಡ
ಈ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಒಂದು ವಾರ ತಡವಾಗಿ ಆರಂಭಿಸಿದ ಭಾರತ, ಇದೀಗ 10 ದಿನಗಳಲ್ಲಿ 4 ಪಂದ್ಯಗಳನ್ನು ಆಡಲಿದೆ. ಒತ್ತಡ ನಿರ್ವಹಣೆ ಕೊಹ್ಲಿ ಪಡೆಗೆ ಸವಾಲಾಗಿ ಪರಿಣಮಿಸಲಿದೆ. ಗುರುವಾರ ವಿಂಡೀಸ್ ವಿರುದ್ಧ ಆಡಲಿರುವ ಭಾರತ, ಜೂ.30ರಂದು ವಿಂಡೀಸ್, ಜು.2ಕ್ಕೆ ಬಾಂಗ್ಲಾದೇಶ, ಜು.6ಕ್ಕೆ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಭಾರತ ಬಾಕಿ ಇರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ.
