ಕೋಲ್ಕತಾ(ಜೂ.14): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಇದೀಗ ಧೋನಿ ಅಭಿಮಾನಿಯೊರ್ವ ಎಂ.ಎಸ್.ಧೋನಿ ಹೊಟೇಲ್ ಆರಂಭಿಸಿದ್ದಾನೆ. ಧೋನಿ ಅಭಿಮಾನಿಯಾಗಿದ್ದರೆ ಸಾಕು ಈ ಹೊಟೇಲ್ನಲ್ಲಿ ಎಲ್ಲವೂ ಫ್ರೀಯಾಗಿ ಸಿಗಲಿದೆ. ಈ ಸ್ಪೆಷಲ್ ಹೊಟೇಲ್ ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ಜಿಲ್ಲೆಯಲ್ಲಿದೆ.

ಶಂಬು ಬೊಸೆ ಅನ್ನೋ ಧೋನಿ ಅಭಿಮಾನಿ ಸಣ್ಣ ಹೊಟೇಲ್ ನಡೆಸುತ್ತಿದ್ದಾರೆ. ಧೋನಿ ಕಟ್ಟಾ ಅಭಿಮಾನಿಯಾಗಿರುವ  ಶಂಭು ಬೊಸೆ ಧೋನಿ ಆಡೋ ಪ್ರತಿ ಪಂದ್ಯವನ್ನು ವೀಕ್ಷಿಸುತ್ತಾರೆ. ಇದುವರೆಗೂ ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸಿಲ್ಲ. ಹೊಟೇಲ್ನಲ್ಲಿರುವ ಟಿವಿಯಲ್ಲಿ ಧೋನಿ ಬ್ಯಾಟಿಂಗ್ ನೋಡಿ ಆನಂದಿಸಿದ್ದಾರೆ. ಧೋನಿಯನ್ನು ಬೆಂಬಲಿಸಿದ್ದಾರೆ. ಧೋನಿ ಮೇಲಿನ ಅಭಿಮಾನದಿಂದ ಶಂಭು ಎಂ.ಎಸ್.ಧೋನಿ ಹೊಟೇಲ್ ಹೆಸರಿನಲ್ಲಿ ಸಣ್ಣ ಹೊಟೆಲ್ ಆರಂಭಿಸಿದ್ದಾರೆ.

ನೀವು ಧೋನಿ ಅಭಿಮಾನಿಯಾಗಿದ್ದರೆ ಸಾಕು, ಈ ಹೊಟೇಲ್ನಲ್ಲಿ ಏನೇ ತಿಂದರೂ  ಹಣ ನೀಡಬೇಕಿಲ್ಲ. ಕಾರಣ ಧೋನಿ ಅಭಿಮಾನಿಗೆ ಇಲ್ಲಿ ಎಲ್ಲವೂ ಉಚಿತ. ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸುವಷ್ಟು ಹಣ ಶಂಭು ಬಳಿ ಇಲ್ಲ. ಆದರೆ ಧೋನಿ ಮೇಲಿನ ಅಭಿಮಾನ, ಉಚಿತವಾಗಿ ಆಹಾರ ನೀಡುವಂತೆ ಮಾಡಿದೆ. ಮುಂದೊಂದು ದಿನ ಧೋನಿಯನ್ನು ಭೇಟಿಯಾಗುವೆ ಅನ್ನೋ ವಿಶ್ವಾಸವಿದೆ. ಧೋನಿಯನ್ನು ತನ್ನ ಹೊಟೇಲ್‌ಗೆ ಆಹ್ವಾನಿಸಿ ಬಂಗಾಳದ ಭಾತ್ ಮಚ್ಚ್ ತಿನಿಸು ನೀಡಬೇಕು ಅನ್ನೋ ಮಹದಾಸೆ ಇಟ್ಟುಕೊಂಡಿದ್ದಾರೆ.

ಸಣ್ಣ ಟೀ ಅಂಗಡಿ ಇಟ್ಟುಕೊಂಡಿದ್ದ ಶುಂಭು ಬೋಸೆ ಇದೀಗ ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ತಕ್ಕ ಮಟ್ಟಿನ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ಶಂಭು, ಧೋನಿ ಅಭಿಮಾನಿಗಳೆಂದು ಬರುವವರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ಧೋನಿ ಅಭಿಮಾನದಿಂದ ಉಚಿತವಾಗಿ ನೀಡುತ್ತಿದ್ದೇನೆ. ಎಲ್ಲವೂ ಧೋನಿಗಾಗಿ ಎಂದಿದ್ದಾರೆ.