ಬರ್ಮಿಂಗ್‌ಹ್ಯಾಮ್(ಜು.03): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಒಂದೆಡೆ 87ರ ಹರೆಯದ ಅಭಿಮಾನಿ ಚಾರುಲತಾ ಎಲ್ಲರ ಗಮನಸಳೆದಿದ್ದರೆ, ಮತ್ತೊಂದೆಡೆ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸರ್ ಅಭಿಮಾನಿಗೆ ಬಡಿದು ಆತಂಕ ಸೃಷ್ಟಿಯಾಗಿತ್ತು. ಪಂದ್ಯ ಮುಗಿದ ಬಳಿಕ ರೋಹಿತ್ ಅಭಿಮಾನಿಯನ್ನು ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ್ದಾರೆ.

ಇದನ್ನೂ ಓದಿ: ಪಂದ್ಯದ ನಡುವೆ ರಕ್ತ ಉಗುಳಿದ ಧೋನಿ; ಭಾವುಕರಾದ ಫ್ಯಾನ್ಸ್!

ಬಾಂಗ್ಲಾದೇಶ ವಿರುದ್ದ ರೋಹಿತ್ ಶರ್ಮಾ ಬೌಂಡರಿ, ಸಿಕ್ಸರ್ ಮೂಲಕ ಅಬ್ಬರಿಸಿ ಶತಕ ಸಿಡಿಸಿದ್ದರು. ರೋಹಿತ್ ಅಬ್ಬರದ ಸಿಕ್ಸರ್ ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿ ಮೀನಾಗೆ ಬಡಿದಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ರೋಹಿತ್ ಸಿಕ್ಸರ್ ಬಡಿದ ಮೀನಾ ಚೇತರಿಸಿಕೊಂಡು ಸಂಭ್ರಮದಲ್ಲಿ ತೇಲಾಡಿದರು. ಆದರೆ ರೋಹಿತ್ ಶರ್ಮಾಗೆ ಆತಂಕ ಎದುರಾಗಿತ್ತು.

ಇದನ್ನೂ ಓದಿ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!

ಪಂದ್ಯದ ಬಳಿಕ ಅಭಿಮಾನಿ ಮೀನಾ ಭೇಟಿಯಾದ ರೋಹಿತ್ ಶರ್ಮಾ, ಸಹಿ ಹಾಕಿದ ಕ್ಯಾಪ್ ಉಡುಗೊರೆಯಾಗಿ ನೀಡಿದರು. ಬಳಿಕ ರೋಹಿಕ್  ಅಭಿಮಾನಿ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ.  ಸಿಕ್ಸರ್ ಬಂದಾಗ ಕ್ಯಾಚ್ ಹಿಡಿಯಲು ಸಾಧ್ಯವಾಗದಿದ್ದರೆ ದೂರ ಸರಿಯಿರಿ, ಅಪಾಯ ತಂದೊಡ್ಡಬೇಡಿ ಎಂದು ರೋಹಿತ್ ಕಿವಿ ಮಾತುಹೇಳಿದ್ದಾರೆ.