ಟೀಂ ಇಂಡಿಯಾ ಕೇಸರಿ ಜೆರ್ಸಿಗೆ ಕಾಂಗ್ರೆಸ್ ತೀವ್ರ ವಿರೋಧ
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆಡಲಿರುವ ಪಂದ್ಯಕ್ಕೆ ವಿರಾಟ್ ಪಡೆ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ಜೆರ್ಸಿಗೀಗ ರಾಜಕೀಯ ಬಣ್ಣ ಅಂಟಿಕೊಂಡಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?
ಮುಂಬೈ[ಜೂ.27]: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 30, ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ ಬಣ್ಣದ ಉಡುಪು ಧರಿಸಿ ಆಡುವ ಟೀಂ ಇಂಡಿಯಾ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಾರ್ಟಿ ಬದಲಿಸಿದ ಪಾಕಿಗಳು: ಟೀಂ ಇಂಡಿಯಾ ಬೆಂಬಲಕ್ಕೆ ಹೊಸ ಗಿರಾಕಿಗಳು!
ಭಾರತ ತಂಡದ ಈ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರದ ಕುಮ್ಮಕ್ಕಿದೆ. ಮೋದಿ ಇಡೀ ದೇಶವನ್ನು ಕೇಸರಿಮಯ ಮಾಡಲು ಹೊರಟಿದೆ ಎಂದು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ದೂರಿದ್ದಾರೆ. ಯಾವ ಕಾರಣಕ್ಕಾಗಿ ಭಾರತ ತಂಡ ಕೇಸರಿ ಬಣ್ಣದ ಉಡುಪನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತ್ರಿವರ್ಣ ಧ್ವಜದಲ್ಲಿರುವ ಮೂರು ಬಣ್ಣಗಳು ಇದ್ದರೆ ಅದನ್ನು ಒಪ್ಪಬಹುದಿತ್ತು ಎಂದಿದ್ದಾರೆ.
ಕಿತ್ತಳೆ ಬಣ್ಣದ ಟೀಂ ಇಂಡಿಯಾ ಜೆರ್ಸಿ ಅನಾವರಣ
ಇನ್ನು ಕಾಂಗ್ರೆಸ್ ಶಾಸಕ ನಸೀಮ್ ಖಾನ್ ಪ್ರತಿಕ್ರಿಯಿಸಿ ಮೋದಿ ಅವರ ಕೇಸರಿ ರಾಜಕಾರಣದ ಪರಿಣಾಮ ಇದು. ಎಲ್ಲವನ್ನೂ ಕೇಸರಿಮಯ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಮತ್ತು ಶಿವಸೇನೆ ನಾಯಕರು, ವಿಧಾನಸಭೆಯಲ್ಲಿ ಮಾತನಾಡಲು ವಿಪಕ್ಷಗಳಿಗೆ ಯಾವುದೇ ವಿಷಯ ಇಲ್ಲ. ಅದಕ್ಕೆಂದೇ ಸಲ್ಲದ ವಿಷಯವನ್ನು ಪ್ರಸ್ತಾಪ ಮಾಡುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆಯ ಸೋಲಿಗೆ ಅವು ಈಗಲೇ ಸಿದ್ಧತೆ ಆರಂಭಿಸಿವೆ. ಅದಕ್ಕೆ ಇಂಥ ಬಾಲಿಷ ಆರೋಪ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ. ಪ್ರಸಕ್ತ ಸಾಲಿನ ವಿಶ್ವಕಪ್ ಟೂರ್ನಿಯ 7ನೇ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಐಸಿಸಿ ನಿಯಮಗಳಂತೆ ಭಾರತ ತಂಡ ಕೇಸರಿ ಮಿಶ್ರಿತ ಟೀಶರ್ಟ್ ಧರಿಸಿ ಆಡಲು ನಿರ್ಧರಿಸಿದೆ.