ಬರ್ಮಿಂಗ್‌ಹ್ಯಾಮ್(ಜು.03): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದ ರೋಚಕತೆಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ಟೀಂ ಇಂಡಿಯಾ ಅಭಿಮಾನಿ, 87ರ ಹರೆಯದ ಚಾರುಲತಾ ಪಟೇಲ್. ಚಾರುಲತಾ ಮೈದಾನಕ್ಕೆ ಆಗಮಿಸಿದ ವೇಳೆ ಟೀಂ ಇಂಡಿಯಾ ಟ್ರೋಫಿ ಗೆದ್ದುಕೊಂಡಿದೆ. ಇದೀಗ 2019ರಲ್ಲೂ ಮತ್ತೆ ಭಾರತ  ಚಾಂಪಿಯನ್ ಆಗುತ್ತೆ ಅನ್ನೋ ನಂಬಿಕೆ ಬಲವಾಗುತ್ತಿದೆ.

ಇದನ್ನೂ ಓದಿ: ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!

1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ತನ್ನದಾಗಿಸಿತ್ತು. ಈ ಐತಿಹಾಸಿಕ ಪಂದ್ಯ ವೀಕ್ಷಿಸಲು ಇದೇ ಚಾರುಲತಾ ಪಟೇಲ್, ಲಾರ್ಡ್ಸ್ ಮೈದಾನದಲ್ಲಿ ಹಾಜರಿದ್ದರು. ಅದು ಟೀಂ ಇಂಡಿಯಾ ಅಭಿಮಾನಿ ಚಾರುಲತಾ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದ ಮೊದಲ ಪಂದ್ಯವಾಗಿತ್ತು. ಬಳಿಕ  ಟಿವಿಯಲ್ಲಿ ಪಂದ್ಯ ನೋಡುತ್ತಿದ್ದ ಚಾರುಲತಾ ಇದೀಗ 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಹಾಜರಾಗಿದ್ದಾರೆ. 

ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ- ಟೀಂ ಇಂಡಿಯಾ ಅಭಿಮಾನಿಗೆ ಟ್ವಿಟರಿಗರು ಜೈ!

ಟೀಂ ಇಂಡಿಯಾದ ಮುಂದಿನ ಪಂದ್ಯಗಳಿಗೂ ಚಾರುಲತಾ ಖುದ್ದು ಮೈದಾನದಲ್ಲಿ ಹಾಜರಿರಬೇಕು. ಇದಕ್ಕಾಗಿ ಟಿಕೆಟ್ ವ್ಯವಸ್ಥೆಯನ್ನು ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ನೀಡುವುದಾಗಿ ಘೋಷಿಸಿದ್ದಾರೆ. ಟೀಂ ಇಂಡಿಯಾ ಉತ್ತಮ ಪ್ರದರ್ಶನ ಹಾಗೂ ಚಾರುಲತಾ ಅಭಿಮಾನಿಯ ಆರ್ಶಿವಾದದಿಂದ ಈ ಬಾರಿಯೂ ಟೀಂ ಇಂಡಿಯಾ ಚಾಂಪಿಯನ್ ಆಗತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಶೇಷ ಅಭಿಮಾನಿ ಚಾರುಲತಾ ಪಟೇಲ್ ಭಾರತೀಯರನ್ನು ಮಾತ್ರವಲ್ಲ, ಸ್ವತಃ ಟೀಂ ಇಂಡಿಯಾ ಕ್ರಿಕೆಟಿಗರ ಗಮನಸೆಳೆದಿದ್ದಾರೆ. ಬರ್ಮಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ಕುಳಿತು ಉತ್ಸಾಹದಲ್ಲಿ ಭಾರತ ತಂಡವನ್ನು ಚಾರುಲತಾ ಬೆಂಬಲಿಸಿದ್ದರು. ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಅಭಿಮಾನಿ ಚಾರುಲತಾ ಪಟೇಲ್ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು.