ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.04]: ಭಾರತ ತಂಡದ ಆಲ್ರೌಂಡರ್‌ ರವೀಂದ್ರ ಜಡೇಜಾರನ್ನು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ ’ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಸದ್ಯಕ್ಕೆ ಏಕದಿನ ಕ್ರಿಕೆಟ್’ನಲ್ಲಿ ರವೀಂದ್ರ ಜಡೇಜಾ ಅದೇ ರೀತಿ ಇದ್ದಾರೆ. ಅವರೊಬ್ಬ ಅರೆಬರೆ ಕ್ರಿಕೆಟಿಗ’ ಎಂದು ಕಾಲೆಳೆದಿದ್ದರು. 

ಕ್ರಿಕೆಟ್ ಬಿಟ್ಟು ರಾಹುಲ್ ಗಾಂಧಿ ಟ್ರೋಲ್ ಮಾಡಿದ ಸಂಜಯ್ ಮಂಜ್ರೇಕರ್!

ಮಂಜ್ರೇಕರ್‌ ಹೇಳಿಕೆಗೆ ಇದೀಗ ಟ್ವಿಟರ್’ನಲ್ಲಿ ಪ್ರತಿಕ್ರಿಯಿಸಿದ ಜಡೇಜಾ, ‘ನಾನು ನಿಮಗಿಂತ ಎರಡು ಪಟ್ಟು ಹೆಚ್ಚು ಕ್ರಿಕೆಟ್‌ ಆಡಿದ್ದೇನೆ. ಇನ್ನೂ ಆಡುತ್ತಿದ್ದೇನೆ. ಸಾಧಕರಿಗೆ ಗೌರವ ನೀಡುವುದರನ್ನು ಮೊದಲು ಕಲಿತುಕೊಳ್ಳಿ. ನಿಮ್ಮ ಮೌಖಿಕ ಅತಿಸಾರವನ್ನು ಸಾಕಷ್ಟು ಕೇಳಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಜಡೇಜಾ ಟ್ವೀಟ್‌ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂಬೈ ಪರ ವಾಲಿದ ಕಮಂಟೇಟರ್ ಸಂಜಯ್‌ಗೆ ಟ್ವಿಟರಿಗರ ತರಾಟೆ!

ರವೀಂದ್ರ ಜಡೇಜಾ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಇದುವರೆಗೂ ಒಂದು ಪಂದ್ಯವನ್ನು ಆಡಿಲ್ಲ. ಆದರೆ ಬದಲಿ ಆಟಗಾರನಾಗಿ ಕ್ಷೇತ್ರ ರಕ್ಷಣೆಯಲ್ಲಿ ತಂಡಕ್ಕೆ ಅಭೂತಪೂರ್ವ ಕಾಣಿಕೆ ನೀಡಿದ್ದಾರೆ. ರವೀಂದ್ರ ಜಡೇಜಾ 151 ಏಕದಿನ ಪಂದ್ಯಗಳನ್ನಾಡಿ 2035 ರನ್ ಬಾರಿಸಿದ್ದಾರೆ. ಜತೆಗೆ ಬೌಲಿಂಗ್’ನಲ್ಲಿ 174 ವಿಕೆಟ್ ಕಬಳಿಸಿದ್ದಾರೆ.

ಇನ್ನು ಸಂಜಯ್ ಮಂಜ್ರೇಕರ್‌ ಭಾರತ ಪರ 74 ಏಕದಿನ ಪಂದ್ಯಗಳನ್ನಾಡಿದ್ದು, 1994 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್’ನಲ್ಲಿ ಕೇವಲ ಒಂದು ವಿಕೆಟ್ ಕಬಳಿಸಿದ್ದಾರೆ. ಈ ಮೊದಲು ಧೋನಿ ಮಂದಗತಿಯ ಬ್ಯಾಟಿಂಗ್ ಬಗ್ಗೆಯೂ ಮಂಜ್ರೇಕರ್‌ ಟೀಕಿಸಲು ಹೋಗಿ ಟ್ವಿಟರಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದಾಗಿದೆ. 

ಒಟ್ಟಿನಲ್ಲಿ ಕೆಲ ಕ್ರಿಕೆಟಿಗರ ಬಗ್ಗೆ ಹಗುರವಾಗಿ ಮಾತನಾಡುವುದರ ಮೂಲಕ ಸಂಜಯ ಮಂಜ್ರೇಕರ್‌ ಸ್ವತಃ ತಾವೇ ಟ್ರೋಲ್‌ಗೆ ಗುರಿಯಾಗುತ್ತಿರುವುದು ಮಾತ್ರ ವಿಪರ್ಯಾಸ.