ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.28): ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ರೋಹಿತ್ ಇನ್‌ಸೈಡ್ ಎಡ್ಜ್ ಆಗಿಲ್ಲದಿದ್ದರೂ, ತೀರ್ಪು ಮರುಪರಿಶೀಲನೆಯ ವೇಳೆ ಸ್ನಿಕೋ ಮೀಟರ್ ಎಡ್ಜ್ ಸುಳಿವು ನೀಡಿತ್ತು. ಹೀಗಾಗಿ 3ನೇ ಅಂಪೈರ್ ಹಿಂದು ಮುಂದು ನೋಡದೆ ಔಟ್ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಭಾರತ-ವೆಸ್ಟ್ ಇಂಡೀಸ್- ವಿವಾದಕ್ಕೆ ಕಾರಣವಾಯ್ತು ರೋಹಿತ್ ಔಟ್!

ರೋಹಿತ್ ಶರ್ಮಾ ಔಟ್ ತೀರ್ಪು ಬೆನ್ನಲ್ಲೇ ಆಕ್ರೋಶಗಳು ವ್ಯಕ್ತವಾಗಿತ್ತು. ಮಾಜಿ ಕ್ರಿಕೆಟಿಗರು, ಅಭಿಮಾನಿಗಳು DRS ಹಾಗೂ 3ನೇ ಅಂಪೈರ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಸ್ವತಃ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ ಮೂಲಕ ವಿವಾದಾತ್ಮಕ ಔಟ್‌ಗೆ ತಿರುಗೇಟು ನೀಡಿದ್ದಾರೆ. ರೋಹಿತ್ ಶರ್ಮಾ ನಾಟೌಟ್ ಅನ್ನೋದಕ್ಕೆ ರೋಹಿತ್ ಸಾಕ್ಷಿ ಒದಗಿಸಿದ್ದಾರೆ. ಫೋಟೋ ಪೋಸ್ಟ್ ಮಾಡೋ ಮೂಲಕ ಅಂಪೈರ್ ವಿರುದ್ದ ಗುಡುಗಿದ್ದಾರೆ.

 

ಇದನ್ನೂ ಓದಿ: ವಿಶ್ವಕಪ್ 2019 ಕೊಹ್ಲಿ ತೆಕ್ಕೆಗೆ ಮತ್ತಷ್ಟು ದಾಖಲೆಗಳು ಸೇರ್ಪಡೆ

ರೋಹಿತ್ ಶರ್ಮಾ 23 ಎಸೆತದಲ್ಲಿ 18 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ರೋಹಿತ್ ವಿಕೆಟ್ ಪತನದಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನ ಪಂದ್ಯದ ಬಳಿಕ ಭಾರತದ ಮಧ್ಯಮ ಕ್ರಮಾಂಕ ಮತ್ತೆ ವೈಫಲ್ಯ ಅನುಭವಿಸಿತು. ಆದರೆ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಭಾರತ 125 ರನ್ ಗೆಲುವು ಸಾಧಿಸಿತು.