ಮುಂಬೈ(ಜೂ.14): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯಕ್ಕೂ ಮುನ್ನ ಉಭಯ ದೇಶಗಳ ಅಭಿಮಾನಿಗಳ ನಡುವೆ ಯುದ್ದವೇ ಆರಂಭಗೊಂಡಿದೆ. ಪಾಕಿಸ್ತಾನ ಟಿವಿ ಪ್ರಮೋಶನ್‌ಗೆ ಭಾರತದ ಪೈಲೆಟ್ ಅಭಿನಂದನ್ ವರ್ಧಮಾನ್ ಅಣಕಿಸಿ ವೀಡಿಯೋ ಬಿಡುಗಡೆ ಮಾಡಿ ಭಾರತೀಯ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅಖಾಡಕ್ಕೆ ವಿವಾದಿತ ನಟಿ ಪೂನಂ ಪಾಂಡೆ ಎಂಟ್ರಿಕೊಟ್ಟಿದ್ದಾರೆ. 

 

ಬಾಲಾಕೋಟ್ ಏರ್‌ಸ್ಟ್ರೈಕ್ ಹೀರೋ ಅಭಿನಂದನ್ ವರ್ಧಮಾನ್ ಅಣಕಿಸಿದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಪೂನಂ ತಿರುಗೇಟು ನೀಡಿದ್ದಾರೆ.   ಟೀ ಕಪ್ ಮೂಲಕ ಈ ಬಾರಿ ಪಾಕಿಸ್ತಾನಕ್ಕೆ ಕಪ್ ಅನ್ನೋ ಸಂದೇಶ ಸಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೂನಂ ಪಾಂಡೆ ಟಿ ಕಪ್ ಯಾಕೆ ನೀವು ಬ್ರಾ ಕಪ್ ತೆಗೆದುಕೊಳ್ಳಿ, ಒಂದಲ್ಲ ಎರಡು ಎಂದು ಪೂನಂ ಪಾಂಡೆ ವೀಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.

 

 

ಕ್ರಿಕೆಟ್ ಹಾಗೂ ಪೂನಂ ಪಾಂಡೆಗೆ ಅವಿನಾಭಾವ ಸಂಬಂಧವಿದೆ. ಈ ಹಿಂದೆ ಹಲವು ಬಾರಿ ಪೂನಂ ಪಾಂಡೆ ಟೀಂ ಇಂಡಿಯಾ ಸರಣಿ ಗೆದ್ದರೆ, ವಿಶ್ವಕಪ್ ಗೆದ್ದರೆ, ಹೀಗೆ ಹಲವು ಪ್ರಶಸ್ತಿಗಳಿಗೆ ಬೆತ್ತಲೆಯಾಗೋದಾಗಿ ಹೇಳಿ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದರು. ಇದೀಗ ಬ್ರಾ ಕಪ್ ಮೂಲಕ ಮತ್ತೊಮ್ಮೆ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ವೀಡಿಯೋ ಭಾರಿ ವೈರಲ್ ಆಗಿದೆ. ಪೂನಂ ವೀಡಿಯೋಗೆ ಪಾಕಿಸ್ತಾನ ಅಭಿಮಾನಿಗಳು ಕೂಡ ತಿರುಗೇಟು ನೀಡಿದ್ದಾರೆ.