ಲಂಡನ್(ಜೂ.14): 2019ರ ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿರುವ ಇಂಗ್ಲೆಂಡ್ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದೆ. ಮಳೆಯಿಂದ ಈಗಾಗಲೇ 3 ಪಂದ್ಯಗಳು ರದ್ದಾಗಿದೆ. ಬಹುತೇಕ ಪಂದ್ಯಗಳು ಮಳೆ ಭೀತಿಯಲ್ಲೇ ನಡೆಯುತ್ತಿದೆ. ಇಷ್ಟಾದರೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಳೆಯಿಂದ ಮೈದಾನ ಹಾನಿಗೊಳಗಾಗದಂತೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಇಂಗ್ಲೆಂಡ್ ಮಂಡಳಿಯನ್ನು ಇದೀಗ ಸೌರವ್ ಗಂಗೂಲಿ ಕಾಲೆಳೆದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಯಾವುದೇ ಪೂರ್ವ ತಯಾರಿ ನಡೆಸಿಲ್ಲ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಕ್ಕೆ ಮಳೆಯಿಂದ ರಕ್ಷಣೆ ಪಡೆಯಲು ಇಂಗ್ಲೆಂಡ್‌ನಿಂದ ಕವರ್ ತರಲಾಗಿತ್ತು. ಆದರೆ ಇದೀಗ ವಿಶ್ವಕಪ್ ಆಯೋಜಿಸುವ ಮೈದಾನ ರಕ್ಷಿಸಲು ಇಂಗ್ಲೆಂಡ್ ಬಳಿ ಕವರ್ ಇಲ್ಲ ಎಂದು ಸೌರವ್ ಗಂಗೂಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಕುಟುಕಿದ್ದಾರೆ.

ಇದನ್ನೂ ಓದಿ: ಧೋನಿ ಹೊಟೇಲ್- MSD ಅಭಿಮಾನಿಗಳಿಗೆ ಫ್ರೀ ಊಟ!

ವಿಶ್ವಕಪ್ ಆಯೋಜನೆಗೆ ಕೋಟಿ ಕೋಟಿ ಹಣ ಪಡೆದಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಳೆಯಿಂದ ಪಂದ್ಯ ರದ್ದಾಗೋದನ್ನು ತಪ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಂಗೂಲಿ ಹೇಳಿದ್ದಾರೆ. ಟೂರ್ನಿ ಆಯೋಜನೆಗೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ಪಾಠ ಕಲಿಯಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ.