ಹೈದರಾಬಾದ್(ಮೇ.12): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸದ್ಯ ಕಮಂಟೇಟರ್ ಆಗಿರುವ ಸಂಜಯ್ ಮಂಜ್ರೇಕರ್ ತನ್ನ ವೀಕ್ಷಕ ವಿವರಣೆಗಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಐಪಿಎಲ್ ಟೂರ್ನಿಯಲ್ಲೂ ಮಂಜ್ರೇಕರ್ ವಿವಾದಗಳಿಂದ ಹೊರತಾಗಿಲ್ಲ. 12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಮಂಜ್ರೇಕರ್ ಕಮೆಂಟರಿ ಇದೀಗ ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೆಸ್ಟ್ IPL ಟೀಂ ಪ್ರಕಟಿಸಿದ ಅನಿಲ್ ಕುಂಬ್ಳೆ-ಕೊಹ್ಲಿಗೆ ಕೊಕ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಆರಂಭಿಕ ಕ್ವಿಂಟನ್ ಡಿಕಾಕ್ ಬ್ಯಾಟ್ ನಡೆಸುತ್ತಿದ್ದರು. ಈ ವೇಳೆ ಡಿಕಾಕ್ ಅನಗತ್ಯ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು. ಇದರ ವೀಕ್ಷಕ ವಿವರಣೆ ನೀಡುತ್ತಿದ್ದ ಮಂಜ್ರೇಕರ್, ಡಿಕಾಕ್ ಸ್ವೀಪ್ ಶಾಟ್ ಹೊಡೆಯುತ್ತಿದ್ದಂತೆ, ಮಂಜ್ರೇಕರ್ ಮಂಬೈ ಪರ ಕಮೆಂಟರಿ ನೀಡಿದ್ದಾರೆ. ಡಿಕಾಕ್ ಹಾಗೆ ಮಾಡಬೇಡ, ಮಾಡಬೇಡ ಎಂದು ಮಂಜ್ರೇಕರ್ ಮುಂಬೈ ಪರ ವೀಕ್ಷಕ ವಿವರಣೆ ನೀಡಿದ್ದಾರೆ. ಮಂಜ್ರೇಕರ್ ಕಮೆಂಟರಿಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.