ಬರ್ಮಿಂಗ್‌ಹ್ಯಾಮ್(ಜು.02): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಗೆ ಈ ವಿಶ್ವಕಪ್ ಟೂರ್ನಿ ನಿರೀಕ್ಷಿತ ಯಶಸ್ಸು ತಂದಿಲ್ಲ. ನಿದಾನಗತಿಯ ಬ್ಯಾಟಿಂಗ್, ಸ್ಲಾಗ್ ಓವರ್‌ಗಳಲ್ಲಿ ಉತ್ತಮ ರನ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಲು ವಿಫಲರಾಗುತ್ತಿರುವ ಧೋನಿ ವಿರುದ್ಧ ಕ್ರಿಕೆಟ್ ದಿಗ್ಗಜರೂ ಕೂಡ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಧೋನಿ ಕುರಿತು ಅಭಿಮಾನಿಗಳು ಭಾವುಕರಾಗಿದ್ದಾರೆ. ಕಾರಣ ಧೋನಿ ಮೈದಾನದಲ್ಲಿ ರಕ್ತ ಉಗುಳಿದ ಫೋಟೋ ವೈರಲ್ ಆಗಿದೆ. ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್. ಧೋನಿ ನಿವೃತ್ತಿ ಘೋಷಣೆ?

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೈ ಬೆರಳಿಗೆ ಗಾಯವಾಗಿತ್ತು. ಗಾಯದ ನಡುವೆಯೂ ಧೋನಿ ಬ್ಯಾಟಿಂಗ್ ಮುಂದುವರಿಸಿದ್ದರು. ಧೋನಿ ಕೈಬೆರಳಿನ ಗಾಯದಿಂದ ರಕ್ತ ಜಿನುಗುತ್ತಿತ್ತು. ಹೀಗಾಗಿ ಧೋನಿ ಕೈಬೆರಳನ್ನು ಚೀಪಿ ರಕ್ತ ಉಗುಳಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಧೋನಿ ವೃತ್ತಿಪರತೆ ಹಾಗೂ ದೇಶಕ್ಕಾಗಿ ತಮ್ಮ ನೋವನ್ನೇ ಮರೆತು ಆಡುತ್ತಿದ್ದಾರೆ ಎಂದಿದ್ದಾರೆ.